





ಪುತ್ತೂರು: ಬ್ಯಾಂಕ್ ಆಫ್ ಬರೋಡಾದ ಹಿಂದಿದ್ದ ವಿಜಯ ಬ್ಯಾಂಕ್ನ ಪುತ್ತೂರು ಶಾಖೆಯ ನಿವೃತ್ತ ಬ್ಯಾಂಕ್ ಉದ್ಯೋಗಿ ಸೋಮಪ್ಪ ಗೌಡ ಬಡಾವು (75ವ) ಅವರು ಡಿ.7ರಂದು ಬೆಳಗ್ಗೆ ನಿಧನರಾದರು.


ಸೋಮಪ್ಪ ಗೌಡ ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆಯಲ್ಲಿ ಪುತ್ತೂರು ಆದರ್ಶ ಆಸ್ಪತ್ರೆಗೆ ಕರೆತರಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಅವರು ನಿಧನರಾದರು.





ಸೋಮಪ್ಪ ಗೌಡ ಅವರು ವಿಜಯ ಬ್ಯಾಂಕ್ ಪುತ್ತೂರು ಶಾಖೆಯ ನಿವೃತ್ತ ಉದ್ಯೋಗಿಯಾಗಿದ್ದು, ರೋಟರಿ ಕ್ಲಬ್ನಲ್ಲಿ ಸಕ್ರೀಯರಾಗಿದ್ದರು. ಪುತ್ತೂರು ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಭಾಭವನದ ಕಟ್ಟಡದಲ್ಲಿರುವ ಎಸ್ ಯಂ ಟಿ ಶಾಖೆಯ ಸಲಹಾ ಸಮಿತಿ ಸದಸ್ಯರಾಗಿದ್ದರು. ಮೃತರು ಪತ್ನಿ ಲಲಿತಾ, ಪುತ್ರರಾದ ಕಾರ್ತಿಕ್, ಗಣೇಶ್ ಮತ್ತು ಸೊಸೆ ಸರಿತಾ ಕಾರ್ತಿಕ್, ಮೊಮ್ಮಕ್ಕಳನ್ನು ಅಗಲಿದ್ದಾರೆ.









