ಸಮಾಜಕ್ಕೆ ಇದೊಂದು ಅತೀ ಅವಶ್ಯಕವಾದ ಸಂಸ್ಥೆಯಾಗಿದೆ: ಅರುಣ್ ಕುಮಾರ್ ಪುತ್ತಿಲ
ದೀಪದಂತೆ ಸಂಸ್ಥೆಯು ಬೆಳಗುತ್ತಾ ಹೋಗಲಿ: ಕೇಶವ ಅಮೈ
ವ್ಯಾಪಾರದ ಜೊತೆಗೆ ಸಮಾಜಸೇವೆಯನ್ನು ಮೈಗೂಡಿಸಿಕೊಳ್ಳಬೇಕು: ಎಂ.ಪಿ. ಅಬೂಬಕ್ಕರ್
ಪುತ್ತೂರು: ಮುರದಲ್ಲಿ ಎಲ್ಲಾ ಬಗೆಯ ಔಷಧಗಳ ಮಾರಾಟ ಮಳಿಗೆ ಮಾನಸ ಮೆಡಿಕಲ್ ಡಿ.6ರಂದು ಶುಭಾರಂಭಗೊಂಡಿತು. ಸಂಸ್ಥೆಯನ್ನು ಇಂದಿರಮ್ಮ ಶಿವನಗರರವರು ಉದ್ಘಾಟಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ರವರು ಮಾತನಾಡಿ, ಸಮಾಜಕ್ಕೆ ಇದೊಂದು ಅತೀ ಅವಶ್ಯಕವಾದ ಸಂಸ್ಥೆಯಾಗಿದೆ. ಈ ನಿಟ್ಟಿನಲ್ಲಿ ಇಲ್ಲಿ ಇಂದು ಈ ಸಂಸ್ಥೆಯನ್ನು ಉದ್ಘಾಟಿಸಿದ್ದೇವೆ. ಪೇಟೆ ಬೆಳೆಯುತ್ತಿದ್ದಂತೆ ಅಲ್ಲಿ ಇಂತಹ ಸಂಸ್ಥೆಗಳು ಅನಿವಾರ್ಯವಾಗಿದ್ದು, ಈ ನಿಟ್ಟಿನಲ್ಲಿ ಆರಂಭಿಸಿರುವ ಸಂಸ್ಥೆ ಇನ್ನಷ್ಟು ಎತ್ತರಕ್ಕೆ ಏರಲಿ ಎಂದರು.
ಎಸ್. ಆರ್.ಕೆ. ಲ್ಯಾಡರ್ಸ್ ನ ಮಾಲಕರಾದ ಕೇಶವ ಅಮೈರವರು ಮಾತನಾಡಿ, ಇಂದಿಲ್ಲಿ ಉರಿಸಿದ ದೀಪದಂತೆ ಸಂಸ್ಥೆಯು ಬೆಳಗುತ್ತಾ ಹೋಗಲಿ. ಉತ್ತಮ ಉದ್ದೇಶವನ್ನು ಇಟ್ಟುಕೊಂಡು ಆರಂಭಿಸಿದ ಸಂಸ್ಥೆಗೆ ಯಶಸ್ಸಾಗಲಿ ಎಂದರು. ಕಟ್ಟಡ ಮಾಲಿಕರಾದ ಎಂ.ಪಿ. ಅಬೂಬಕ್ಕರ್ ರವರು ಮಾತನಾಡಿ, ಇದೀಗಾಗಲೇ ಸಂಸ್ಥೆ ಉದ್ಘಾಟನೆಗೊಂಡಿದೆ. ಇಂದಿನ ಯುವಪೀಳಿಗೆ ವ್ಯಾಪಾರದ ಜೊತೆಗೆ ಸಮಾಜ ಸೇವೆಯನ್ನು ಮೈಗೂಡಿಸಿಕೊಳ್ಳಬೇಕು. ವ್ಯಾಪಾರದಲ್ಲಿ ಬಂದ ಲಾಭದ ಒಂದಂಶವನ್ನು ಸಮಾಜದ ಉನ್ನತಿಗೆ ವಿನಿಯೋಗಿಸುವ ಕೆಲಸ ಎಲ್ಲರಿಂದಲೂ ಆಗಲಿ ಎಂದರು.
ಸಂಸ್ಥೆಯ ಮಾಲಕರ ತಾಯಿ ಮಮತಾ ಆನೆಗುಂಡಿ, ಸಹೋದರ ಅಭಿನವ್ ವೈ.ಟಿ, ಸಹೋದರಿ ಅನುಜ್ಞಾ ವೈ.ಟಿ. ಮೊದಲಾದವರು ಉಪಸ್ಥಿತರಿದ್ದರು.
ಸಂಸ್ಥೆಯ ಮಾಲಕರ ತಂದೆ ಯಧುಶ್ರೀ ಆನೆಗುಂಡಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಸಂಸ್ಥೆಯ ಮಾಲಕ ಅರ್ಜುನ್ ವೈ.ಟಿ. ವಂದಿಸಿದರು.
ಮಿತದರದಲ್ಲಿ ಔಷಧಿಗಳು ಲಭ್ಯ
ನಮ್ಮಲ್ಲಿ ಆಯುರ್ವೇದಿಕ್, ಇಂಗ್ಲೀಷ್ ಮೆಡಿಸಿನ್ಸ್, ವೆಟರ್ನರಿ ಮೆಡಿಸಿನ್, ಸರ್ಜಿಕಲ್ ಐಟಂ ಸ್, ಸೇರಿದಂತೆ ವಿವಿಧ ರೀತಿಯ ಔಷಧಿಗಳು ಹಾಗೂ ಸೌಂದರ್ಯ ವರ್ಧಕಗಳು ಮಿತದರದಲ್ಲಿ ಲಭ್ಯವಿದೆ.
ನೂತನ ಸಂಸ್ಥೆಯನ್ನು ನಾವಿಂದು ಆರಂಭಿಸಿದ್ದೇವೆ, ತಮ್ಮೆಲ್ಲ ಸಹಕಾರವನ್ನು ಕೋರುತ್ತಿದ್ದೇವೆ.
ಅರ್ಜುನ್ ವೈ.ಟಿ.
ಮಾಲಕರು