





ಅಧ್ಯಕ್ಷ: ಅಶ್ವಿನ್ ಪಿದಪಟ್ಲ, ಕಾರ್ಯದರ್ಶಿ: ನಿತಿನ್ ಗೌಡ


ಪುತ್ತೂರು: ಭಾರತೀಯ ಜನತಾ ಪಾರ್ಟಿ ಒಳಮೊಗ್ರು ಶಕ್ತಿಕೇಂದ್ರದ 160 ನೇ ಬೂತ್ ನ ನೂತನ ಪದಾಧಿಕಾರಿಗಳ ಆಯ್ಕೆಯು ದಿನೇಶ್ ಗೌಡ ಪರ್ಪುಂಜ ರವರ ಮನೆಯಲ್ಲಿ ನ.26 ರಂದು ನಡೆಯಿತು.





ಅದ್ಯಕ್ಷರಾಗಿ ಅಶ್ವಿನ್ ಪಿದಪಟ್ಲ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ನಿತಿನ್ ಗೌಡ ಇವರನ್ನು ಆಯ್ಕೆ ಮಾಡಲಾಯಿತು. ಸಮಿತಿ ಸದಸ್ಯರನ್ನಾಗಿ ರಾಜೇಶ್ ಪೂಜಾರಿ ಪಿದಪಟ್ಲ, ಧನುಷ್ ರೈ ಪರ್ಪುಂಜ, ಸುರೇಶ್ ಪೂಜಾರಿ ಪರ್ಪುಂಜ, ನಾಗೇಶ್ ಗೌಡ ಪರ್ಪುಂಜ, ಶ್ರೀಮತಿ ಸುರೇಶ್ ಪರ್ಪುಂಜ, ಸಾವಿತ್ರಿ ಪರ್ಪುಂಜ, ದಿನೇಶ್ ಗೌಡ ಪರ್ಪುಂಜ, ನಾಗೇಶ್ ಗೌಡ ಪರ್ಪುಂಜ, ಕವನ್ ಪರ್ಪುಂಜ, ಕಿಸಾನ್ ಗೌಡರವರುಗಳನ್ನು ಆಯ್ಕೆ ಮಾಡಲಾಯಿತು.
ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯನ್ನು ಒಳಮೊಗ್ರು ಶಕ್ತಿಕೇಂದ್ರದ ಪ್ರಭಾರಿಯಾದ ಯತೀಂದ್ರ ಕೊಚ್ಚಿ ಹಾಗೂ ಸದಸ್ಯತ್ವ ಅಭಿಯಾನದ ಜಿಲ್ಲಾ ಸಹ ಸಂಚಾಲಕರಾದ ನಿತೀಶ್ ಕುಮಾರ್ ಶಾಂತಿವನರವರು ನಡೆಸಿಕೊಟ್ಟರು.
ಈ ಸಂದರ್ಭದಲ್ಲಿ ನೆ.ಮುಡ್ನೂರು ಮಹಾ ಶಕ್ತಿಕೇಂದ್ರದ ಅಧ್ಯಕ್ಷ ರಾಜೇಶ್ ರೈ ಪರ್ಪುಂಜ, ಒಳಮೊಗ್ರು ಶಕ್ತಿಕೇಂದ್ರದ ಅಧ್ಯಕ್ಷ ಎಸ್ ಮಾಧವ ರೈ ಕುಂಬ್ರ ಉಪಸ್ಥಿತರಿದ್ದರು. ನಿಕಟಪೂರ್ವ ಬೂತ್ ಅಧ್ಯಕ್ಷ ರಾಕೇಶ್ ರೈ ಪರ್ಪುಂಜ ಸ್ವಾಗತಿಸಿ, ಪ್ರಮೀಳಾ ಗೌಡ ಪರ್ಪುಂಜ ವಂದಿಸಿದರು.









