ಪುತ್ತೂರು: ಅರಿಯಡ್ಕ ಗ್ರಾಮದ ಕೌಡಿಚ್ಚಾರು ಶ್ರೀ ಕೃಷ್ಣ ಭಜನಾ ಮಂದಿರದಲ್ಲಿ ಅಯ್ಯಪ್ಪ ಸೇವಾ ಸಮಿತಿ ಹಾಗೂ ಶ್ರೀ ಕೃಷ್ಣ ಭಜನಾ ಮಂದಿರದ ಹಿರಿತನದಲ್ಲಿ ಡಿ.20-ಡಿ.21ರಂದು ನಡೆಯಲಿರುವ ಶ್ರೀ ಅಯ್ಯಪ್ಪ ದೀಪೋತ್ಸವದ ಆಮಂತ್ರಣ ಬಿಡುಗಡೆ ಕಾರ್ಯಕ್ರಮ ಕೌಡಿಚ್ಚಾರು ಶ್ರೀ ಕೃಷ್ಣ ಸಭಾಭವನದಲ್ಲಿ ನಡೆಯಿತು.
ಆಮಂತ್ರಣವನ್ನುಬಿಡುಗಡೆ ಮಾಡಿ ಮಾತನಾಡಿದ ಅಯ್ಯಪ್ಪ ಸೇವಾ ಸಮಿತಿಯ ಗೌರವಾಧ್ಯಕ್ಷ ವಾಸು ಪೂಜಾರಿ ಗುಂಡ್ಯಡ್ಕ ಅವರು ,ಶ್ರೀ ಕೃಷ್ಣನ ಸನ್ನಿಧಿಯಲ್ಲಿ ಈ ಬಾರಿ ಅಯ್ಯಪ್ಪ ದೀಪೋತ್ಸವ ನಡೆಯುತ್ತಿರುವುದು ಸಂತಸದ ವಿಚಾರ.ಎಲ್ಲರ ಸಹಕಾರದಿಂದ ಕಾರ್ಯಕ್ರಮ ಯಶಸ್ವಿಯಾಗಲಿ ಎಂದು ಶುಭಹಾರೈಸಿದರು.
ಗ್ರಾಮದೈವದ ಪರಿಚಾರಕರಾದ ಸದಾಶಿವ ಮಣಿಯಾಣಿ ಮಾತನಾಡಿ, ಕೌಡಿಚ್ಚಾರು ಶ್ರೀ ಕೃಷ್ಣ ಭಜನಾ ಮಂದಿರದಲ್ಲಿ ಹಲವು ದಶಕಗಳಿಂದ ಸಾವಿರಾರು ಮಂದಿಗೆ ಅಯ್ಯಪ್ಪ ಮಾಲಾಧಾರಣೆ ಮಾಡಿ ಶಬರಿಮಲೆಗೆ ಕರೆದುಕೊಂಡು ಹೋಗಿರುವ ಬಾಬು ಗುರುಸ್ವಾಮಿ ಎರ್ಕ ಅವರು ಕೆಲ ಸಮಯದ ಹಿಂದೆ ದೈವಾಧೀನರಾಗಿದ್ದು, ಅವರಿಗೆ ಅಯ್ಯಪ್ಪ ದೀಪೋತ್ಸವ ಮಾಡಬೇಕೆಂಬ ಸಂಕಲ್ಪ ಮಾಡಿದ್ದರು.ಇದೀಗ ಅವರ ಬಯಕೆಯನ್ನು ಅವರ ಶಿಷ್ಯಂದಿರು ಊರ ಭಕ್ತರ, ದಾನಿಗಳ ಸಹಕಾರದಿಂದ ಮಾಡಲು ಮುಂದಾಗಿರುವುದು ಗುರುವಿಗೆ ನೀಡುವ ಕಾಣಿಕೆ ಎಂದು ಬಯಸುತ್ತೇವೆ ಎಂದರು.
ಈ ಸಂದರ್ಭದಲ್ಲಿ ಅಯ್ಯಪ್ಪ ಸೇವಾ ಸಮಿತಿಯ ಗೌರವ ಸಲಹೆಗಾರ ಹಾಗೂ ಶ್ರೀ ಕೃಷ್ಣ ಭಜನಾ ಮಂದಿರದ ಕೋಶಾಧಿಕಾರಿ ತಿಲಕ್ ರೈ ಕುತ್ಯಾಡಿ, ಭಜನಾ ಮಂದಿರದ ಪ್ರಧಾನ ಕಾರ್ಯದರ್ಶಿ ದೀಪಕ್ ಕುಲಾಲ್, ಅಯ್ಯಪ್ಪ ಸೇವಾ ಸಮಿತಿಯ ಉಪಾಧ್ಯಕ್ಷರಾದ ಬಾಬು ಗುರುಸ್ವಾಮಿ ಕಲ್ಲಡ್ಕ, ಕೋಶಾಧಿಕಾರಿ ದೇವಿಪ್ರಸಾದ್ ಕೆಮನಡ್ಕ, ಪೆರಿಗೇರಿ ಅಯ್ಯಪ್ಪ ಭಜನಾ ಮಂದಿರದ ಗುರುಸ್ವಾಮಿ ಮೋಹನ್ ಹಾಗೂ ಅಯ್ಯಪ್ಪ ಸೇವಾ ಸಮಿತಿ, ಕೃಷ್ಣ ಭಜನಾ ಮಂದಿರದ ಸದಸ್ಯರು, ಅಯ್ಯಪ್ಪ ವೃತದಾರಿಗಳು ಉಪಸ್ಥಿತರಿದ್ದರು.
ಅಯ್ಯಪ್ಪ ಸೇವಾ ಸಮಿತಿಯ ಅಧ್ಯಕ್ಷ ಬಾಬು ಮಾಸ್ತರ್ ತೆಗ್ಗು ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ಪ್ರವೀಣ್ ಚೆನ್ನಾವರ ವಂದಿಸಿದರು.