ಪುತ್ತೂರು:ಪಾಸ್ ಪೋರ್ಟನ್ನು ಮೂಲ ಪಾಸ್ ಪೋರ್ಟ್ ದಾರರಿಗೆ ನೀಡದೆ ಅಪ್ರಾಮಾಣಿಕತೆ,ನಿರ್ಲಕ್ಷ್ಯತನ ವಹಿಸಿದ್ದ ಆರೋಪದಲ್ಲಿ ವಿಚಾರಣೆ ಎದುರಿಸುತ್ತಿದ್ದ ಪೋಸ್ಟ್ ಮ್ಯಾನ್ ಓರ್ವರನ್ನು ನ್ಯಾಯಾಲಯ ದೋಷಮುಕ್ತಗೊಳಿಸಿದೆ.
2016ರ ಆ.25ರಂದು ಕಬಕ ಗ್ರಾಮದ ಅಂಚೆ ಕಚೇರಿ ಅಧೀನಕ್ಕೆ ಬರುವ ಕೊಡಿಪ್ಪಾಡಿ ಅಂಚೆ ಕಚೇರಿ ಮೂಲಕ ಬಂದಿದ್ದ ಪಾಸ್ ರ್ಪೋಟನ್ನು ಗ್ರಾಮೀಣ ಅಂಚೆ ಸೇವಕ ರಾಧಾಕೃಷ್ಣ ಎಂಬವರು ಮೂಲ ಪಾಸ್ ಪೋರ್ಟ್ ದಾರರಾಗಿದ್ದ ಕಲೆಂಬಿ ದಿ.ಮಹಮ್ಮದ್ ಕುಂಞ ಎಂಬವರ ಮಗ ಸಿದ್ದೀಕ್ ಕೆ.ಎಂಬವರ ಬದಲು ಇನ್ಯಾರೋ ಸಿದ್ದೀಕ್ ಎಂಬವರಿಗೆ ನೀಡಿದ್ದಾಗಿ ಆರೋಪಿಸಿ ಮೂಲ ಪಾಸ್ಪೋರ್ಟ್‌ದಾರ ಸಿದ್ದೀಕ್ ಅವರು ಅಂಚೆ ಅಧೀಕ್ಷಕರಿಗೆ ದೂರು ನೀಡಿದ್ದರು.
ಇಲಾಖಾ ತನಿಖೆ ವೇಳೆ ಆರೋಪಿ ರಾಧಾಕೃಷ್ಣ ಅವರು, ಕೊಡಿಪ್ಪಾಡಿಯಲ್ಲಿ ಸಿದ್ದೀಕ್ ಎಂಬ ಹೆಸರಿನ 13 ಜನ ಇದ್ದು ಅದರ ಪೈಕಿ ಯಾರಿಗೆ ಕೊಟ್ಟಿರುತ್ತೇನೆ ಎಂದು ಗೊತ್ತಿಲ್ಲ ಎಂದು ತಿಳಿಸಿದ್ದರು.ಅವರು ಅಂಚೆ ಇಲಾಖೆಯಿಂದ ಬಂದಪಾಸ್ ಪೋರ್ಟನ್ನು ಮೂಲಪಾಸ್‌ಪೋರ್ಟ್ ದಾರರಿಗೆ ನೀಡದೆ ಆಪ್ರಾಮಾಣಿಕವಾಗಿ, ನಿರ್ಲಕ್ಷ್ಯತನ ವಹಿಸಿರಬಹುದು ಅಥವಾ ನಾಶ ಮಾಡಿರಬಹುದು ಅಥವಾ ಸತ್ಯಸಂಗತಿಯನ್ನು ಮರೆ ಮಾಚಿರಬಹುದು ಎಂದು ಪುತ್ತೂರು ಉಪವಿಭಾಗದ ಸಹಾಯಕ ಅಂಚೆ ಅಧೀಕ್ಷಕ ಚಂದ್ರಶೇಖರ್ ಎಂಬವರು ನೀಡಿದ್ದ ದೂರಿನ ಮೇರೆಗೆ ಆರೋಪಿ ರಾಧಾಕೃಷ್ಣ ಅವರ ವಿರುದ್ದ ಪುತ್ತೂರು ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪಿಯನ್ನು ದೋಷಮುಕ್ತಗೊಳಿಸಿದೆ.ಆರೋಪಿ ಪರ ವಕೀಲರಾದ ಮಾಧವ ಪೂಜಾರಿ, ರಾಕೇಶ್ ಬಲ್ನಾಡು, ಮೋಹಿನಿ ವಾದಿಸಿದ್ದರು.