ಪುತ್ತೂರು: ಪುತ್ತೂರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಇದರ ಬನ್ನೂರು ವಲಯದ ಕೇಪುಳು ಒಕ್ಕೂಟದ ತ್ರೈಮಾಸಿಕ ಸಭೆ ಮತ್ತು ವಾರ್ಷಿಕ ಕ್ರೀಡಾಕೂಟ ಡಿ.8 ರಂದು ಕೇಪುಳು ಒಕ್ಕೂಟದ ಅಧ್ಯಕ್ಷರಾದ ಜಯಾನಂದ ಕೆ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಭಾ ಕಾರ್ಯಕ್ರಮವನ್ನು ಪುತ್ತೂರು ತಾಲೂಕು ಯೋಜನಾಧಿಕಾರಿ ಶಶಿಧರ್ ಉದ್ಘಾಟಿಸಿ ಮಾಹಿತಿ ಮಾರ್ಗದರ್ಶನ ನೀಡಿದರು.ಒಕ್ಕೂಟದ ಸದಸ್ಯರಿಂದ ಕ್ರೀಡಾಕೂಟ ನಡೆದು ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ಈ ಸಂದರ್ಬದಲ್ಲಿ ಒಕ್ಕೂಟದ ಪಧಾಧಿಕಾರಿಗಳು ಸರ್ವ ಸದಸ್ಯರು ಮತ್ತು ವಲಯ ಮೇಲ್ವಿಚಾರಕಿ ಸುನಿತಾ, ಸೇವಾ ಪ್ರತಿನಿಧಿ ವೀಣಾ ಉಪಸ್ಥಿತರಿದ್ದರು. ಒಕ್ಕೂಟದ ಕಾರ್ಯದರ್ಶಿ ಕೆ. ಅಶ್ವಿನಿ ಕಾರ್ಯಕ್ರಮವನ್ನು ನಿರೂಪಿಸಿ, ವಂದಿಸಿದರು.