ಕಡಬ: ಸೌಭಾಗ್ಯ ವಿಕಲಚೇತನರ ಪತ್ತಿನ ಸಹಕಾರ ಸಂಘದ ವಿಜ್ಞಾಪನಾ ಪತ್ರ ಬಿಡುಗಡೆ

0

ಕಡಬ: ಸೌಭಾಗ್ಯ ವಿಕಲಚೇತನರ ಸೇವಾ ಟ್ರಸ್ಟ್ ಪ್ರಾಯೋಜಿತ ಕಡಬ ಎಸ್‌ಆರ್‌ಕೆ ಟವರ‍್ಸ್‌ನಲ್ಲಿರುವ ಸೌಭಾಗ್ಯ ವಿಕಲಚೇತನರ ಪತ್ತಿನ ಸಹಕಾರ ಸಂಘದಿಂದ ಕಡಬದಲ್ಲಿ ನಿರ್ಮಾಣಗೊಳ್ಳಲಿರುವ ಸೌಭಾಗ್ಯ ಸಹಕಾರ ಸೌಧದ ವಿಜ್ಞಾಪನೆ ಪತ್ರವನ್ನು ನ.30ರಂದು ಕಡಬ ತಾ.ಪಂ.ನಲ್ಲಿ ನಡೆದ ಗ್ಯಾರಂಟಿ ಅನುಷ್ಠಾನ ಕಚೇರಿಯ ಉದ್ಘಾಟನೆ ಸಮಾರಂಭದಲ್ಲಿ ಬಿಡುಗಡೆಗೊಳಿಸಲಾಯಿತು.
ಸಂಘದ ಸ್ವಂತ ಕಚೇರಿಗೆ ಕಡಬದಲ್ಲಿ ನಿವೇಶನ ಖರೀದಿಸಿದ್ದು ಈ ನಿವೇಶನದಲ್ಲಿ ಸುಮಾರು 6 ಕೋಟಿ ರೂ.ವೆಚ್ಚದಲ್ಲಿ ಸೌಭಾಗ್ಯ ಸಹಕಾರಿ ಸೌಧ ನಿರ್ಮಿಸಿ 2026ರ ಅ.21ರಂದು ಉದ್ಘಾಟಿಸಲು ಸಂಘದ ವಾರ್ಷಿಕ ಮಹಾಸಭೆಯಲ್ಲಿ ನಿರ್ಣಯಿಸಲಾಗಿದೆ. ಸರಕಾರದ ಅನುದಾನ ಮತ್ತು ದಾನಿಗಳ ಸಹಕಾರದಿಂದ ಸಹಕಾರಿ ಸೌಧ ನಿರ್ಮಾಣವಾಗಲಿದೆ. ಈ ನಿಟ್ಟಿನಲ್ಲಿ ವಿಜ್ಞಾಪನೆ ಪತ್ರ ತಯಾರಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಬಾಲಚಂದ್ರ ಎಚ್., ಅವರು ಸಭೆಗೆ ತಿಳಿಸಿದರು. ಸಮಾರಂಭದಲ್ಲಿ ಹಲವು ಗಣ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here