ಪುತ್ತೂರು: ಜಡೆಕಲ್ಲು – ಬೆದ್ರಾಳ ಬಿಜೆಪಿ 136ನೇ ಬೂತ್ ಸಮಿತಿ ಅಧ್ಯಕ್ಷರಾಗಿ ಮನೋಜ್ ಶೆಣೈ ಮತ್ತು ಕಾರ್ಯದರ್ಶಿ ಹರ್ಷಿತ್ ಕುಲಾಲ್ ಅವರು ಆಯ್ಕೆಗೊಂಡಿದ್ದಾರೆ.
ಡಿ.8ರಂದು ಜಿಡೆಕಲ್ಲು ಆರ್ಯಮುಗೇರು ಮನೋಜ್ ಶೆಣೈ ಅವರ ಮನೆಯಲ್ಲಿ ನಡೆದ ಬೂತ್ ಸಮಿತಿ ಸಭೆಯಲ್ಲಿ ಈ ಆಯ್ಕೆ ಪ್ರಕ್ರಿಯೆ ನಡೆದಿದೆ. ಬಿಜೆಪಿ ನಗರ ಮಂಡಲದ ಅಧ್ಯಕ್ಷ ಶಿವಕುಮಾರ್ ಕಲ್ಲಿಮಾರ್ ಅವರು ಜವಾಬ್ದಾರಿ ಪತ್ರವನ್ನು ಮನೋಜ್ ಶೆಣೈ ಅವರಿಗೆ ಹಸ್ತಾಂತರಿಸಿದರು. ಲಾಭಾರ್ತಿ ಪ್ರಮುಖ್ ಆಗಿ ಹರೀಶ್ ಬಂಗೇರ ರಾಗಿದಕುಮೇರು, ಬಿಎಲ್‌ಎ 2 ಪ್ರಮುಖ್ ಆಗಿ ಗಣೇಶ್ ಆಚಾರ್ಯ ಬೆದ್ರಾಳ, ವಾಟ್ಸಪ್ ಪ್ರಮುಖ್ ಆಗಿ ಕಿರಣ್ ಕುಮಾರ್, ಮನ್ ಕಿ ಬಾತ್ ಪ್ರಮುಖ್ ಆಗಿ ಪ್ರಕಾಶ್ ಆರ್ಯಮುಗೇರು, ಸದಸ್ಯರಾಗಿ ರೋಹಿಣಿ ರಾಗಿದಕುಮೇರು, ಭವ್ಯ ಪ್ರಕಾಶ್, ಹರಿಣಿ ಭಂಡಾರಿ, ಚಂದ್ರಶೇಖರ ರೈ ಜಿಡೆಕಲ್ಲು, ನಾರಾಯಣ ನಾಯ್ಕ್ ಆರ್ಯಮುಗೇರು, ನಾಗೇಶ್ ಎಲಿಕ ಅವರನ್ನು ಆಯ್ಕೆ ಮಾಡಲಾಯಿತು. ಈ ಸಂದರ್ಭ ಬಿಜೆಪಿ ನಗರ ಮಂಡಲದ ಪ್ರಧಾನ ಕಾರ್ಯದರ್ಶಿಗಳಾದ ನಾಗೇಶ್ ಪ್ರಭು, ಅನಿಲ್ ತೆಂಕಿಲ, ಉಪಾಧ್ಯಕ್ಷ ಯುವರಾಜ್ ಪೆರಿಯತ್ತೋಡಿ, ಮಹಾಶಕ್ತಿಕೇಂದ್ರದ ಅಧ್ಯಕ್ಷೆ ದೀಕ್ಷಾ ಪೈ, ಶಕ್ತಿ ಕೇಂದ್ರದ ಪ್ರಮುಖರು ಸಹಿತ ಕಾರ್ಯಕರ್ತರು ಉಪಸ್ಥಿತರಿದ್ದರು.
Home ಇತ್ತೀಚಿನ ಸುದ್ದಿಗಳು ಜಿಡೆಕಲ್ಲು- ಬೆದ್ರಾಳ ಬಿಜೆಪಿ ಬೂತ್ ಸಮಿತಿ ಅಧ್ಯಕ್ಷರಾಗಿ ಮನೋಜ್ ಶೆಣೈ, ಕಾರ್ಯದರ್ಶಿ ಹರ್ಷಿತ್ ಕುಲಾಲ್ ಆಯ್ಕೆ