ರಾಜ್ಯಮಟ್ಟದ ಕಣಾದ ವಿಜ್ಞಾನ ಸಂಶೋಧನಾ ಸ್ಪರ್ಧೆ: ಸರಸ್ವತಿ ವಿದ್ಯಾ ಮಂದಿರಕ್ಕೆ ಸಮಗ್ರ ಪ್ರಶಸ್ತಿ

0

puttur: ” ರಾಷ್ಟ್ರೀಯ ವೈಮಾಂತರಿಕ್ಷ ಪ್ರಯೋಗ ಶಾಲೆಗಳು (NAL) “ಬೆಂಗಳೂರು ಇವರು ಹೈಸ್ಕೂಲ್ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ರಾಜ್ಯಮಟ್ಟದ ಕಣಾದ” ಕನ್ನಡ ವಿಜ್ಞಾನ ಪ್ರಬಂಧ ಸ್ಪರ್ಧೆಯಲ್ಲಿ ನರಿಮೊಗರು ಪುರುಷರಕಟ್ಟೆ ಸರಸ್ವತಿ ವಿದ್ಯಾ ಮಂದಿರ ಸಮಗ್ರ ಪ್ರಶಸ್ತಿಯನ್ನು ಪಡೆದಿದ್ದಾರೆ. ಒಟ್ಟು ಹನ್ನೆರಡು ವಿದ್ಯಾರ್ಥಿಗಳು ವಿವಿಧ ವಿಷಯಗಳ ಸಂಶೋಧನಾ ಪ್ರಬಂಧ ಮಂಡಿಸಿರುತ್ತಾರೆ.


” ಕಡಲ ನೀರಿನಿಂದ ಕುಡಿಯುವ ನೀರು ಪಡೆಯಲು ಸಹಾಯಕ ತಂತ್ರಜ್ಞಾನಗಳು ” ಎಂಬ ಪ್ರಬಂಧದಲ್ಲಿ 10ನೇ ತರಗತಿಯ ರಿಷಿ ಭಾರದ್ವಾಜ್, 8ನೇ ತರಗತಿಯ ಧನ್ವಿ ಸುಧೀರ್ ಪ್ರಥಮ ಸ್ಥಾನ, 10ನೇ ತರಗತಿಯ ಅನಘ ಲಕ್ಷ್ಮಿ, 8ನೇ ತರಗತಿಯ ಶರತ್ .ಎಸ್ ದ್ವಿತೀಯ ಸ್ಥಾನ, 10ನೇ ತರಗತಿಯ ಪ್ರತೀಕ್ಷಾ. ಆರ್.ಎಸ್ ಇವರು ತೃತೀಯ ಸ್ಥಾನ ಪಡೆದಿದ್ದಾರೆ. ” ಹಣ್ಣು ,ತರಕಾರಿ, ಧಾನ್ಯಗಳ ಸಂರಕ್ಷಣಾ ವಿಧಾನಗಳಲ್ಲಿ ಪ್ರಗತಿ ” ಎಂಬ ಪ್ರಬಂಧ ವಿಷಯದಲ್ಲಿ 9ನೇ ತರಗತಿಯ ಮೋಕ್ಷಿತ್ ವಿ.ಬಿ ಪ್ರಥಮ ಸ್ಥಾನ, 8ನೇ ತರಗತಿಯ ದೀಪಿಕಾ , 10ನೇ ತರಗತಿಯ ಅಚಿಂತ್ಯ ಉಂಗ್ರುಪುಳಿತ್ತಾಯ ದ್ವಿತೀಯ, 10ನೇ ತರಗತಿಯ ಲಿಖಿತ ನಾಯಕ್ .ಎನ್ ತೃತೀಯ ಸ್ಥಾನ ಪಡೆದಿದ್ದಾರೆ .” ಹಿಮ ಪದರ ರಾಹಿತ್ಯಕ್ಕಾಗಿ ( ಡಿಐಸಿಂಗ್ ) ವೈಮಾನಿಕ ಕ್ಷೇತ್ರದಲ್ಲಿ ಹೊಚ್ಚ ಹೊಸ ತಂತ್ರಜ್ಞಾನಗಳು” ಎಂಬ ಪ್ರಬಂಧ ಸ್ಪರ್ಧೆಯಲ್ಲಿ 10ನೇ ತರಗತಿಯ ಯಶ್ವಿನ್.ಎಂ ,8ನೇ ತರಗತಿಯ ಧನುಷ. ಟಿ ಪ್ರಥಮ ಸ್ಥಾನ ,8ನೇ ತರಗತಿಯ ಪೂಜನಾ . ಜೆ.ಎಸ್.ತೃತೀಯ ಸ್ಥಾನ ಪಡೆದಿದ್ದಾರೆ. ವಿಜೇತರಾದ ವಿದ್ಯಾರ್ಥಿಗಳು ರಾಷ್ಟ್ರೀಯ ವೈ ಮಾಂತರಿಕ್ಷ ಪ್ರಯೋಗ ಶಾಲೆಗಳು ಬೆಂಗಳೂರು ಇಲ್ಲಿ ನಡೆದ ಸಮಾರಂಭದಲ್ಲಿ ಭಾಗವಹಿಸಿ ಪ್ರಶಸ್ತಿ ಪತ್ರ, ನಗದು ಬಹುಮಾನ ಹಾಗೂ ಸ್ಮರಣಿಕೆಗಳನ್ನು ಪಡೆದುಕೊಂಡಿದ್ದಾರೆ. ಸರಸ್ವತಿ ವಿದ್ಯಾ ಮಂದಿರದ ಆಡಳಿತ ಮಂಡಳಿ ಅಧ್ಯಕ್ಷರಾದ ಅವಿನಾಶ್ ಕೊಡಂಕಿರಿಯವರ ಮಾರ್ಗದರ್ಶನದಲ್ಲಿ, ಮುಖ್ಯ ಗುರು ದಿವ್ಯಾ ಇವರು ವಿದ್ಯಾರ್ಥಿಗಳಿಗೆ ತರಬೇತಿ ನೀಡಿರುತ್ತಾರೆ.

LEAVE A REPLY

Please enter your comment!
Please enter your name here