ವಿಸ್ತಾರಗೊಂಡ ರಾಯಲ್ ಫ್ಲೋರಿಸ್ಟ್ & ಇವೆಂಟ್ಸ್ ಅಲಂಕಾರಿಕ ಮಳಿಗೆ ಏಳ್ಮುಡಿಯಲ್ಲಿ ಶುಭಾರಂಭ

0

ಪುತ್ತೂರು: ಮದುವೆ ಹಾಗೂ ಇನ್ನಿತರ ಶುಭ ಸಮಾರಂಭಗಳಿಗೆ ಸರ್ವ ರೀತಿಯ ಅಲಂಕಾರವನ್ನು ಪೂರೈಸುತ್ತಾ ಬಂದಿರುವ ರಾಯಲ್ ಫ್ಲೋರಿಸ್ಟ್ ಆ್ಯಂಡ್ ಇವೆಂಟ್ಸ್ ಸಂಸ್ಥೆಯು ಕೋರ್ಟ್ ರಸ್ತೆಯ ಮಾಯಿದೆ ದೇವುಸ್ ಚರ್ಚ್ ಬಿಲ್ಡಿಂಗ್‌ನಲ್ಲಿ ಕಾರ್ಯಾಚರಿಸುತ್ತಿದ್ದು, ಇದೀಗ ಗ್ರಾಹಕರ ಅನುಕೂಲತೆಗೋಸ್ಕರ ಏಳ್ಮುಡಿಯಲ್ಲಿನ ಡೇನಿಯಲ್ ಆರ್ಕೇಡ್‌ನಲ್ಲಿ ಡಿ.9ರಂದು ಸುಸಜ್ಜಿತವಾಗಿ ಲೋಕಾರ್ಪಣೆಗೊಂಡಿತು.


 

ರೋಯಲ್ ಫ್ಲೋರಿಸ್ಟ್ ಮತ್ತು ಇವೆಂಟ್ಸ್ ಮಾಲಕ ಅನಿಲ್ ಡಿ’ಸೋಜರವರ ತಂದೆ ಲಿಯೋ ಡಿ’ಸೋಜ ಹಾಗೂ ತಾಯಿ ಮಾಗ್ದೆಲಿನ್ ಡಿ’ಸೋಜರವರು ರಿಬ್ಬನ್ ಕತ್ತರಿಸುವ ಮೂಲಕ ಉದ್ಘಾಟಿಸಿ ಶುಭ ಹಾರೈಸಿದರು.

ಮಾಯಿದೆ ದೇವುಸ್ ಚರ್ಚ್ ಪ್ರಧಾನ ಧರ್ಮಗುರು ವಂ|ಲಾರೆನ್ಸ್ ಮಸ್ಕರೇನ್ಹಸ್‌ರವರು ನೂತನ ಶಾಖೆಯನ್ನು ಆಶೀರ್ವಚಿಸಿ, ಪವಿತ್ರ ಜಲ ಸಿಂಪಡಿಸಿ ಮಾತನಾಡಿ, ದೇವರು ಪ್ರತಿಯೋರ್ವನಿಗೂ ವಿವಿಧ ಪ್ರತಿಭೆಗಳನ್ನು ಕರುಣಿಸಿದ್ದಾರೆ. ಯಾವುದೇ ಉದ್ಯಮ ಯಶಸ್ವಿಯಾಗಬೇಕಾದರೆ ಅಲ್ಲಿ ಗುಣಮಟ್ಟದ ವಸ್ತುಗಳು, ಉತ್ತಮ ಸೇವಾ ಮನೋಭಾವನೆ ಇದ್ದಾಗ ಮಾತ್ರ ಸಾಧ್ಯ ಮಾತ್ರವಲ್ಲ ಗ್ರಾಹಕರ ಪ್ರೀತಿಯನ್ನು ಸಂಪಾದಿಸಲು ಸಾಧ್ಯವಾಗುತ್ತದೆ ಎಂದು ಹೇಳಿ ಶುಭ ಹಾರೈಸಿದರು. 

ಪುತ್ತೂರು ಎಸ್.ಐ ಆಂಜನೇಯ ರೆಡ್ಡಿ, ಮಾಯಿದೆ ದೇವುಸ್ ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ಜೆರಾಲ್ಡ್ ಡಿ’ಕೋಸ್ಟ, ಮಾಯಿದೆ ದೇವುಸ್ ಚರ್ಚ್ ನ ಪದವು ವಾಳೆಯ ಗುರಿಕಾರ ಬೊನವೆಂಚರ್ ಡಿ’ಸೋಜ, ಫಿಲೋಮಿನಾ ಕಾಲೇಜು ಬಳಿಯ ಸೋಜಾ ಕಂಪ್ಯೂಟರ್ಸ್ ಮಾಲಕ ಸುನಿಲ್ ಡಿ’ಸೋಜ, ರೋಯಲ್ ಫ್ಲೋರಿಸ್ಟ್ ಮತ್ತು ಇವೆಂಟ್ಸ್ ನ ಮಾಲಕ ಅನಿಲ್ ಡಿ’ಸೋಜರವರ ಕುಟುಂಬದ ಸದಸ್ಯರು, ಧರ್ಮಭಗಿನಿಯರ ಸಹಿತ ಹಲವರು ಉಪಸ್ಥಿತರಿದ್ದು ಶುಭ ಹಾರೈಸಿದರು.

ಗ್ರಾಹಕ ಬಂಧುಗಳ ಪ್ರೋತ್ಸಾಹ ಅಗತ್ಯ..

ನಮ್ಮ ಸಂಸ್ಥೆಯಲ್ಲಿ ಮದುವೆ ಡೆಕೋರೇಶನ್, ಬಲೂನ್ ಡೆಕೋರೇಶನ್, ಕಾರ್ ಡೆಕೋರೇಶನ್, ಹುಟ್ಟುಹಬ್ಬದ ಇವೆಂಟ್ಸ್, ಪುಷ್ಪಗುಚ್ಚಗಳು, ಹೂವುಗಳ ವ್ಯವಸ್ಥೆ, ಕೆಟರಿಂಗ್ ವ್ಯವಸ್ಥೆ, ಕಾರ್ಯಕ್ರಮದ ಸ್ಥಳ ನಿರ್ವಹಣೆ ಮುಂತಾದ ವ್ಯವಸ್ಥೆಗಳನ್ನು ಸಂಸ್ಥೆಯು ನಿರ್ವಹಿಸುತ್ತಾ ಬಂದಿದ್ದು, ಇದೀಗ ಗ್ರಾಹಕರ ಅನುಕೂಲತೆಗೋಸ್ಕರ ಹೆಚ್ಚಿನ ಪಾರ್ಕಿಂಗ್ ವ್ಯವಸ್ಥೆಯನ್ನು ಹೊಂದಲು ಈ ಭಾಗದಲ್ಲಿ ಮಳಿಗೆಯನ್ನು ಆರಂಭಿಸಿದ್ದೇವೆ. ಈ ಹಿಂದೆಯೂ ಗ್ರಾಹಕ ಬಂಧುಗಳು ನಮಗೆ ಬಹಳಷ್ಟು ಪ್ರೋತ್ಸಾಹ ನೀಡಿದ್ದಾರೆ, ಮುಂದಿನ ದಿನಗಳಲ್ಲೂ ಗ್ರಾಹಕರ ತುಂಬು ಹೃದಯದ ಪ್ರೋತ್ಸಾಹ ಬೇಕಾಗಿದೆ. ಹೆಚ್ಚಿನ ಮಾಹಿತಿಗಾಗಿ 8197807116, 9482507116 ನಂಬರಿಗೆ ಸಂಪರ್ಕಿಸಬಹುದಾಗಿದೆ. 
-ಅನಿಲ್ ಡಿ’ಸೋಜ, ಮಾಲಕರು, ರೋಯಲ್ ಫ್ಲೋರಿಸ್ಟ್ ಮತ್ತು ಇವೆಂಟ್ಸ್

ರೋಯಲ್ ಸೆಲ್ಫಿ ಪಾಯಿಂಟ್..
ಆಲಂಕಾರಿಕ ಮಳಿಗೆಯಾಗಿರುವ ಈ ರೋಯಲ್ ಫ್ಲೋರಿಸ್ಟ್ ಮತ್ತು ಇವೆಂಟ್ಸ್ ಸಂಸ್ಥೆಯು ಮದುವೆ ಹಾಗೂ ಇನ್ನಿತರ ಶುಭ ಸಮಾರಂಭಗಳಿಗೆ ವಿಶೇಷವಾದ, ವೈಶಿಷ್ಟ್ಯತೆಪೂರ್ಣವಾದ ಅಲಂಕಾರವನ್ನು ಮಾಡಿರುತ್ತಾರೆ. ಇದೀಗ ವಿಸ್ತರಿತ ಸಂಸ್ಥೆಯ ಉದ್ಘಾಟನೆ ಪ್ರಯುಕ್ತ ಮಳಿಗೆಯ ಪಕ್ಕದಲ್ಲೇ

LEAVE A REPLY

Please enter your comment!
Please enter your name here