ಪುತ್ತೂರು : ಪೂರ್ವಿ ಬಿ ಎಸ್ ಬಂಬಿಲ ಮೀನ ಕೊಳೆಂಜಿ ಇವರಿಗೆ ದ. 7 ರಂದು ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದ ಕನ್ನಡ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಗೀತ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿರುವುದಕ್ಕೆ “ಕರುನಾಡ ಭೂಷಣ ರಾಷ್ಟ್ರೀಯ ಪ್ರಶಸ್ತಿ’ ಯನ್ನು ನೀಡಿ ಗೌರವಿಸಲಾಯಿತು.
ಇವರು ಮಂಗಳೂರಿನ ಖಾಸಗಿ ಸ್ಕೂಲ್ನಲ್ಲಿ 10ನೇ ತರಗತಿ ವ್ಯಾಸಂಗ ಮಾಡುತ್ತಿದ್ದಾರೆ. ಸಂಗೀತ ಕ್ಷೇತ್ರದ ವಿದ್ಯಾರ್ಥಿಯಾಗಿದ್ದು ಮಂಗಳೂರಿನ ಯುನಿವರ್ಸಿಟಿಯ “ಕನಕ ಪ್ರಶಸ್ತಿ, ಅದಲ್ಲದೆ ಭಗತ್ ಸಿಂಗ್ ಪ್ರತಿಷ್ಠಾನದ ನಾನ “ಗಾನಂ ವೇಷಂ ಪ್ರಶಸ್ತಿ”, “ಪರಂಪರ ಕಲ್ಚರಲ್ ಫೌಂಡೇಶನ್ ರಿಜಿಸ್ಟರ್” ಬೆಂಗಳೂರು ಇವರು ನಡೆಸಿದ ದೇಶಭಕ್ತಿ ಗೀತೆಗಳ ವಾಚನ ಸ್ಪರ್ಧೆಯಲ್ಲಿ “ರಾಜ್ಯಮಟ್ಟದ ಪುರಸ್ಕಾರ”ವನ್ನು ಪಡೆದಿರುತ್ತಾರೆ.
ಸ್ಕೂಲ್ ಮಟ್ಟದ, ತಾಲೂಕು ಮಟ್ಟದ, ಜಿಲ್ಲಾಮಟ್ಟದ, ಪ್ರತಿಭಾ ಕಾರಂಜಿಯಲ್ಲಿ ಪ್ರಥಮ ಮತ್ತು ದ್ವಿತೀಯ ಸ್ಥಾನವನ್ನು ಪಡೆಯುತ್ತಾ ಬಂದಿದ್ದು ಭಕ್ತಿ ಗೀತೆ ಭಜನೆಗಳ ಹಾಗೂ ಭಾವಗೀತೆ, ಜಾನಪದ ಗೀತೆಗಳಲ್ಲಿ ಜಿಲ್ಲಾಮಟ್ಟದ ಪ್ರಥಮ ಮತ್ತು ದ್ವಿತೀಯ ಸ್ಥಾನಗಳನ್ನು ಗಳಿಸಿದ್ದಾರೆ. ಇವರು ಸವಣೂರು ಸಮೀಪದ ಬಂಬಿಲ ಮೀನಕೊಳಂಜಿ ಶೇಷಪ್ಪ ಮತ್ತು ನಾಗರತ್ನ ಕೆಎಸ್ ಇವರ ಪುತ್ರಿಯಾಗಿದ್ದು ,ಮಂಗಳೂರಿನ ಅತ್ತಾವರದಲ್ಲಿ ವಾಸವಾಗಿದ್ದಾರೆ.