ಪುತ್ತೂರು: ಕೆಮ್ಮಿಂಜೆ ಶ್ರೀರಾಮ ಭಜನಾ ಮಂದಿರ ಟ್ರಸ್ಟ್ ಇದರ 61ನೇ ವರ್ಷದ ಭಜನಾ ವಾರ್ಷಿಕೋತ್ಸವ ಕೆಮ್ಮಿಂಜೆ ಶ್ರೀರಾಮ ಭಜನಾ ಮಂದಿರದಲ್ಲಿ ಡಿ.6 ಮತ್ತು 7ರಂದು ನಡೆಯಿತು.
ಡಿ.6ರಂದು ಬೆಳಿಗ್ಗೆ ಗಣಪತಿ ಹೋಮ, ಸಂಜೆ ಕೆಮ್ಮಿಂಜೆ ಲಲಿತ ಸಹಸ್ರನಾಮ ಮಂಡಳಿ ಇವರಿಂದ ಲಲಿತ ಸಹಸ್ರನಾಮ ಪಠಣ, ರಾತ್ರಿ 11.30ಕ್ಕೆ ಶ್ರೀಷಣ್ಮುಖ ಸುಬ್ರಹ್ಮಣ್ಯ ಮತ್ತು ಶ್ರೀಮಹಾವಿಷ್ಣು ದೇವರಿಗೆ ಕಟ್ಟೆಪೂಜೆ, ಮಧ್ಯಾಹ್ನ ಮಹಾಪೂಜೆ, ಮಂಗಳಾರತಿ, ದೀಪಸ್ತಂಭನ, ಪ್ರಸಾದ ವಿತರಣೆ ನಡೆಯಿತು.
ಪುತ್ತೂರು ಶ್ರೀರಾಮಕ್ಷತ್ರಿಯ ಸೇವಾ ಸಂಘದ ಅಧ್ಯಕ್ಷ ಸುರೇಶ್ ಕುಮಾರ್ ಕೆಮ್ಮಿಂಜೆ, ಶ್ರೀರಾಮ ಭಜನಾ ಮಂದಿರದ ಗೌರವಾಧ್ಯಕ್ಷ ವಿ.ಶ್ಯಾಮಣ್ಣ ಮೊಟ್ಟೆತ್ತಡ್ಕ, ಅಧ್ಯಕ್ಷ ಚಂದ್ರಶೇಖರ ಕುದುರಮನೆ, ಗೌರವ ಸಲಹೆಗಾರ ಭಾಸ್ಕರ ರಾವ್ ಕೆ., ಕಾರ್ಯದರ್ಶಿ ಅರುಣ್ ಕುಮಾರ್ ಅಲಂಕಾರ್, ಕೋಶಾಧಿಕಾರಿ ವಿಜಯಲಕ್ಷ್ಮೀ ಅತ್ತಾಳ, ಲೆಕ್ಕಪರಿಶೋಧಕ ಬಾಲಚಂದ್ರ ಮೊಟ್ಟೆತ್ತಡ್ಕ, ಸದಸ್ಯರಾದ ದಯಾನಂದ ಅತ್ತಾಳ, ಚಂದ್ರಹಾಸ ದರ್ಬೆ, ಸತೀಶ ರಾವ್ ಬಲ್ನಾಡು, ಚಂದ್ರಶೇಖರ ಮದಕ, ನಯನಶಶಿರಾಜ್, ಪ್ರೇಮ ಕಲ್ಲಾರೆ, ಗೀತಾ ಅತ್ತಾಳ, ವಿದ್ಯಾ ದರ್ಬೆ, ಸುಕನ್ಯಾ ಮೋಹನ್ರಾಜ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.