ಶಿವಂ ಬಿಸಿನೆಸ್ ವೆಂಚರ್‌ರವರ ದ್ವಿತೀಯ ಸಂಸ್ಥೆ ‘ಈಜ್ಹಿ ವಾಕ್’ ಪಾದರಕ್ಷೆ ಮಳಿಗೆ ಬೊಳುವಾರಿನಲ್ಲಿ ಶುಭಾರಂಭ

0

ಪುತ್ತೂರು: ಎಲ್ಲಾ ವಯೋಮಾನದವರಿಗೂ ಒಪ್ಪುವ, ವಿವಿಧ ವಿನ್ಯಾಸದ, ದೀರ್ಘ ಬಾಳಿಕೆಯ ಪಾದರಕ್ಷೆಗಳ ಬೃಹತ್ ಸಂಗ್ರಹಗಳ ಮಳಿಗೆ, ಶಿವಂ ಬಿಸಿನೆಸ್ ವೆಂಚರ್‌ರವರ 2ನೇ ಸಂಸ್ಥೆ ‘ಈಜ್ಹಿ ವಾಕ್’ ಚಪ್ಪಲ್ ಮಳಿಗೆ ಡಿ.11ರಂದು ಬೊಳುವಾರು ಶ್ರೀದುರ್ಗಾ ಕಾಂಪ್ಲೆಕ್ಸ್‌ನಲ್ಲಿ ಶುಭಾರಂಭಗೊಂಡಿತು.


ಪುತ್ತೂರು ನಗರಸಭಾ ಅಧ್ಯಕ್ಷೆ ಲೀಲಾವತಿ ಅಣ್ಣು ನಾಯ್ಕ ದೀಪ ಬೆಳಗಿಸಿ ಸಂಸ್ಥೆಯನ್ನು ಉದ್ಘಾಟಿಸಿ ಮಾತನಾಡಿ ಪುತ್ತೂರಲ್ಲಿ ಆರಂಭಿಸಿದ ಸಂಸ್ಥೆ ಹತ್ತೂರಲ್ಲಿ ಬೆಳಗಲಿ. ಶ್ರೀಮಹಾಲಿಂಗೇಶ್ವರ ದೇವರ ಆಶೀರ್ವಾದ ಸಂಸ್ಥೆಗೆ ಇರಲಿ ಎಂದು ಹೇಳಿ ಶುಭಹಾರೈಸಿದರು.


ಮಾಜಿ ಶಾಸಕ ಸಂಜೀವ ಮಠಂದೂರು ಮಾತನಾಡಿ ಪಾದರಕ್ಷೆಗೆ ತನ್ನದೆ ಆದ ಮಹತ್ವವಿದೆ. ರಾಮಾಯಣದಲ್ಲಿ ಕೂಡ ಪಾದುಕೆಯನ್ನು ಇಟ್ಟು ರಾಜ್ಯಾಭಾರ ಮಾಡಿದ ಉದಾಹರಣೆ ಇದೆ. ಪಾದಗಳಿಗೆ ರಕ್ಷಣೆ ನೀಡುವುದು ಪಾದರಕ್ಷೆಯ ಕೆಲಸವಾಗಿದೆ. ಪಾದರಕ್ಷೆ ಆರೋಗ್ಯವನ್ನು ನಿರ್ಧರಿಸುತ್ತದೆ. ಅಂದ ಚಂದದ, ಎಲ್ಲಾ ವಯೋಮನಾದವರಿಗೂ ಹೊಸ ವಿನ್ಯಾಸ ಪಾದರಕ್ಷೆಗಳನ್ನು ಪೂರೈಸುವ ಕಾರ್ಯವನ್ನು ಶಿವಂ ವೆಂಚರ್ ಮಾಡುತ್ತಿದೆ ಎಂದು ಹೇಳಿ ಶುಭಹಾರೈಸಿದರು.


ಪುತ್ತೂರು ವರ್ತಕ ಸಂಘದ ಅಧ್ಯಕ್ಷ ವಾಮನ ಪೈ ಮಾತನಾಡಿ ಹಿಂದೂ ಧರ್ಮದಲ್ಲಿ ಚಪ್ಪಲ್ ಮಾಡುವ ವರ್ಗವೇ ಇತ್ತು. ಅವರು ಮಾಡಿಕೊಡುವ ಚಪ್ಪಲ್‌ನ್ನು ಖರೀದಿಸಿ ವ್ಯಾಪಾರ ಮಾಡುವ ವರ್ಗ ಇನ್ನೊಂದು ಇತ್ತು. ಹ್ಯಾಂಡ್ ಮೇಡ್ ಚಪ್ಪಲ್‌ಗೆ ಆದ್ಯತೆ ನೀಡಿ. ಚಪ್ಪಲ್ ಹೊಲಿಯುವವರನ್ನು ಪ್ರೋತ್ಸಾಹ ಮಾಡಬೇಕು. ಈ ಮೂಲಕ ಅವರಿಗೆ ಕೃತಜ್ಞತೆ ಸಲ್ಲಿಸುವ ಕಾರ್ಯ ಆಗಬೇಕು. ಪುತ್ತೂರು ಸುಳ್ಯ ಸೇರಿದಂತೆ ಹಲವು ಕಡೆ ಹತ್ತು ಶಾಖೆ ತೆರದು ಗ್ರಾಹಕರಿಗೆ ಡಿಸ್ಕೌಂಟ್ ಕೊಡುವ ಕೆಲಸ ಮಾಡಿ ಎಂದರು.


ಪುತ್ತೂರು ಪ್ರಗತಿ ಆಸ್ಪತ್ರೆಯ ವೈದ್ಯ ಡಾ.ಶ್ರೀಪತಿ ರಾವ್ ಮಾತನಾಡಿ ಶಿವಂ ಬಿಸಿನೆಸ್ ವೆಂಚರ್‌ನವರು ಶ್ರಮ ಪಟ್ಟು ಮಳಿಗೆ ಆರಂಭಿಸಿದ್ದಾರೆ. ಸಂಸ್ಥೆ ಅಭಿವೃದ್ಧಿ ಹೊಂದಬೇಕಾದರೆ ಗ್ರಾಹಕರಿಗೆ ನೀಡುವ ಸೇವೆ ಮುಖ್ಯ. ನೀವು ಇಟ್ಟಿರುವ ಎರಡನೇ ಹೆಜ್ಜೆ ಬೃಹತ್ ಮಳಿಗೆಯಾಗಿ ಜಿಲ್ಲೆಯಲ್ಲೇ ಹೆಸರು ಪಡೆಯಲಿ ಎಂದು ಹಾರೈಸಿದರು.


ಪುತ್ತೂರು ಮಹಾವೀರ ಆಸ್ಪತ್ರೆಯ ವೈದ್ಯ ಸುರೇಶ್ ಪುತ್ತೂರಾಯ ಮಾತನಾಡಿ ಚಪ್ಪಲ್ ಹೆಚ್ಚು ಬಳಕೆ ಮಾಡುವವರು ಮಹಿಳೆಯರು. ಮಹಿಳೆಯಿಂದ ಉದ್ಘಾಟನೆ ಆದ ಮಳಿಗೆ ಹೆಸರುವಾಸಿಯಾಗಲಿ. ರಾಷ್ಟ್ರೀಯ ಚಿಂತನೆಯುಳ್ಳ ಯುವಕರು ಆರಂಭಿಸಿದ ಈ ಮಳಿಗೆಯ ಲಾಭದ ಒಂದಷ್ಟು ರಾಷ್ಟ್ರ ನಿರ್ಮಾಣದ ಕೆಲಸಕ್ಕೂ ಉಪಯೋಗವಾಗಲಿ ಎಂದು ಹೇಳಿ ಎಲ್ಲರೂ ಸಹಕಾರ ನೀಡಿ ಎಂದು ಹಾರೈಸಿದರು.
ಉದ್ಯಮಿ ಶಿವರಾಮ ಆಳ್ವ ಬಳ್ಳಮಜಲು ಮಾತನಾಡಿ ಎರಡನೇ ಸಂಸ್ಥೆ ಆರಂಭಿಸಿದ ಶಿವಂ ಬಿಸಿನೆಸ್ ವೆಂಚರ್‌ನಿಂದ ಇನ್ನಷ್ಟು ಸಂಸ್ಥೆ ಆರಂಭವಾಗಲಿ ಈ ಮೂಲಕ ಗ್ರಾಹಕರಿಗೂ ಸಮಾಜಕ್ಕೂ ಉಪಯೋಗವಾಗಲಿ ಎಂದು ಹೇಳಿ ಶುಭ ಹಾರೈಸಿದರು.

ರೋಟರಿ ಕ್ಲಬ್ ಸ್ವರ್ಣ ಅಧ್ಯಕ್ಷ ಸುರೇಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಿವಂ ಬಿಸಿನೆಸ್ ವೆಂಚರ್‌ನ ಕೃಷ್ಣಮೋಹನ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಶಿವಸುಬ್ರಹ್ಮಣ್ಯ ವಂದಿಸಿದರು. ಬಿಜೆಪಿ ಪುತ್ತೂರು ಗ್ರಾಮಾಂತರ ಮಂಡಲ ಅಧ್ಯಕ್ಷ ದಯಾನಂದ ಉಜಿರೆಮಾರ್, ನಗರ ಮಂಡಲ ಅಧ್ಯಕ್ಷ ಶಿವಕುಮಾರ್ ಕಲ್ಲಿಮಾರ್, ನಗರಸಭಾ ಸದಸ್ಯೆ ದೀಕ್ಷಾ ಪೈ, ಸೇರಿದಂತೆ ಹಲವರು ಆಗಮಿಸಿ ಶುಭಹಾರೈಸಿದರು. ಶಿವಂ ಬಿಸಿನೆಸ್ ವೆಂಚರ್‌ನ ಪಾಲುದಾರರಾದ ಸತೀಶ್ ರಾವ್, ಇಂದುಶೇಖರ್, ಸಂತೋಷ್ ಬೋನಂತಾಯ, ರವಿನಾರಾಯಣ, ಉಮೇಶ್ ಮಲುವೇಳು, ಭಾಗ್ಯೇಶ್, ವಸಂತ ಗೌಡ, ಶರಾವತಿ ರವಿನಾರಾಯಣ, ರವಿಕೃಷ್ಣ ಕಲ್ಲಾಜೆ, ಶಿವರಂಜನ್, ಸತೀಶ್ ನಾಕ್, ಸತ್ಯನಾರಾಯಣ ಭಟ್, ಮಲ್ಲೇಶ್, ಸುಹಾಸ್ ಮರಿಕೆ, ಗಿರೀಶ್, ಲಕ್ಷ್ಮಣ ಗೌಡ, ಮಹಾಲಕ್ಷ್ಮೀ, ಗೋಪಾಲ್, ರಮೇಶ್ ಪ್ರಭುರವರು ಅತಿಥಿಗಳನ್ನು ಸತ್ಕರಿಸಿದರು.

ʼಈಜ್ಹಿ ವಾಕ್’ ಶಿವಂ ಬಿಸಿನೆಸ್ ವೆಂಚರ್‌ನ ದ್ವಿತೀಯ ಸ್ಥಂಸ್ಥೆ. ಹಲವು ಮಂದಿ ಪಾಲುದಾರರು ಸೇರಿಕೊಂಡು ಸಂಸ್ಥೆಯನ್ನು ಆರಂಭಿಸಿದ್ದೇವೆ. ಬೆಳೆಯುತ್ತಿರುವ ಪುತ್ತೂರು ನಗರಕ್ಕೆ ಹೊಸ ಹೊಸ ಉದ್ಯಮ ಬರಬೇಕು. ವಿದೇಶದ ಕಂಪೆನಿಗಳಿಗೆ ಒಳ್ಳೆಯ ರೀತಿಯ ಪೈಪೋಟಿ ಸೇವೆ ನೀಡಲು ನಾವು ಒಗ್ಗಟ್ಟಾಗಬೇಕು. ಉದ್ಯಮದ ಹೊಸ ಮಜಲನ್ನು ಕಲಿಯಬೇಕು. ಲಾಭ ಮಾತ್ರವಲ್ಲದೆ ಸಮಾಜದ ಅಭಿವೃದ್ಧಿಯ ಉದ್ದೇಶ ಹಾಗೂ ಪುತ್ತೂರಿನ ಜನತೆಗೆ ಉತ್ತಮ ಸೇವೆ ನೀಡಬೇಕೆಂಬ ದೃಷ್ಟಿಯಿಂದ ಸಂಸ್ಥೆ ಪ್ರಾರಂಭಿಸಿದ್ದೇವೆ. ಎಲ್ಲರ ಸಹಕಾರ, ಹಾರೈಕೆ ಇರಲಿ.
ಪಾಲುದಾರರು
ಶಿವಂ ಬಿಸಿನೆಸ್ ವೆಂಚರ್

LEAVE A REPLY

Please enter your comment!
Please enter your name here