ಪುತ್ತೂರು: ಕರ್ನಾಟಕ ರಾಜ್ಯ ಮಟ್ಟದ 20ರ ವಯೋಮಾನದ ಬಾಲಕರ ವಿಭಾಗದ ರಾಜ್ಯಮಟ್ಟದ ಮ್ಯಾಟ್ ಕಬಡ್ಡಿ ಪಂದ್ಯಾಟವು ಡಿ.13ರಿಂದ ಡಿ.15ರ ವರೆಗೆ ಕೋಲಾರ ಜಿಲ್ಲೆಯಲ್ಲಿ ನಡೆಯಲಿದೆ.
ಈ ಪಂದ್ಯಾಕೂಟದಲ್ಲಿ ದಕ್ಷಿಣ ಕನ್ನಡದ ಜಿಲ್ಲಾ ತಂಡ ಭಾಗವಹಿಸಲಿದ್ದು, ಈ ಆಟಗಾರರಿಗೆ ನಾಲ್ಕು ದಿನಗಳ ತರಬೇತಿ ಶಿಬಿರವನ್ನು ಸಂತ ಫಿಲೋಮಿನಾ ಕಾಲೇಜಿನ ಕ್ರೀಡಾಂಗಣದಲ್ಲಿ ಡಿ. 8ರಿಂದ 11ರ ವರೆಗೆ ಆಯೋಜಿಸಲಾಗಿತ್ತು. ಆಯ್ಕೆ ಶಿಬಿರದ ಸಮಾರೋಪ ಕಾರ್ಯಕ್ರಮದಲ್ಲಿ ಮಾತನಾಡಿದ ದ.ಕ ಜಿಲ್ಲಾ ಅಮೆಚೂರು ಕಬಡ್ಡಿ ಅಸೋಸಿಯೇಷನ್ ಕಾರ್ಯಾಧ್ಯಕ್ಷ ಚಂದ್ರಹಾಸ ಶೆಟ್ಟಿರವರು, ದ.ಕ ಜಿಲ್ಲಾ ತಂಡದ ಆಯ್ಕೆ ಶಿಬಿರದಲ್ಲಿ ಆಟಗಾರರು ಒಳ್ಳೆಯ ರೀತಿಯ ಪ್ರದರ್ಶನ ನೀಡಿದ್ದಾರೆ. ತಂಡಕ್ಕೆ ಹನ್ನೆರಡು ಮಂದಿ ಆಟಗಾರರ ಆಯ್ಕೆಯಾಗಿದ್ದು, ಆಯ್ಕೆಯಾಗದ ಆಟಗಾರರು ನಿರಾಶರಾಗದೆ ಮುಂದಿನ ಅವಕಾಶಕ್ಕಾಗಿ ಕಾಯ ಬೇಕಾಗುತ್ತದೆ. ಆಯ್ಕೆಯಾದ ಆಟಗಾರರು ವೈಯುಕ್ತಿಕವಾಗಿ ಆಡದೆ ಜವಾಬ್ದಾರಿಯುತವಾಗಿ ತಂಡವಾಗಿ ಆಡಿ ದ.ಕ ಜಿಲ್ಲೆಗೆ ಹೆಸರು ತರಬೇಕು ಎಂದರು.
ಕಬಡ್ಡಿ ತಂಡದ ಪ್ರಧಾನ ತರಬೇತುದಾರರಾಗಿ ಹಬೀಬ್ ಮಾಣಿರವರು ಮುಂದುವರೆಯಲಿದ್ದಾರೆ. ತಾಲೂಕು ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ತಾಲೂಕು ಅಧ್ಯಕ್ಷ ಸುರೇಂದ್ರ ರೈ ಬಳ್ಳಮಜಲು, ಕಾರ್ಯದರ್ಶಿ ದಯಾನಂದ ರೈ ಕೋರ್ಮಂಡ, ಕೋಶಾಧಿಕಾರಿ ರಝಾಕ್ ಬಿ.ಎಚ್, ಫಿಲೋಮಿನಾ ಕಾಲೇಜು ದೈಹಿಕ ಶಿಕ್ಷಣ ನಿರ್ದೇಶಕ ಡಾ.ಎಲ್ಯಾಸ್ ಪಿಂಟೊ, ರೆಫ್ರೀ ಬೋರ್ಡ್ ಅಧ್ಯಕ್ಷ ಅಬ್ದುಲ್ ಆಸಿಫ್ ತುಂಬುತ್ತಡ್ಕ, ರೋಶನ್ ರೈ ಬನ್ನೂರು, ಸುದರ್ಶನ್ ನಾಯ್ಕ್, ಝಿಹಾದ್, ಪ್ರೇಮಾನಂದ ನಾಯಕ್ ರವರು ಉಪಸ್ಥಿತರಿದ್ದರು.
ಆಟಗಾರರಿಗೆ ಜೆರ್ಸಿ ಕೊಡುಗೆ..
ಆರ್.ರೈ ಇನ್ಫ್ರಸ್ಟ್ರಕ್ಚರ್ ಪ್ರೈ.ಲಿಮಿಟೆಡ್ ಇದರ ಮಾಲಕ ರೋಶನ್ ರೈ ಬನ್ನೂರುರವರ ಪ್ರಾಯೋಜಕತ್ವದಲ್ಲಿ ಆಟಗಾರರಿಗೆ ಜೆರ್ಸಿಯನ್ನು ಕೊಡುಗೆಯಾಗಿ ನೀಡಲಾಗಿದ್ದು, ಈ ಸಂದರ್ಭದಲ್ಲಿ ಜೆರ್ಸಿಯನ್ನು ನಾಯಕ ಎಸ್.ಡಿ.ಎಂ ಉಜಿರೆಯ ವಿಘ್ನೇಶ್ ಶೆಟ್ಟಿರವರಿಗೆ ಎಲ್ಲರ ಪರವಾಗಿ ಹಸ್ತಾಂತರಿಸಲಾಯಿತು. ತಂಡದ ಆಟಗಾರರಾಗಿ ಶಿವನೀತ್ ನಾಯಕ್(ವಿಕಾಸ್ ಕಾಲೇಜು), ಆದೇಶ್ ಶೆಟ್ಟಿ(ತ್ರಿಶಾ ಕಾಲೇಜು), ಕಿಶನ್ ರೈ ಎನ್(ಪ್ರೇರಣಾ ಕಾಲೇಜು), ಅಹಮ್ಮದ್ ಜಮೀರ್(ಎಸ್.ಡಿ.ಎಂ), ಸಚಿನ್(ಆಳ್ವಾಸ್), ಸಲಾಹುದ್ದೀನ್, ಮೊಹಮ್ಮದ್ ಸುಹೈಲ್(ಮಿಲಾಗ್ರಿಸ್ ಮಂಗಳೂರು), ಗುರುದತ್ತ್ ನಾಯಕ್(ವಿಕಾಸ್ ಕಾಲೇಜು), ಅಹಮದ್ ರಾಫಿ(ಫಿಲೋಮಿನಾ), ನೀಕ್ಷಿತ್(ಗೋಕರ್ಣನಾಥೇಶ್ವರ ಕಾಲೇಜು), ಮನ್ವಿತ್ (ಪುಣ್ಯಕೋಟಿ ಕೈರಂಗಳ)ರವರು ಆಯ್ಕೆಯಾಗಿದ್ದಾರೆ.