ಶ್ರೀ ವಿಷ್ಣು ಎಂಟರ್‌ಪ್ರೈಸಸ್ ಸ್ಥಳಾಂತರಗೊಂಡು ಶುಭಾರಂಭ

0

ಪುತ್ತೂರು: ಮನೆಗೆ, ವಾಹನಗಳಿಗೆ ಬೇಕಾದ ಬ್ಯಾಟರಿ, ಸೋಲಾರ್ ವಾಟರ್ ಹೀಟರ್‌ಗಳನ್ನೊಳಗೊಂಡ ಶ್ರೀ ವಿಷ್ಣು ಎಂಟರ್‌ಪ್ರೈಸಸ್ ಈ ಹಿಂದೆ ಪುತ್ತೂರು ಸರಕಾರಿ ನೌಕರರ ಸಂಘದ ಕಟ್ಟಡದಲ್ಲಿ ವ್ಯವಹರಿಸುತ್ತಿದ್ದು, ಇದೀಗ ಪುತ್ತೂರು ಬೊಳುವಾರು ಇನ್‌ಲ್ಯಾಂಡ್ ಮಯೂರ ಬಳಿ ಡಿ.12ರಂದು ಸ್ಥಳಾಂತರಗೊಂಡು ಶುಭಾರಂಭಗೊಂಡಿತು.


ಆರಿಕೋಡಿ ಶ್ರೀ ಚಾಮುಂಡೇಶ್ವರಿ ಕ್ಷೇತ್ರದ ಧರ್ಮದರ್ಶಿ ಹರೀಶ್ ಆರಿಕೋಡಿಯವರು ದ್ವೀಪ ಪ್ರಜ್ವಲನೆಗೈದರು. ಬಳಿಕ ಮಾತನಾಡಿದ ಅವರು ಬೆಳೆಯುತ್ತಿರುವಂತಹ ಪುತ್ತೂರು ನಗರದಲ್ಲಿ ಜನರಿಗೆ ಸೇವೆ ನೀಡಬೇಕು, ಉದ್ದಿಮೆಯಿಂದ ಜನರಿಗೆ ಪ್ರಯೋಜನವಾಗಬೇಕು ಎಂಬ ವಿಚಾರದಿಂದ ಈ ಸಂಸ್ಥೆ ಶುಭಾರಂಭಗೊಂಡಗೊಂಡಿದೆ. ಇದು ಪುತ್ತೂರು ಮಾತ್ರವಲ್ಲದೇ ಜಿಲ್ಲೆ, ರಾಜ್ಯಮಟ್ಟದಲ್ಲಿ ಹರಡಬೇಕು ಎಂದು ಶುಭಹಾರೈಸಿದರು. ಸಂಸ್ಥೆಯ ಮಾಲಕ ಜಯಂತ್ ಅತಿಥಿಗಳನ್ನು ಸ್ವಾಗತಿಸಿದರು, ವಿ.ಜೆ. ವಿಖ್ಯಾತ್ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here