ಪುತ್ತೂರಿನ ಧನ್ವಿ ಜೆ.ರೈಗೆ ಕರುನಾಡ ಭೂಷಣ ರಾಷ್ಟ್ರೀಯ ಪ್ರಶಸ್ತಿ ಪ್ರದಾನ

0

ಪುತ್ತೂರು: ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರ ಆವರಣ ನಯನ ಸಭಾಂಗಣದಲ್ಲಿ ನಾಟ್ಯಮಯೂರಿ ನೃತ್ಯ ಸಂಸ್ಥೆಯು ಆಯೋಜಿಸಿದ ಭಾರತ ಭೂಷಣ ಮತ್ತು ಕರುನಾಡ ಭೂಷಣ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪುತ್ತೂರಿನ ಧನ್ವಿ ಜೆ ರೈ ಯವರಿಗೆ ಕರುನಾಡ ಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಯಿತು.


ಈ ಸಂದರ್ಭದಲ್ಲಿ ಟ್ರಸ್ಟ್ ನ ಗೌರವ ಅಧ್ಯಕ್ಷ ಡಾ ಕೆಂಚನೂರು ಶಂಕರ, ವಿದುಷಿ ಪ್ರೇಮಾಂಜಲಿ ಆಚಾರ್ಯ, ಶ್ರೀ ತೋತಾಪುರಿ ಸೋಮಶೇಖರ ಗುರೂಜಿ, ವಾಣಿಜ್ಯೋದ್ಯಮಿ ಹಾಗೂ ಕೆಪಿಸಿಸಿ ಸಂಯೋಜಕರಾದ ಮಂಜುನಾಥ ಶೆಟ್ಟಿ, ಬೆಂಗಳೂರು ಬಂಟರ ಸಂಘದ ಉಪಾಧ್ಯಕ್ಷೆ ಕಾಂತಿ ಶೆಟ್ಟಿ, ಪುತ್ತೂರು ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಅಧ್ಯಕ್ಷೆ ಮಲ್ಲಿಕಾ ಜೆ ರೈ, ಅಂತರಾಷ್ಟ್ರೀಯ ಚೆಸ್ ತರಬೇತುದಾರ ಮುನಿರಾಜು ಸೇರಿದಂತೆ ಹಲವು ಮಂದಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here