ಪುತ್ತೂರು : ತಾಲ್ಲೂಕು ಬಂಟರ ಸಂಘ ಇದರ ಮಹಿಳಾ ವಿಭಾಗದ ಮಾಸಿಕ ಸಭೆಯು ಗೀತಾ ಮೋಹನ ರೈ ಇವರ ಅಧ್ಯಕ್ಷತೆಯಲ್ಲಿ ಪುತ್ತೂರು ಬಂಟರ ಭವನದಲ್ಲಿ ದ. 10 ರಂದು ನಡೆಯಿತು.
ಸಭೆಯಲ್ಲಿ ಬಂಟರ ಸಂಘ ಪುತ್ತೂರು ಇದರ ಅಧ್ಯಕ್ಷ ಹೇಮಾನಾಥ ಶೆಟ್ಟಿ ಕಾವು, ಮಹಿಳಾ ಬಂಟರ ಸಂಘದ ನಿಕಟ ಪೂರ್ವ ಅಧ್ಯಕ್ಷೆ ಸಬಿತ ಭಂಡಾರಿ, ಕ್ರೀಡಾ ಸಂಚಾಲಕಿ ಸ್ವರ್ಣಲತಾ ಜೆ ರೈ, ಸಂಸ್ಕೃತಿಕ ಸಂಚಾಲಕಿ ಹರಿಣಾಕ್ಷಿ ಜೆ ಶೆಟ್ಟಿ, ಉಪಾಧ್ಯಕ್ಷೆ ವತ್ತ್ಸಲ ಪಿ ಶೆಟ್ಟಿ, ಕೋಶಾಧಿಕಾರಿ ಅರುಣಾ ಡಿ ರೈ, ನಿರ್ದೇಶಕಿ ಅನ್ನಪೂರ್ಣಿಮಾ ರೈ ಕುತ್ಯಾಡಿ ಉಪಸ್ಥಿತರಿದ್ದರು.
ಹಿಂದಿನ ಮಾಸಿಕ ಸಭೆಯ ವರದಿಯನ್ನು ಕುಸುಮ ಪಿ ಶೆಟ್ಟಿ ಸಭೆ ವಾಚಿಸಿದರು. ಅಧ್ಯಕ್ಷೆ ಗೀತಾ ಮೋಹನ ರೈ ಮುಂದಿನ ಯೋಜನೆಗಳ ಬಗ್ಗೆ ಸಭೆಯಲ್ಲಿ ಪ್ರಸ್ತಾಪಿಸಿದರು.ಇದೇ ಸಂದರ್ಭದಲ್ಲಿ ” ಮನೆ ಮದ್ದು ” ಈ ವಿಷಯದ ಬಗ್ಗೆ ಅನ್ನಪೂರ್ಣಿಮಾ ರೈ ಮಾಹಿತಿ ನೀಡಿದರು.
ಹೇಮಾನಾಥ ಶೆಟ್ಟಿ ಕಾವು ಸೂಕ್ತ ಸಲಹೆ ಸೂಚನೆ ನೀಡಿದರು. ಉದಯವಾಣಿ ದೀಪಾವಳಿ ಫೋಟೋ ಸ್ಪರ್ಧೆಯಲ್ಲಿ ಮಹಿಳಾ ವಿಭಾಗಕ್ಕೆ ದ್ವಿತೀಯ ಬಹುಮಾನ ಬಂದ ಮೊಬಲಗಿನ ಚೆಕ್ಕನ್ನು ಶಕುಂತಲಾ ವಿ ಕೆ ಶೆಟ್ಟಿ ಇವರು ಅಧ್ಯಕ್ಷರಿಗೆ ನೀಡಿದರು.
ಮಾಲಿನಿ ಯಂ ಶೆಟ್ಟಿ ಪ್ರಾರ್ಥಿಸಿದರು.ಕುಸುಮ ಪಿ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ರಾಜೀವಿ ಶೆಟ್ಟಿ ಸಹಕರಿಸಿದರು. ಕೋಶಾಧಿಕಾರಿ ಅರುಣಾ ಡಿ ರೈ ವಂದಿಸಿದರು.