ಡಿ.14ರಂದು ದೇವರ ಸವಾರಿ, ಕಟ್ಟೆಪೂಜೆ,
ಡಿ.15ರಂದು ದರ್ಶನ ಬಲಿ, ಬಟ್ಟಲು ಕಾಣಿಕೆ, ನೇಮೋತ್ಸವ
ಪುತ್ತೂರು: ಆರ್ಯಾಪು ಗ್ರಾಮದ ಬೂಡಿಯಾರು, ಹೊಸಮನೆ ಶ್ರೀಚಕ್ರರಾಜರಾಜೇಶ್ವರೀ ದೇವಸ್ಥಾನದಲ್ಲಿ ಡಿ.14ರಿಂದ 15ರವರೆಗೆ ಕುಕ್ಕಾಡಿ ತಂತ್ರಿ ಪ್ರೀತಮ್ ಪುತ್ತೂರಾಯರವರ ನೇತೃತ್ವದಲ್ಲಿ ಜಾತ್ರೋತ್ಸವ ಹಾಗೂ ನೇಮೋತ್ಸವ ಕಾರ್ಯಕ್ರಮ ನಡೆಯಲಿದೆ.
ಡಿ.13ರಂದು ಬೆಳಿಗ್ಗೆ ದೇವತಾ ಪ್ರಾರ್ಥನೆ, ಉಗ್ರಾಣ ಪೂಜೆ, ಮರಾಠಿ ಭಜನಾ ತಂಡದಿಂದ ಕುಣಿತ ಭಜನೆ, ಅನ್ನಸಂತರ್ಪಣೆ ನಡೆಯಿತು.
ಡಿ.14 ಶ್ರೀದೇವರ ಬಲಿ ಹೊರಟು ಕಟ್ಟೆಪೂಜೆ:
ಡಿ.14ರಂದು ಬೆಳಿಗ್ಗೆ 8ರಿಂದ ಗಣಪತಿ ಹವನ, ಕಲಶಪೂಜೆ, ಕಲಶಾಭಿಷೇಕ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಸಂಜೆ 5ರಿಂದ ಶ್ರೀದೇವರ ಬಲಿ ಹೊರಟು ಉತ್ಸವ, ದೇವರ ಸವಾರಿ, ಕಟ್ಟೆಪೂಜೆ, ಅನ್ನಸಂತರ್ಪಣೆ ನಡೆಯಲಿದೆ.
ಡಿ.15, ದರ್ಶನ ಬಲಿ, ಬಟ್ಟಲು ಕಾಣಿಕೆ:
ಡಿ.15ರಂದು ಬೆಳಿಗ್ಗೆ 9ರಿಂದ ಶ್ರೀದೇವರ ಬಲಿ ಹೊರಟು ಉತ್ಸವ, ದರ್ಶನ ಬಲಿ, ಬಟ್ಟಲು ಕಾಣಿಕೆ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 5ರಿಂದ ದುರ್ಗಾಪೂಜೆ, ಚಾಮುಂಡೇಶ್ವರಿ ಭಜನಾ ಮಂಡಳಿಯವರಿಂದ ಭಜನಾ ಸೇವೆ, 7ರಿಂದ ಶ್ರೀರಕ್ತೇಶ್ವರಿ, ಪಂಜುರ್ಲಿ ದೈವಗಳ ಭಂಡಾರ ತೆಗೆದು ನೇಮೋತ್ಸವ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ.