ನೆಲ್ಯಾಡಿ: ನೆಲ್ಯಾಡಿ ಕುಮಾರಕೃಪಾ ಸ್ಟೋರ್‌ನ ಮಾಲಕ ದಿ.ರಾಮಚಂದ್ರ ಆಚಾರ್ಯರವರ ಪತ್ನಿ, ಕೌಕ್ರಾಡಿ ಗ್ರಾಮದ ಹೊಸಮಜಲು ಸಮೀಪದ ಪಂಜಿಗದ್ದೆ ನಿವಾಸಿ ಕಲಾವತಿ ಆಚಾರ್ಯ(80ವ.)ಅವರು ಅನಾರೋಗ್ಯದಿಂದ ಡಿ.13ರಂದು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಮೃತರು ಪುತ್ರ ರವಿಪ್ರಸಾದ್ ಆಚಾರ್ಯ, ಪುತ್ರಿಯರಾದ ಸ್ವರ್ಣಲತಾ, ಸುಕನ್ಯಾ ಹಾಗೂ ಸೊಸೆ, ಅಳಿಯಂದಿರು, ಮೊಮ್ಮಕ್ಕಳನ್ನು ಅಗಲಿದ್ದಾರೆ.