ಪುತ್ತೂರು: ಕಳೆದ ವರ್ಷ ಎಪಿಎಂಸಿ ರಸ್ತೆಯ ಹಿಂದೂಸ್ತಾನ ಕಾಂಪ್ಲೆಕ್ಸ್ ನಲ್ಲಿ ಕಾರ್ಯಾಚರಿಸುತ್ತಿದ್ದು ಪ್ರಸ್ತುತ ಅರುಣಾ ಥಿಯೇಟರ್ ಬಳಿಯ ಸ್ವಾಗತ್ ಬಿಲ್ಡಿಂಗ್ ನಲ್ಲಿ ಕಾರ್ಯಾಚರಿಸುತ್ತಿರುವ ಐ.ಆರ್.ಸಿ.ಎಂ.ಡಿ ಶಿಕ್ಷಣ ಸಂಸ್ಥೆಯು ತಮ್ಮ ಸಂಸ್ಥೆಯಲ್ಲಿ ಅಬಾಕಸ್ ತರಬೇತಿ ಪಡೆದ 354 ವಿದ್ಯಾರ್ಥಿಗಳ ವಿಶಿಷ್ಟ ಸಾಧನೆಯ ರಾಜ್ಯಮಟ್ಟದ ಸಾಧಕರಿಗೆ ಪ್ರಶಸ್ತಿ ಪ್ರದಾನ ಸಮಾರಂಭವು ಡಿ.15 ರಂದು ಬೊಳ್ವಾರು ಮಹಾವೀರ ಹವಾನಿಯಂತ್ರಿತ ಕನ್ವೆನ್ಶನ್ ಸಭಾಂಗಣದಲ್ಲಿ ಜರಗಲಿದೆ.
ಪುತ್ತೂರು ಸಿಟಿ ಆಸ್ಪತ್ರೆಯ ವೈದ್ಯ ಡಾ.ಎ.ಪಿ ಭಟ್ ರವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಮದ್ರಾಸ್ ಐ.ಐ.ಟಿ ಸಾಯಿಗಣೇಶ್, ಗೌರವ ಉಪಸ್ಥಿತಿಯಾಗಿ ನಿವೃತ್ತ ಉಪನ್ಯಾಸಕ ಪ್ರೊ.ರಾಮಚಂದ್ರ ಭಟ್, ಬೆಂಗಳೂರು ಜಿ.ಕೆ.ವಿ.ಕೆ ಇದರ ಡಾ.ಅಶೋಕ್ ಕುಮಾರ್, ರೈಲ್ವೆ ಇಲಾಖೆಯ ಮೈಸೂರು ವಿಭಾಗದ ಕೆ.ಡಿ ಶಿಂಧೆ ವಿಜಯಪುರ, ಸಿವಿಲ್ ಇಂಜಿನಿಯರ್ ಎ.ವಿ ನಾರಾಯಣರವರು ಭಾಗವಹಿಸಲಿದ್ದಾರೆ ಎಂದು ಐ.ಆರ್.ಸಿ.ಎಂ.ಡಿ ಎಜ್ಯುಕೇಶನ್ ಸೆಂಟರ್ ಮುಖ್ಯಸ್ಥರಾದ ಗಣೇಶ್ ಹಾಗೂ ಶ್ರೀಮತಿ ಪ್ರಫುಲ್ಲ ಗಣೇಶ್ ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.