ರೋಟರಿ ಪುತ್ತೂರು ಸ್ವರ್ಣ, ರೋಟರಿ ಉಪ್ಪಿನಂಗಡಿ ಅಂತರ್ ವಲಯ ಜಂಟಿ ಕ್ಲಬ್ ಸಭೆ   

0

ಪುತ್ತೂರು: ರೋಟರಿ ಅಂತರ್ ರಾಷ್ಟ್ರೀಯ ಜಿಲ್ಲೆ 3181 ಇದರ ಅಧೀನದಲ್ಲಿ ಬರುವ ರೋಟರಿ ಕ್ಲಬ್ ಪುತ್ತೂರು ಸ್ವರ್ಣ ವಲಯ 5 ಮತ್ತು ರೋಟರಿ ಕ್ಲಬ್ ಉಪ್ಪಿನಂಗಡಿ ವಲಯ 4 ಇದರ ಜಂಟಿ ಕ್ಲಬ್ ಸಭೆಯು ಡಿ.12  ರಂದು ರೋಟರಿ ಮನಿಷಾ ಸಭಾಂಗಣದಲ್ಲಿ ರೋಟರಿ ಸ್ವರ್ಣ ಅಧ್ಯಕ್ಷ ಸುರೇಶ್ ಪಿ ಮತ್ತು ರೋಟರಿ ಉಪ್ಪಿನಂಗಡಿ ಅಧ್ಯಕ್ಷ ನವೀನ್ ಬ್ರ್ಯಾಗ್ಸ್  ಇವರ ಅಧ್ಯಕ್ಷತೆಯಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ರೋಟರಿ ವಲಯ ಐದರ ಮಾಜಿ ಸಹಾಯಕ ಗವರ್ನರ್ ಎ ಜಗಜೀವನ್‌ದಾಸ್ ರೈ ಮಾತನಾಡಿ, ಜಗತ್ತಿನಾದ್ಯಂತ ಅಂತರಾಷ್ಟ್ರೀಯ ರೋಟರಿ ಸಂಸ್ಥೆಯು ಸೇವೆಯ ಉದ್ದೇಶವನ್ನು ಇಟ್ಟುಕೊಂಡು ಕಾರ್ಯನಿರ್ವಹಿಸುತ್ತಿದ್ದು ಇಂತಹ ಅಂತರಾಷ್ಟ್ರೀಯ ಸೇವಾ ಸಂಸ್ಥೆಯಲ್ಲಿ ಕ್ಲಬ್ ಸದಸ್ಯರ ಕರ್ತವ್ಯ ಮತ್ತು ಜವಾಬ್ದಾರಿಗಳ ಕುರಿತು ಮಾಹಿತಿಯನ್ನು ನೀಡಿದರು. 

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ರೋಟರಿ ವಲಯ ಐದರ ಸಹಾಯಕ ಗವರ್ನರ್ ಸೂರ್ಯನಾಥ ಆಳ್ವ, ವಲಯ ನಾಲ್ಕರ ಸಹಾಯಕ ಗವರ್ನರ್ ಜಯರಾಮ್ ರೈ, ರೋಟರಿ ವಲಯ ನಾಲ್ಕರ ವಲಯ ಸೇನಾನಿಗಳಾದ ಗ್ರೇಸಿ ಗೊನ್ಸಾಲ್ವಿಸ್, ವಲಯ ಐದರ ವಲಯ ಸೇನಾನಿ ವೆಂಕಟರಮಣ ಗೌಡ ಕಳುವಾಜೆರವರು ಹಾಜರಿದ್ದು ಸಂದರ್ಭೋಚಿತವಾಗಿ ಮಾತನಾಡಿದರು. 

ಅಧ್ಯಕ್ಷತೆಯನ್ನು ವಹಿಸಿದ ರೋಟರಿ ಕ್ಲಬ್ ಪುತ್ತೂರು ಸ್ವರ್ಣ ಅಧ್ಯಕ್ಷ ಸುರೇಶ್ ಪಿ ಮತ್ತು ರೋಟರಿ ಉಪ್ಪಿನಂಗಡಿ ಅಧ್ಯಕ್ಷ ನವೀನ್ ಬ್ರ್ಯಾಗ್ಸ್  ಇವರು ಮಾತನಾಡಿ, ಎರಡೂ ಕ್ಲಬ್‌ಗಳು ಇದುವರೆಗೂ ಸಮಾಜಕ್ಕೆ ಹಲವಾರು ಕೊಡುಗೆಗಳ್ನು ನೀಡಿದ್ದು ಮುಂದಿನ ದಿನಗಳಲ್ಲಿ ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಅಂತರ್ ರಾಷ್ಟ್ರೀಯ ರೋಟರಿ ಸಂಸ್ಥೆಯು ಸಲ್ಲಿಸುವ ಸೇವೆಯು ಲಭಿಸಬೇಕು. ಈ ನಿಟ್ಟಿನಲ್ಲಿ ನಾವು ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದರು. 

ಗಣೇಶ್ ತಡತ್ತಿಲ್ ಪ್ರಾರ್ಥಿಸಿದರು. ರೋಟರಿ ಸ್ವರ್ಣ ನಿಕಟಪೂರ್ವ ಅಧ್ಯಕ್ಷ ಸುಂದರ್ ರೈ ಬಲ್ಕಾಡಿ ಸ್ವಾಗತಿಸಿದರು, ಉಮೇಶ್ ಮನವೇಲುರವರು ಸಂಪನ್ಮೂಲ ವ್ಯಕ್ತಿಗಳ ಪರಿಚಯ ಮಾಡಿದರು. ರೋಟರಿ ಸ್ವರ್ಣದ ವಾರದ ವರದಿಯನ್ನು ಕಾರ್ಯದರ್ಶಿ ಸೆನೊರಿಟಾ ಆನಂದ್, ರೋಟರಿ ಉಪ್ಪಿನಂಗಡಿ ಕಾರ್ಯದರ್ಶಿ ಕೇಶವ್ ಪಿ.ಎಂ. ವಾಚಿಸಿದರು. ರೋಟರಿ ಸ್ವರ್ಣ ಸದಸ್ಯರಾದ ಸುನಿಲ್ ಜಾಧವ್ ಇವರ ವಿವಾಹ ವಾರ್ಷಿಕೋತ್ಸವವನ್ನು ಕೇಕ್ ಕತ್ತರಿಸುವ ಮೂಲಕ ಆಚರಿಸಲಾಯಿತು. ರೋಟರಿ ಉಪ್ಪಿನಂಗಡಿಯ ಅನುರಾಧ ಆರ್ ಶೆಟ್ಟಿ ವಂದಿಸಿದರು.

LEAVE A REPLY

Please enter your comment!
Please enter your name here