ಪುತ್ತೂರು:2024-25ನೇ ಸಾಲಿನಲ್ಲಿ ಅತಿವೃಷ್ಟಿ ಹಾಗೂ ನೆರೆ ಹಾವಳಿಯಿಂದ ಹಾನಿಗೊಳಗಾದ ರಸ್ತೆ ಮೊದಲಾದವುಗಳ ದುರಸ್ತಿ,ಪುನರ್ ನಿರ್ಮಾಣ ಕಾಮಗಾರಿಗಳಿಗೆ ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೆ 2 ಕೋಟಿ ರೂ.ಅನುದಾನ ಮಂಜೂರುಗೊಂಡಿದೆ ಎಂದು ಶಾಸಕರ ಕಚೇರಿ ಪ್ರಕಟಣೆ ತಿಳಿಸಿದೆ.
ಶಾಸಕ ಅಶೋಕ್ ಕುಮಾರ್ ರೈ ಶಿಫಾರಸ್ಸಿನ ಮೇರೆಗೆ ಲೋಕೋಪಯೋಗಿ ಇಲಾಖೆ ಸಚಿವರು ಅನುದಾನ ಮಂಜೂರು ಮಾಡಿದ್ದಾರೆ.ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೆ ಒಳಪಟ್ಟ ರಾಜ್ಯ ಹೆದ್ದಾರಿಗಳ ಪೈಕಿ ಸುಬ್ರಹ್ಮಣ್ಯ-ಮಂಜೇಶ್ವರ ರಸ್ತೆಯ ಪುರುಷರಕಟ್ಟೆಯಲ್ಲಿ ಚರಂಡಿ ದುರಸ್ತಿಗೆ 6 ಲಕ್ಷ ರೂ., ಪುತ್ತೂರು-ಉಪ್ಪಿನಂಗಡಿ ರಾಜ್ಯ ಹೆದ್ದಾರಿಯಲ್ಲಿ ದುರಸ್ತಿಗೆ 10 ಲಕ್ಷ ರೂ., ಅಮ್ಚಿನಡ್ಕ-ಕಾವು-ಈಶ್ವರಮಂಗಲ- ಪಲ್ಲತ್ತೂರು ರಸ್ತೆಯ ಅಮ್ಚಿನಡ್ಕ ಬಳಿ ತಡೆಗೋಡೆ ನಿರ್ಮಾಣಕ್ಕೆ 24 ಲಕ್ಷ ರೂ., ಅಮ್ಚಿನಡ್ಕ- ಕಾವು-ಈಶ್ವರಮಂಗಲ-ಪಲ್ಲತ್ತೂರು ರಸ್ತೆಯಲ್ಲಿ ಪೆರ್ಲಂಪಾಡಿ ಬಳಿ ತಡೆಗೋಡೆ ನಿರ್ಮಾಣಕ್ಕೆ 30 ಲಕ್ಷ ರೂ., ಪುತ್ತೂರು-ಉಪ್ಪಿನಂಗಡಿ ರಾಜ್ಯ ಹೆದ್ದಾರಿಯಲ್ಲಿ ಕೋಡಿಂಬಾಡಿ ಬಳಿ ತಡೆಗೋಡೆ ನಿರ್ಮಾಣಕ್ಕೆ 75 ಲಕ್ಷ ರೂ.,ಜಿಲ್ಲಾ ಮುಖ್ಯ ರಸ್ತೆಗಳಾದ ಮಾಡಾವು -ಸಿದ್ಧಮೂಲೆ -ಪಾಂಬಾರು -ಮಚ್ಚಿನಡ್ಕ ರಸ್ತೆಯಲ್ಲಿ ಸಿದ್ಧಮೂಲೆ ಬಳಿ ತಡೆಗೋಡೆ ನಿರ್ಮಾಣಕ್ಕೆ 10 ಲಕ್ಷ ರೂ., ಮಾಡಾವು -ಸಿದ್ಧಮೂಲೆ -ಪಾಂಬಾರು -ಮಚ್ಚಿನಡ್ಕ ರಸ್ತೆಯ ಹಲ್ಯಾಡಿ ಬಳಿ ತಡೆಗೋಡೆ ನಿರ್ಮಾಣಕ್ಕೆ 45 ಲಕ್ಷ ರೂ. ಅನುದಾನ ಮಂಜೂರಾಗಿದೆ ಎಂದು ಶಾಸಕರ ಕಚೇರಿ ಪ್ರಕಟಣೆ ತಿಳಿಸಿದೆ.
ಮುಂದೆ ಇನ್ನಷ್ಟು ಅನುದಾನ
ವಿಧಾನಸಭಾ ಕ್ಷೇತ್ರದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ಮಂಜೂರಾಗುತ್ತಿದೆ.ಈಗಾಗಲೇ ನಗರದ ರಸ್ತೆ ದುರಸ್ತಿ ಪ್ರಾರಂಭಗೊಂಡಿದ್ದು ಗ್ರಾಮಾಂತರ ಪ್ರದೇಶದ ಜಿಲ್ಲಾ, ರಾಜ್ಯ ಹೆದ್ದಾರಿಗಳ ದುರಸ್ತಿಗೆ 2 ಕೋಟಿ ರೂ.ಅನುದಾನ ಬಿಡುಗಡೆಯಾಗಿದೆ.ಮುಂದಿನ ಹಂತದಲ್ಲಿ ಇನ್ನಷ್ಟು ಅನುದಾನ ಬರಲಿದ್ದು ಪುತ್ತೂರಿನ ತುರ್ತು ಅಗತ್ಯತೆಗಳಿಗೆ ತಕ್ಷಣ ಸ್ಪಂದನೆ ನೀಡುವ ಜತೆಗೆ ಉಳಿದ ಅಭಿವೃದ್ದಿ ಕೆಲಸಗಳಿಗೂ ಆದ್ಯತೆ ನೀಡಲಾಗುವುದು ಎಂದು ಅಶೋಕ್ ಕುಮಾರ್ ರೈ ತಿಳಿಸಿದ್ದಾರೆ.