ನೆಲ್ಯಾಡಿ: ಬಿ.ಸಿ.ರೋಡ್‌ನ ಹೋಟೆಲ್ ಚಿಕೋರಿ ಹಾಗೂ ಪದ್ಮಾ ಪೆಟ್ರೋಲ್ ಪಂಪ್‌ನ ಸಮೀಪವಿರುವ ನಾಗಮಣಿ ಎಲೆಕ್ಟ್ರಿಕ್ ಕಂ.ಯ ಸಹ ಸಂಸ್ಥೆ, ಎಲೆಕ್ಟ್ರಿಕ್ , ಪ್ಲಂಬಿಂಗ್ ಮತ್ತು ಸ್ಯಾನಿಟರಿ ಐಟಂಗಳ ಹೋಲ್‌ಸೇಲ್ ಮಾರಾಟ ಮಳಿಗೆ ನಾಗಮಣಿ ಎಲೆಕ್ಟ್ರಿಕ್ ಕಂ. ಡಿ.13ರಂದು ಬೆಳಿಗ್ಗೆ ನೆಲ್ಯಾಡಿ ಸರಕಾರಿ ಉನ್ನತೀಕರಿಸಿದ ಹಿ.ಪ್ರಾ.ಶಾಲೆಯ ಮುಂಭಾಗದಲ್ಲಿರುವ ಗ್ಯಾಲಕ್ಸಿ ಟಿ. ಕಾಂಪ್ಲೆಕ್ಸ್ನಲ್ಲಿ ಶುಭಾರಂಭಗೊಂಡಿತು.
ಪೂಜಾ ವಿಧಿವಿಧಾನಗಳೊಂದಿಗೆ ನೂತನ ಸಂಸ್ಥೆಯನ್ನು ಉದ್ಘಾಟಿಸಲಾಯಿತು. ಅತಿಥಿಯಾಗಿ ಆಗಮಿಸಿದ ನೆಲ್ಯಾಡಿ ಗ್ರಾ.ಪಂ.ಅಧ್ಯಕ್ಷ ಯಾಕೂಬ್ ಯಾನೆ ಸಲಾಂ ಬಿಲಾಲ್ ಅವರು ಮಾತನಾಡಿ, ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುವ ನೆಲ್ಯಾಡಿ ಪೇಟೆ ದಿನದಿಂದ ದಿನಕ್ಕೆ ವೇಗವಾಗಿ ಬೆಳೆಯುತ್ತಿದೆ. ಇಲ್ಲಿಗೆ ಹೊಸ ಉದ್ದಿಮೆಗಳೂ ಬರುತ್ತಿರುವುದರಿಂದ ಊರಿನ ಅಭಿವೃದ್ಧಿಯೂ ಆಗುತ್ತಿದೆ. ಇದರೊಂದಿಗೆ ಊರಿನ ಜನ ಪೇಟೆ, ಪಟ್ಟಣಗಳಿಗೆ ಹೋಗುವುದು ತಪ್ಪುತ್ತಿದೆ. ನಾಗಮಣಿ ಎಲೆಕ್ಟ್ರಿಕ್ ಕಂ.ಮೂಲಕ ನೆಲ್ಯಾಡಿಯ ಜನರಿಗೆ ಉತ್ತಮ ಸೇವೆ ಸಿಗಲಿ. ಸಂಸ್ಥೆ ಉತ್ತರೋತ್ತರ ಅಭಿವೃದ್ಧಿ ಹೊಂದಲಿ ಎಂದು ಹಾರೈಸಿದರು.
ನೆಲ್ಯಾಡಿ ಶಿಲ್ಪಾ ಕನ್‌ಸ್ಟ್ರಕ್ಷನ್ ಮಾಲಕ, ಇಂಜಿನಿಯರ್ ಶಿವಣ್ಣ ಪಿ.ಹೆಗ್ಡೆ ಅವರು ಮಾತನಾಡಿ, ಉದ್ದಿಮೆಗಳು ಹೆಚ್ಚಿದಂತೆ ಊರಿನ ಅಭಿವೃದ್ಧಿಯೂ ಆಗಲಿದ್ದು ಜನರಿಗೂ ಉತ್ತಮ ಸೇವೆ ಸಿಗಲಿದೆ. ಎಲೆಕ್ಟ್ರಿಕ್, ಪ್ಲಂಬಿಂಗ್ ಮತ್ತು ಸ್ಯಾನಿಟರಿ ಐಟಂಗಳ ಹೋಲ್‌ಸೇಲ್ ಮಾರಾಟ ಮಳಿಗೆ ನೆಲ್ಯಾಡಿಗೆ ಬಂದಿರುವುದು ಇಲ್ಲಿನ ಜನರಿಗೆ ಹೆಚ್ಚಿನ ಸಹಕಾರಿಯಾಗಲಿದೆ. ಸಂಸ್ಥೆ ಉತ್ತರೋತ್ತರ ಅಭಿವೃದ್ಧಿ ಹೊಂದಲಿ ಎಂದು ಹಾರೈಸಿದರು.
ಕಟ್ಟಡ ಮಾಲಕರು, ನೆಲ್ಯಾಡಿಯ ವರ್ತಕರು ಸೇರಿದಂತೆ ಹಲವು ಗಣ್ಯರು ಆಗಮಿಸಿ ನೂತನ ಸಂಸ್ಥೆಗೆ ಶುಭಹಾರೈಸಿದರು. ಮಾಲಕ ದಿಲೀಪ್ ಅವರು ಅತಿಥಿಗಳನ್ನು ಬರಮಾಡಿಕೊಂಡು ಮಾತನಾಡಿ, ನಮ್ಮಲ್ಲಿ ಎಲ್ಲಾ ಮಾದರಿಯ ಎಲೆಕ್ಟ್ರಿಕಲ್, ಪ್ಲಂಬಿಂಗ್ ಮತ್ತು ಸ್ಯಾನಿಟರಿ ಐಟಂಗಳು ಹೋಲ್‌ಸೇಲ್ ದರದಲ್ಲಿ ಲಭ್ಯವಿದೆ. ಗ್ರಾಹಕರು ಸಹಕರಿಸುವಂತೆ ಮನವಿ ಮಾಡಿದರು.