ಪೆರ್ನಾಜೆ : ಬೆಂಗಳೂರು ಅರಮನೆ ಮೈದಾನದಲ್ಲಿ ಡಿ.27 ರಿಂದ 29 ರವರೆಗೆ ನಡೆಯುವ ತೃತೀಯ ವಿಶ್ವ ಹವ್ಯಕ ಸಮ್ಮೇಳನದಲ್ಲಿ ನೀಡಲಾಗುವ ಹವ್ಯಕ ಕೃಷಿ ರತ್ನ ಪ್ರಶಸ್ತಿಗೆ ಸೌಮ್ಯ ಪೆರ್ನಾಜೆ ಆಯ್ಕೆಯಾಗಿರುತ್ತಾರೆ.
ಡಿ.27ರಂದು ವಿಶ್ವ ಹವ್ಯಕ ಸಮ್ಮೇಳನದಲ್ಲಿ ಗಣ್ಯರ ಸಮ್ಮುಖದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಗುವುದೆಂದು ಸಂಚಾಲಕ ಗಣೇಶ್ ಚಂದ್ರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಶಸ್ತಿಗೆ ವಿಶ್ವದಲ್ಲೇ ಪ್ರಪ್ರಥಮವಾಗಿ ಮಹಿಳಾ ಜೇನುಗಡ್ಡಧಾರಿ, ಜೇನು ಕೃಷಿ ವಿಶಿಷ್ಟ ಬರಹಗಳು ಕಲಾ ಪ್ರಿಯರು, ಸುಂದರ ಕೈಬರಹ ವೈವಿಧ್ಯಮಯ ತಿಂಡಿಗಳು ಸ್ವಾದಿಷ್ಟ ರುಚಿಕರ ಆಹಾರದ ಬರಹವು ಸೌಮ್ಯ ಪೆರ್ನಾಜೆಯವರ ವಿಶೇಷತೆ. ಇವರು ಕಲಾ ನಿರ್ದೇಶಕ, ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಕುಮಾರ್ ಪೆರ್ನಾಜೆಯವರ ಪತ್ನಿ, ನಂದನ್ ಕುಮಾರ್, ಚಂದನ್ ಕುಮಾರ್ ಇವರ ಮಕ್ಕಳು.