ಪುತ್ತೂರು: ಮೊಟ್ಟೆತ್ತಡ್ಕ ಮಿಶನ್ಮೂಲೆ ಶ್ರೀ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಡಿ.15 ರಂದು ದುರ್ಗಾಪೂಜೆ ನೆರವೇರಿತು.
ಶ್ರೀ ಕ್ಷೇತ್ರದ ಅರ್ಚಕರಾದ ಉದಯನಾರಾಯಣ ಕಲ್ಲೂರಾಯರವರ ನೇತೃತ್ವದಲ್ಲಿ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿದವು. ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರದ ಅಧ್ಯಕ್ಷ ರಾಮ ಶೆಟ್ಟಿ, ಕಾರ್ಯದರ್ಶಿ ಕೆ.ಬಿ ಶೇಖರ, ಜೊತೆ ಕಾರ್ಯದರ್ಶಿಗಳಾದ ಲಕ್ಷ್ಮಣ ಶೆಟ್ಟಿ, ಸಂತೋಷ್ ರೈ, ಸುಂದರ ಬಿ.ಕೆ, ಕೋಶಾಧಿಕಾರಿ ಮೋಹನ್ ಕುಮಾರ್ ಡಿ, ಲೆಕ್ಕಪರಿಶೋಧಕ ಬಿ.ವಿಶ್ವನಾಥ ರೈ ಮಿಶನ್ಮೂಲೆ, ಉಪಾದ್ಯಕ್ಷರುಗಳಾದ ಸಂತೋಷ್ ಕುಮಾರ್ ಕೆ, ಸತೀಶ್ ಎಂ, ಕಾರ್ಯಕಾರಿ ಸಮಿತಿ ಸದಸ್ಯರು ಹಾಗೂ ಭಕ್ತಾಧಿಗಳು ಉಪಸ್ಥಿತರಿದ್ದರು.