ವಿಟ್ಲ: ಬಂಟ್ವಾಳ ತಾಲೂಕು ಇಡ್ಕಿದು ಗ್ರಾಮದ ಅಳಕೆಮಜಲು ಸರಕಾರಿ ಕಿರಿಯ ಪ್ರಾಥಮಿಕ ಶಾಲಾ ವಾರ್ಷಿಕೋತ್ಸವವು ಇಡ್ಕಿದು ಗ್ರಾ.ಪಂ. ಅಧ್ಯಕ್ಷರಾದ ಮೋಹಿನಿ ಜಯಕರರವರ ಅಧ್ಯಕ್ಷತೆಯಲ್ಲಿ ನಡೆಯಿತು.
ಇಡ್ಕಿದು ಗ್ರಾಮ ಮಾಜಿ ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ ಧ್ವಜಾರೋಹಣ ನಡೆಸಿದರು. ಅಡ್ಯನಡ್ಕ ಎಜುಕೇಶನ್ ಸೊಸೈಟಿಯ ಆಡಳಿತಾಧಿಕಾರಿ ರಮೇಶ್ ಬಾಯಾರು, ಪ್ರಮುಖರಾದ ರಾಜಾರಾಮ ಶೆಟ್ಟಿ ಕೋಲ್ಪೆಗುತ್ತು, ಇಡ್ಕಿದು ಗ್ರಾಮ ಪಂಚಾಯತ್ ಉಪಾಧ್ಯಕ್ಷರಾ್ ಪದ್ಮನಾಭ ಸಪಲ್ಯ, ಅಳಕೆಮಜಲು ಶಾರದಾಂಬ ಭಜನಾ ಮಂದಿರದ ಅಧ್ಯಕ್ಷ ಕೃಷ್ಣ ಕಿಶೋರ್, ಇಡ್ಕಿದು ಗ್ರಾ. ಪಂ. ಸದಸ್ಯರಾದ ತಿಲಕ್ ರಾಜ್ ಶೆಟ್ಟಿ, ಗೀತಾಂಜಲಿ,ಅಬ್ದುಲ್ ರಹಿಮಾನ್ ಅರಿಪೆಕಟ್ಟೆ, ಸುಧೀರ್ ಕುಮಾರ್ ಎ, ಸಿ.ಆರ್.ಪಿ. ಜ್ಯೋತಿ, ಶಿಕ್ಷಕಿ ಜಯಂತಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶಾಲಾ ಎಸ್.ಡಿ.ಎಂ.ಸಿ.ಅಧ್ಯಕ್ಷ ತಿರುಮಲೇಶ್ವರ ನಾಯ್ಕ ಸ್ವಾಗತಿಸಿದರು. ಶಾಲಾ ಮುಖ್ಯ ಶಿಕ್ಷಕ ಇಸ್ಮಾಯಿಲ್ ವರದಿ ವಾಚಿಸಿ ವಂದಿಸಿದರು.
ಇದೇ ಸಂದರ್ಭದಲ್ಲಿ ವಿವಿಧ ಸ್ಪರ್ಧೆ ಗಳಲ್ಲಿ ಗೆದ್ದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು, ಶಿಕ್ಷಕಿಯರಾದ ರಾಜೀವಿ .ಕೆ, ಶೋಭಾ ಟಿ.ಆರ್, ಜ್ಯೋತಿ ಪಿ. ಬಲ್ಕೀಸ್, ದಿವ್ಯ .ಡಿ, ಬಹುಮಾನಿತರ ಪಟ್ಟಿ ವಾಚಿಸಿದರು. ಕಾರ್ಯಕ್ರಮದಲ್ಲಿ ಎಸ್ ಡಿ.ಎಂ.ಸಿ ಉಪಾಧ್ಯಕ್ಷೆ ರೂಪಾ ಕಿಶೋರ್, ಹಾಗೂ ಎಸ್.ಡಿ.ಎಂ.ಸಿ ಸದಸ್ಯರು,ಎಸ್.ಡಿ.ಎಂಸಿ.ನಿಕಟ ಪೂರ್ವ ಅಧ್ಯಕ್ಷರಾದ ಸುಮಲತಾ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಮಿತಿ ಅಳಕೆಮಜಲು ಘಟಕದ ಪ್ರತಿನಿಧಿಯಾದ ಸುಗಂಧಿನಿ, ಶಾರದಾಂಬ ಭಜನಾ ಮಂಡಳಿ ನಿಕಟಪೂರ್ವ ಅಧ್ಯಕ್ಷರಾದ ಜಗದೀಶ್ ಪೂಜಾರಿ,ಉದ್ಯಮಿಗಳಾದ ಪ್ರವೀಣ್ ಕುಮಾರ್ ಶೆಟ್ಟಿ, ಪ್ರಮುಖರಾದ ಶಾಕಿರ್ ಅಳಕೆಮಜಲು, ಪೋಷಕರಾದ ಚಂದ್ರಪ್ರಭಾ, ಪ್ರಮೀಳ ಕಟ್ನಾಜೆ ವಿವಿಧ ಸಮಿತಿಗಳಲ್ಲಿ ಸಹಕರಿಸಿದರು. ಶಿಕ್ಷಕಿ ಅನುರಾಧ ಡಿ. ಕಾರ್ಯಕ್ರಮ ನಿರೂಪಿಸಿದರು. ಧ್ವಜಾರೋಹಣ ನಂತರ ಮಕ್ಕಳ ಸಾಮೂಹಿಕ ಕವಾಯತು ನಡೆಯಿತು. ಸಭಾ ಕಾರ್ಯಕ್ರಮದ ನಂತರ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.