ನೆಲ್ಯಾಡಿ: ಬಲ್ಯ ರಾಮನಗರದಲ್ಲಿರುವ ಶ್ರೀ ನಾವಲ್ಲಿ ನಾಗದೇವರು, ಅಮೆತ್ತಿಮಾರುಗುತ್ತು ಶ್ರೀ ರಕ್ತೇಶ್ವರೀ ಗುಳಿಗ ದೈವ, ಶ್ರೀ ನಾವಲ್ಲಿ ಪಂಜುರ್ಲಿ, ಶ್ರೀ ಕಲ್ಲುರ್ಟಿ ಮತ್ತು ಪಾತ್ರಾಜೆ ಶ್ರೀ ಪಂಜುರ್ಲಿ ದೈವಗಳ ವಾರ್ಷಿಕ ಪ್ರತಿಷ್ಠಾ ಮಹೋತ್ಸವ ವೇದಮೂರ್ತಿ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ಶುಭಾಶೀರ್ವಾದದೊಂದಿಗೆ ಗಡಿಕಲ್ಲು ವೆಂಕಟೇಶ ಭಟ್‌ರವರ ಸಹಕಾರದಲ್ಲಿ ಶ್ರೀವತ್ಸ ಭಟ್‌ರವರ ವೈದಿಕ ನೇತೃತ್ವದಲ್ಲಿ ಡಿ.9ರಂದು ನಡೆಯಿತು.
ಬೆಳಿಗ್ಗೆ ಗಣಹೋಮ ನಡೆಯಿತು. ನಂತರ ಶ್ರೀ ನಾವಲ್ಲಿ ನಾಗದೇವರಿಗೆ ತಂಬಿಲಸೇವೆ ನಡೆಯಿತು. ಶ್ರೀ ಪಾತ್ರಾಜೆ ಪಂಜುರ್ಲಿ ದೈವದ ತಂಬಿಲ ಸೇವೆ, ಶ್ರೀ ನಾವಲ್ಲಿ ಪಂಜುರ್ಲಿ, ಶ್ರೀ ಕಲ್ಲುರ್ಟಿ ದೈವಗಳಿಗೆ ತಂಬಿಲ ಸೇವೆ, ಶ್ರೀ ಅಮೆತ್ತಿಮಾರುಗುತ್ತು ಶ್ರೀ ರಕ್ತೇಶ್ವರೀ ಮತ್ತು ಶ್ರೀ ಗುಳಿಗ ದೈವಗಳಿಗೆ ತಂಬಿಲ ಸೇವೆ ನಡೆಯಿತು. ಮಧ್ಯಾಹ್ನ ಮಹಾಪೂಜೆ ನಡೆದು ಪ್ರಸಾದ ವಿತರಣೆ ಬಳಿಕ ಅನ್ನಸಂತರ್ಪಣೆ ನಡೆಯಿತು.
ಭಜನಾ ಸೇವೆ:
ಬೆಳಿಗ್ಗೆ ಬಲ್ಯ-ರಾಮನಗರ ಶ್ರೀ ವಿನಾಯಕ ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮ ನಡೆಯಿತು. ಭಜನಾ ಸೇವೆ ನಡೆಸಿಕೊಟ್ಟ ವಿಶ್ವನಾಥ ಗೌಡರವರಿಗೆ ಶಾಲು ಹಾಕಿ, ಫಲಪುಷ್ಪ, ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಯಕ್ಷಗಾನ ತಾಳಮದ್ದಳೆ:
ಮಧ್ಯಾಹ್ನ ಶ್ರೀ ವಿನಾಯಕ ಯಕ್ಷಗಾನ ಮಂಡಳಿ ಬಲ್ಯ ನೆಲ್ಯಾಡಿ ಮತ್ತು ಅತಿಥಿ ಕಲಾವಿದರ ಕೂಡುವಿಕೆಯಿಂದ ’ ವಾಲಿಮೋಕ್ಷ ’ ಯಕ್ಷಗಾನ ತಾಳಮದ್ದಳೆ ನಡೆಯಿತು. ಹಿಮ್ಮೇಳದಲ್ಲಿ ಭಾಗವತರಾಗಿ ಆನಂದ ಸವಣೂರು, ಮದ್ದಳೆಯಲ್ಲಿ ಮುರಳೀಧರ ಕಲ್ಲೂರಾಯ ಕುಂಜೂರು ಪಂಜ, ಚೆಂಡೆಯಲ್ಲಿ ಲಕ್ಷ್ಮೀಶ ಭಟ್ ಪಂಜ, ಮುಮ್ಮೇಳದಲ್ಲಿ ಅತಿಥಿ ಕಲಾವಿದರಾಗಿ ಮಹಾಲಿಂಗೇಶ್ವರ ಭಟ್ ರಾಮಕುಂಜ, ಹರೀಶ ಆಚಾರ್ಯ ಉಪ್ಪಿನಂಗಡಿ, ವಿನಾಯಕ ಯಕ್ಷಗಾನ ಮಂಡಳಿಯ ಕಲಾವಿದರಾದ ಅಮ್ಮಿ ಗೌಡ ನಾಲ್ಗುತ್ತು, ಕಿರಣ್ ಪುತ್ತಿಲ, ಗಂಗಾಧರ ಶೆಟ್ಟಿ ಅಮೆತ್ತಿಮಾರುಗುತ್ತು ಸಹಕರಿಸಿದರು. ಕಿರಣ್ ಪುತ್ತಿಲ ಸ್ವಾಗತಿಸಿದರು. ಗಂಗಾಧರ ಶೆಟ್ಟಿ ವಂದಿಸಿದರು. ಯಕ್ಷಗಾನ ತಾಳಮದ್ದಳೆಯ ಸೇವಾಕರ್ತ ಜಯರಾಮ ಗೌಡರವರ ಪರವಾಗಿ ನಿತ್ಯಾನಂದ ಗೌಡರವರಿಗೆ ಶಾಲು ಹಾಕಿ, ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಪುರುಷೋತ್ತಮ ಶೆಟ್ಟಿ ಕೊಂಬಿಲ, ಅಮೆತ್ತಿಮಾರುಗುತ್ತು ಕೃಷ್ಣ ಶೆಟ್ಟಿ ಕಡಬ, ರವಿಪ್ರಸಾದ್ ಶೆಟ್ಟಿ ಅಮೆತ್ತಿಮಾರುಗುತ್ತು, ಪದೆಂಜಿಳಗುತ್ತು ಪ್ರವೀಣ್ ಶೆಟ್ಟಿ, ಜಗನ್ನಾಥ ಪೂಂಜ ತದ್ಮಬಾಳಿಕೆ, ಅಮೆತ್ತಿಮಾರುಗುತ್ತು ಮನೆತನದ ಹಿರಿಯರಾದ ರೇವತಿ ನಾರಾಯಣ ಶೆಟ್ಟಿ, ಪರಮೇಶ್ವರಿ ಬಾಲಕೃಷ್ಣ ಶೆಟ್ಟಿ, ಪುಷ್ಪಾಬಾಲಕೃಷ್ಣ ರೈ ಸೊರಕೆ, ಶಾಲಿನಿ ಜಗನ್ನಾಥ ಪೂಂಜ, ಅಮೆತ್ತಿಮಾರುಗುತ್ತು ಮನೆತನದ ಗೀತಾ ಶಶಿಧರ ಆಳ್ವ, ಜಯಹರೀಶ್ ರೈ, ಪೃಥ್ವಿಪ್ರಶಾಂತ್ ಶೆಟ್ಟಿ, ದೈವಗಳ ಕೂಡುಗಟ್ಟಿನ ಪ್ರಮುಖರಾದ ಗಂಗಾಧರ ಶೆಟ್ಟಿ ಅಮೆತ್ತಿಮಾರುಗುತ್ತು, ರಮೇಶ ಗೌಡ ನಾಲ್ಗುತ್ತು, ಶಶಿ ರೈ, ಯಾದವ ಶೆಟ್ಟಿ, ರವಿ ಶೆಟ್ಟಿ, ನಾರಾಯಣ ಗೌಡ ಪಾತ್ರಾಜೆ, ಉದಯ್ ಕುಮಾರ್ ಶೆಟ್ಟಿ, ಸುರೇಶ ಗೌಡ, ಉದಯ್ ಗೌಡ ಪಾತ್ರಾಜೆ, ಕೃಷ್ಣಪ್ಪ ಗೌಡ ಪಾತ್ರಾಜೆ, ದಿನೇಶ್ ಗೌಡ ಪಾತ್ರಾಜೆ, ನಿತ್ಯಾನಂದ ಗೌಡ ನಾಲ್ಗುತ್ತು, ಊರಿನ ಪ್ರಮುಖರು, ಗುರಿಕಾರರು ಭಾಗವಹಿಸಿದ್ದರು.