ಆಲಂಕಾರು: ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಗ್ರಾಮ ಸಮಿತಿ ಆಲಂಕಾರು ವಲಯ ಇದರ ವತಿಯಿಂದ ಡಿ. 29 ರಂದು ರವಿವಾರ ನಡೆಯಲಿರುವ ಬ್ರಹ್ಮಶ್ರೀ ನಾರಾಯಣ ಸ್ವಾಮೀಜಿಯವರ 170ನೇ ಜಯಂತಿಯ ಪ್ರಯುಕ್ತ, ಗುರು ಪೂಜೆಯ ಆಮಂತ್ರಣ ಪತ್ರಿಕೆ ಆಲಂಕಾರು ರತ್ನಶ್ರೀ ಪದ್ಮಾ ನಿಲಯದಲ್ಲಿ ಬಿಡುಗಡೆ ಮಾಡಲಾಯಿತು.
ಆಲಂಕಾರು ವಲಯ ಬಿಲ್ಲವ ಗ್ರಾಮ ಸಮಿತಿ ಅಧ್ಯಕ್ಷ ದಿನೇಶ್ ಕೇಪುಳು,ಉಪಾಧ್ಯಕ್ಷ ಚಂದ್ರಶೇಖರ ಪಟ್ಟೆಮಜಲು, ಕಾರ್ಯದರ್ಶಿ ಜಯಂತ ಎನ್ ನೆಕ್ಕಿಲಾಡಿ,ಆಲಂಕಾರು ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಮಾಧವ ಪೂಜಾರಿ ಕಯ್ಯಾಪ್ಪೆ, ಕೋಟಿ ಚೆನ್ನಯ ಮಿತ್ರವೃಂದ (ರಿ) ಆಲಂಕಾರು ಇದರ ಅಧ್ಯಕ್ಷ ರಮೇಶ್ ಕೇಪುಳು, ಹಳೆನೇರೆಂಕಿ ಬಿಲ್ಲವ ಸಂಘದ ಅಧ್ಯಕ್ಷ ಪುರುಷೋತ್ತಮ ಬರೆಂಬೆಟ್ಟು, ಆಲಂಕಾರು ವಲಯ ಸಂಚಾಲಕ ದಯಾನಂದ ಕರ್ಕೇರ ಮಡ್ಯೊಟ್ಟು ,ಆಲಂಕಾರು ಬಿಲ್ಲವ ಸಂಘದ ಗೌರವ ಸಲಹೆಗಾರ ತಿಮ್ಮಪ್ಪ ಪೂಜಾರಿ ಕಿನ್ನಿಗೋಳಿ, ಶ್ರೀ ಕ್ಷೇತ್ರ ಶರವೂರು ದುರ್ಗಾಪರಮೇಶ್ವರಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಸದಸ್ಯ ಸದಾನಂದ ಕುಮಾರ್ ಮಡ್ಯೊಟ್ಟು,ಆಲಂಕಾರು ಕೋಟಿ ಚೆನ್ನಯ ಮಿತ್ರವೃಂದದ ಗೌರವಾಧ್ಯಕ್ಷ ಜಯಂತ ಪೂಜಾರಿ ನೆಕ್ಕಿಲಾಡಿ, ಆಲಂಕಾರು ಬಿಲ್ಲವ ಗ್ರಾಮ ಸಮಿತಿಯ ಮಹಿಳಾ ವೇದಿಕೆ ಅಧ್ಯಕ್ಷೆ ಮಲ್ಲಿಕಾ ಜಯಕರ ಪೂಜಾರಿ ಕಲ್ಲೇರಿ,ಮಹಿಳಾ ವೇದಿಕೆಯ ವಲಯ ಸಂಚಾಲಕಿ ಪ್ರಮೀಳಾ ಜಯಂತ ಪೂಜಾರಿ ನೆಕ್ಕಿಲಾಡಿ, ವಿದ್ಯಾರ್ಥಿ ಸಂಘದ ಅಧ್ಯಕ್ಷ ಭರತ್ ಕೇಪುಳು, ಉಮೇಶ್ ಕೇಪುಳು, ಭವ್ಯ ರಮೇಶ್ ಕೇಪುಳು,ಮಮತಾ ಜಿನ್ನಪ್ಪ ಪೂಜಾರಿ ಉಪಸ್ಥಿತರಿದ್ದರು.