ನಿವೃತ್ತ ಉಪ ತಹಶೀಲ್ದಾರ್ ಯಶೋಧ ನಿಧನ

0

ಪುತ್ತೂರು: ಮುಂಡೂರು ಗ್ರಾಮದ ಕೊಡಿನೀರು ಮರತ್ತಡ್ಕ ಮನೆಯ ಎಲ್ಯಣ್ಣ ಗೌಡರ ಪತ್ನಿ ಯಶೋಧ (75ವ.) ರವರು ಅಸೌಖ್ಯದಿಂದ ಡಿ.14 ರಂದು ಮಂಗಳೂರಿನ ಖಾಸಗಿ ಅಸ್ಪತ್ರೆಯಲ್ಲಿ ನಿಧನರಾದರು.

ಯಶೋಧ 1969ರಲ್ಲಿ ಕಂದಾಯ ಇಲಾಖೆಗೆ ನೇಮಕಗೊಂಡು ವಿವಿಧ ಹುದ್ದೆಗಳನ್ನು ನಿರ್ವಹಿಸಿದ್ದರು. ನಂತರ ಗ್ರಾಹಕರ ಕೋರ್ಟ್‌ನಲ್ಲಿ ಮತ್ತು ದ.ಕ ಜಿಲ್ಲಾಧಿಕಾರಿ ಕಛೇರಿಯಲ್ಲಿ ಸುಪರಿಡೆಂಟ್ ಹುದ್ದೆಯನ್ನು ನಿರ್ವಹಿಸಿ ಪಂಜ ನಾಡಕಛೇರಿಗೆ ವರ್ಗಾವಣೆಗೊಂಡು ಉಪ ತಹಶೀಲ್ದಾರ್ ಆಗಿ ಕಾರ್ಯನಿರ್ವಹಿಸಿದ್ದರು. 2007ರಲ್ಲಿ ಸುಧೀರ್ಘ 39 ವರ್ಷ ಕರ್ತವ್ಯ ನಿರ್ವಹಿಸಿ ನಿವೃತ್ತರಾದರು.

ಮೃತರು ಪತಿ ಪುತ್ತೂರು ಕೋ- ಓಪರೇಟಿವ್ ಟೌನ್ ಬ್ಯಾಂಕ್ ಮತ್ತು ಪರಿವಾರ ಕ್ರೆಡಿಟ್ ಕೋ- ಓಪರೇಟಿವ್ ಸೊಸೈಟಿಯ ನಿವೃತ್ತ ಆಫೀಸರ್ ಎಲ್ಯಣ್ಣ ಗೌಡ, ಪುತ್ರರಾದ ಸತೀಶ್ ಕುಮಾರ್,ಹರೀಶ್ ಕುಮಾರ್, ಸೊಸೆ ಜಲಜ ಹಾಗೂ ಮೊಮ್ಮಕ್ಕಳಾದ ಸಂಜನಾ, ಸಿಂಚನ ರವರನ್ನು ಅಗಲಿದ್ದಾರೆ.

ನೆಕ್ರಾಜೆ ಕುಟುಂಬಸ್ಥರು, ಬಂಧುಗಳು,ಹಿತೈಷಿಗಳು ಆಗಮಿಸಿ ಅಂತಿಮ ನಮನ ಸಲ್ಲಿಸಿದರು.

LEAVE A REPLY

Please enter your comment!
Please enter your name here