ಪುತ್ತೂರು: ಮುಕ್ರಂಪಾಡಿಯಲ್ಲಿರುವ ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜುನಲ್ಲಿ ಡಿ.6 ರಂದು ಪ್ರತಿಭಾ ಪುರಸ್ಕಾರ ಹಾಗೂ ವಾರ್ಷಿಕೋತ್ಸವ ಸಮಾರಂಭ ಜರಗಿತು. ಸಭಾ ಕಾರ್ಯಕ್ರಮವನ್ನು ಕೌನ್ಸಿಲರ್ ಹಾಗೂ ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯರಾದ ಇಂದಿರಾ ಪುರೋಷತ್ತಮ್ ಆಚಾರ್ಯ ದೀಪ ಪ್ರಜ್ವಲಿಸುವುದರರೊಂದಿಗೆ ಉದ್ಘಾಟಿಸಿ, ಸರಕಾರಿ ಕಾಲೇಜೊಂದು ಶಿಸ್ತು ಬದ್ಧತೆ, ಕ್ರೀಯಾಶೀಲಾ ಸಮರ್ಥ ನಾಯಕತ್ಮ ವಿದ್ಯಾರ್ಥಿಗಳ ಸರ್ವಾಂಗಿಣ ಅಭಿವೃದ್ಧಿಗೆ ದಕ್ಷರೀತಿಯಲ್ಲಿ ಶಿಕ್ಷಕರು ತಮ್ಮನ್ನು ತೊಡಗಿಸಿಕೊಂಡು, ಶೈಕ್ಷಣಿಕವಾಗಿ ಶೇಕಡಾ 100% ಫಲಿತಾಂಶ ಸಾಧಿಸುವುದು ಹೆಮ್ಮೆಯ ವಿಷಯವಾಗಿದೆ.
ಇಲ್ಲಿನ ವಿದ್ಯಾರ್ಥಿ-ಶಿಕ್ಷಕರ ಸಂಬಂಧವು ತುಂಬಾ ಉತ್ತಮವಾಗಿದ್ದು ಇದು ವಿದ್ಯಾರ್ಥಿಗಳ ಪ್ರತಿಭೆ ಬೆಳೆಯಲು ಪೂರಕವಾಗಿದೆ ಎಂದು ಮಾತುಗಳನ್ನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜು ಅಭಿವೃದ್ಧಿ ಸಮಿತಿಯ ಕಾರ್ಯಾಧ್ಯಕ್ಷರಾದ ಮಲ್ಲಿಕಾ ಜೆ.ರೈವಹಿಸಿ, ಈ ಶೈಕ್ಷಣಿಕ ವರ್ಷದಲ್ಲೂ ಎಲ್ಲರೂ ಉತ್ತೀರ್ಣರಾಗಿ, 100% ಫಲಿತಾಂಶಕ್ಕೆ ಹಾರೈಸಿ ವಿದ್ಯಾರ್ಥಿಗಳ ಭವಿಷ್ಯ ಉಜ್ವಲವಾಗಲಿ ಎಂದು ಹಾರೈಸಿದರು.
ಕಾಲೇಜಿನ ಪ್ರಾಂಶುಪಾಲರಾದ ಪ್ರಮೀಳ ಜೆಸ್ಸಿ ಕ್ರಾಸ್ತಾ ವಾರ್ಷಿಕ ವರದಿ ವಾಚಿಸಿದರು. ಜ್ಯೋತಿ ಮತ್ತು ಬಳಗದವರು ಪ್ರಾರ್ಥಿಸಿದರು. ಉಪನ್ಯಾಸಕರಾದ ಚಿತ್ರಲೇಖ ಸ್ವಾಗತಿಸಿ, ದಾಮೋದರ ವಂದಿಸಿದರು. ಶೋಭಾ ಮತ್ತು ಲವೀನ ಲತಾ ಸಂತ್ ಮಯೋರ್ ಕಾರ್ಯಕ್ರಮ ನಿರೂಪಿಸಿದರು. ಕ್ರೀಡಾ ಸ್ಪರ್ಧೆಗಳ ವಿಜೇತರನ್ನು ದಾಮೋದರ್, ಸಾಂಸ್ಕೃತಿಕ ಸ್ಪರ್ಧೆಗಳ ವಿಜೇತರನ್ನು ಜಯಲಕ್ಷ್ಮಿ ನೆರವೇರಿಸಿದರು. ಸಂಧ್ಯಾ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಬಹುಮಾನಗಳನ್ನು ವಾಚಿಸಿದರು. ವಿಷಯವಾರುಗಳಲ್ಲಿ ಅತ್ಯಧಿಕ ಅಂಕಗಳಿಸಿದ ವಿದ್ಯಾರ್ಥಿನಿಯರಿಗೆ ರಾಜ್ಯಶಾಸ್ತ್ರ, ಉಪನ್ಯಾಸಕಿ ಚಿತ್ರಲೇಖಾ, ಲೆಕ್ಕಶಾಸ್ತ್ರ ಉಪನ್ಯಾಸಕಿ ಜಯಂತಿ, ಗಣಿತಶಾಸ್ತ್ರ ಉಪನ್ಯಾಸಕಿ ಜಯಲಕ್ಷ್ಮಿ.ಕೆ, ಜೀವಶಾಸ್ತ್ರ ಉಪನ್ಯಾಸಕಿ ಪ್ರಸನ್ನಕುಮಾರಿ, ಭೌತಶಾಸ್ತ್ರ ಉಪನ್ಯಾಸಕಿ ನಿರ್ಮಲ ಇವರಿಂದ ನಗದು ಬಹುಮಾನ ನೀಡಿ ಗೌರವಿಸಲಾಯಿತು.
ಇದೇ ಸಂಧರ್ಭದಲ್ಲಿ ಕಳೆದ ಶೈಕ್ಷಣಿಕ ಸಾಲಿನ ವಾರ್ಷಿಕ ಪರೀಕ್ಷೆಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ಪಾಸಾದ ವಿದ್ಯಾರ್ಥಿನಿಯರಿಗೆ ಕಾಲೇಜಿನ ವತಿಯಿಂದ ಸ್ಮರಣಿಕೆ ಹಾಗೂ ಚಂದ್ರಕಾಂತ್ ನಾಯಕ್ ಕೊಡಮಾಡುವ ನಗದು ಬಹುಮಾನ ನೀಡಿ ಗೌರವಿಸಲಾಯಿತು. ಪ್ರಾಂಶುಪಾಲರು ಕಾಲೇಜಿಗೆ 100% ಫಲಿತಾಂಶ ಬರಲು ಕಾರಣರಾದ ಎಲ್ಲಾ ಉಪನ್ಯಾಸಕರಿಗೆ ಸ್ಮರಣಿಕೆ ನೀಡಿ ಗೌರವಿಸಿದರು. ವೇದಿಕೆಯಲ್ಲಿ ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯರಾದ ಅಬ್ದುಲ್ ಅಝೀಜ್, ಅಬ್ದುಲ್ ಜಬ್ಬರ್, ಜೆರೋಮಿಯಸ್ ಪಾಯಸ್, ಬಾಲಕೃಷ್ಣ ಹಾಗೂ ಕಾಲೇಜು ವಿದ್ಯಾರ್ಥಿ ನಾಯಕಿ ಇಂಚರ ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿದವು.