ಪುತ್ತೂರು: ಶ್ರೀ ಅಯ್ಯಪ್ಪ ಸೇವಾ ಸಮಿತಿ ಅರಿಯಡ್ಕ ಕೌಡಿಚ್ಚಾರು ಹಾಗೂ ಶ್ರೀ ಕೃಷ್ಣ ಭಜನಾ ಮಂದಿರ ಕೌಡಿಚ್ಚಾರು ಇದರ ಹಿರಿತನದಲ್ಲಿ ಶ್ರೀ ಅಯ್ಯಪ್ಪ ಸ್ವಾಮಿಯ ದೀಪೋತ್ಸವ ಡಿ.20ರಂದು ಮೊದಲ್ಗೊಂಡು ಡಿ.21ರವರೆಗೆ ಚಾಣ ಗುರುಸ್ವಾಮಿ ಆಲಂತಾಯ ಇವರ ಹಿರಿತನದಲ್ಲಿ ಬಾಬು ಗುರುಸ್ವಾಮಿ ಕಲ್ಲಡ್ಕ ಅವರ ಉಪಸ್ಥಿತಿಯಲ್ಲಿ ಶ್ರೀ ಕೃಷ್ಣ ಮಂದಿರ ಕೌಡಿಚ್ಚಾರು ಇದರ ವಠಾರದಲ್ಲಿ ನಡೆಯಲಿದೆ ಎಂದು ಶ್ರೀ ಕೃಷ್ಣ ಭಜನಾ ಮಂದಿರದ ಕೋಶಾಧಿಕಾರಿ ತಿಲಕ್ ರೈ ಕುತ್ಯಾಡಿ ಹಾಗೂ ಅಯ್ಯಪ್ಪ ಸೇವಾ ಸಮಿತಿಯ ಅಧ್ಯಕ್ಷ ಬಾಬು ಟಿ ಅವರು ತಿಳಿಸಿದ್ದಾರೆ.
ಪುತ್ತೂರು ಪ್ರೆಸ್‌ಕ್ಲಬ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಡಿ.20ರಂದು ಬೆಳಿಗ್ಗೆ ಗಣಪತಿ ಹೋಮ, ಕೌಡಿಚ್ಚಾರು ನಾಗನ ಕಟ್ಟೆಯಲ್ಲಿ ನಾಗ ತಂಬಿಲ, ಮಂದಿರದಲ್ಲಿ ಶ್ರೀ ಕೃಷ್ಣ ದೇವರಿಗೆ ಪೂಜೆ ಮತ್ತು ಪ್ರಾರ್ಥನೆ ,ಶ್ರೀ ಕೃಷ್ಣ ಭಜನಾ ಮಂಡಳಿಯಿಂದ ಭಜನಾ ಕಾರ್ಯಕ್ರಮ ನಡೆದು ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ.
ಸಂಜೆ 5 ಕ್ಕೆ ಪೆರಿಗೇರಿ ಶ್ರೀ ಅಯ್ಯಪ್ಪ ಭಜನಾ ಮಂದಿರದಿಂದ ಪಾಲ್ ಕೊಂಬು ಮೆರವಣಿಗೆ ,ಕುಣಿತಾ ಭಜನೆ ಆರಂಭಗೊಂಡು ಕೌಡಿಚ್ಚಾರು ಭಜನಾ ಮಂದಿರವರೆಗೆ ನಡೆಯಲಿದೆ. ರಾತ್ರಿ 8.30ಕ್ಕೆ ಸಾರ್ವಜನಿಕ ಅನ್ನಸಂತರ್ಪಣೆ ,ಅಯ್ಯಪ್ಪ ವೃತದಾರಿಗಳಿಗೆ ಉಪಾಹಾರ ನಡೆಯಲಿದೆ. ಬಳಿಕ ಗಯಾಪದ ಕಲವಿದೆರ್ ಉಬಾರ್ ತಂಡದಿಂದ ನಾಗ ಮಾಣಿಕ್ಯ ನಾಟಕ ನಡೆಯಲಿದೆ. ರಾತ್ರಿ 10.30ಕ್ಕೆ ಅಗ್ನಿ ಸ್ಪರ್ಶ ,ರಾತ್ರಿ 11 ಗಂಟೆಗೆ ಅಪ್ಪ ಸೇವೆ ನಡೆಯಲಿದೆ.
ಡಿ.21ರಂದು ಪ್ರಾತಃಕಾಲ 4 ಗಂಟೆಗೆ ಶ್ರೀ ಸ್ವಾಮಿಯ ಅಗ್ನಿ ಸೇವೆ ,5 ಗಂಟೆಗೆ ಕರ್ಪೂರಾರತಿ ,ಪ್ರಸಾದ ವಿತರಣೆ ನಡೆಯಲಿದೆ.
ಕೌಡಿಚ್ಚಾರು ಭಜನಾ ಮಂದಿರದಲ್ಲಿ ಕಳೆದ 50 ವರ್ಷಗಳಿಂದ ಅಯ್ಯಪ್ಪ ಭಕ್ತರಿಗೆ ಮಾಲಾಧಾರಣೆ ಮಾಡುತ್ತಿದ್ದ ದಿ.ಬಾಬು ಗುರುಸ್ವಾಮಿ ಎರ್ಕ ಅವರಿಗೆ ಅಯ್ಯಪ್ಪ ದೀಪೋತ್ಸವ ನಡೆಸಬೇಕೆಂಬ ಬಯಕೆ ಹೊಂದಿದ್ದರು.ಅವರು ಕಳೆದ ಎಪ್ರಿಲ್ ನಲ್ಲಿ ದೈವಾಧೀನರಾಗಿದ್ದು, ಅವರ ಇಚ್ಛೆಯನ್ನು ಈಡೇರಿಸಲು ಅವರ ಶಿಷ್ಯಂದಿರು ಊರವರನ್ನು ಸೇರಿಸಿಕೊಂಡು ಈ ಕಾರ್ಯಕ್ರಮ ನಡೆಸುತ್ತಿದ್ದಾರೆ ಎಂದು ತಿಲಕ್ ರೈ ಹೇಳಿದರು.
2000 ಭಕ್ತಾದಿಗಳು ಸೇರುವ ನಿರೀಕ್ಷೆ
ಕಾರ್ಯಕ್ರಮದಲ್ಲಿ 500 ಕ್ಕೂ ಅಧಿಕ ಅಯ್ಯಪ್ಪ ಭಕ್ತಾದಿಗಳು ಸಹಿತ 2000 ಜನರು ಪಾಲ್ಗೊಳ್ಳುವ ನಿರೀಕ್ಷೆ ಇದೆ.ಕೌಡಿಚ್ಚಾರು ಭಜನಾ ಮಂದಿರದಲ್ಲಿ ಮೊದಲ ಬಾರಿಗೆ ಈ ಅಯ್ಯಪ್ಪ ದೀಪೋತ್ಸವ ನಡೆಯುತ್ತಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಅಯ್ಯಪ್ಪ ಸೇವಾ ಸಮಿತಿ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಚೆನ್ನಾವರ ,ಉಪಾಧ್ಯಕ್ಷ ಮೋಹನ್ ಟಿ., ಶ್ರೀ ಕೃಷ್ಣ ಭಜನಾ ಮಂದಿರದ ಪ್ರಧಾನ ಕಾರ್ಯದರ್ಶಿ ದೀಪಕ್ ಕುಲಾಲ್ ಕೌಡಿಚ್ಚಾರು ಉಪಸ್ಥಿತರಿದ್ದರು.