ಹಿರೆಬಂಡಾಡಿ: ಸಂಜೀವಿನಿ ಮಿತ್ರವೃಂದ ಕೊಯಿಲ-ಹಿರೆಬಂಡಾಡಿ ಇದರ ಆಶ್ರಯದಲ್ಲಿ ೬ನೇ ವರ್ಷದ ಕಥಾಸಹಿತ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ, ಧಾರ್ಮಿಕ ಸಭೆ ಡಿ.21ರಂದು ಶಾಖೆಪುರ ಮೈದಾನದಲ್ಲಿ ನಡೆಯಲಿದೆ.
ಬೆಳಿಗ್ಗೆ 9 ಗಂಟೆಗೆ ಗಣಹೋಮ ನಡೆಯಲಿದೆ. ಅಪರಾಹ್ನ 4 ಗಂಟೆಗೆ ಕಶೆಕೋಡಿ ಸೂರ್ಯನಾರಾಯಣ ಭಟ್‌ರವರ ನೇತೃತ್ವದಲ್ಲಿ ಶ್ರೀ ಸತ್ಯನಾರಾಯಣ ಪೂಜೆ, 6ರಿಂದ ಪ್ರಸಾದ ವಿತರಣೆ ನಡೆಯಲಿದೆ. 6.30ರಿಂದ ಸಂಜೀವಿನಿ ವೇದಿಕೆಯಲ್ಲಿ ಧಾರ್ಮಿಕ ಸಭೆ ನಡೆಯಲಿದ್ದು ಉಡುಪಿ ಶ್ರೀ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಆಶೀರ್ವಚನ ನೀಡಲಿದ್ದಾರೆ. ಸಂಜೀವಿನಿ ಮಿತ್ರವೃಂದ ಶಾಖೆಪುರ ಇದರ ಸದಸ್ಯ ಮೋಹನ್ ಚಂದ್ರ ಮಾಳ ಅಧ್ಯಕ್ಷತೆ ವಹಿಸಲಿದ್ದಾರೆ. ಖ್ಯಾತ ಯುವ ವಾಗ್ಮಿ ಹಾರಿಕಾ ಮಂಜುನಾಥ್ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಕಾರ್ಯಕ್ರಮದಲ್ಲಿ ಚೆನ್ನಪ್ಪ ಗೌಡ ಬೇಂಗದಪಡ್ಪು, ಮೋಹನ ಸೀಂಕ್ರ ಕೊಡಂಗೆ, ಗುಣಕರ ಕೆರ್ನಡ್ಕ, ಶಿವರಾಮ್ ಗೌಡ ಬಂಡಾಡಿ, ಮೋಹನ ಪೆರ್ಲ, ಯತೀಶ ನಿಡ್ಡೆಂಕಿ, ಸತೀಶ ಪಲ್ಲೆಜಾಲು ಅವರಿಗೆ ಸನ್ಮಾನ ನಡೆಯಲಿದೆ.
ರಾತ್ರಿ 9.೦೦ರಿಂದ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ ಗಂಟೆ 9.30ರಿಂದ ಬೆನಕ ಆರ್ಟ್ಸ್ ಕುಡ್ಲ ಕಲಾವಿದರಿಂದ ಸತ್ಯ ಕಥಾ ಆಧಾರಿತ ತುಳು ಪೌರಾಣಿಕ ನಾಟಕ ’ ಪೊರಿಪುದಪ್ಪೆ ಜಲದುರ್ಗೆ ’ ಚಿತ್ರಾಪುರದ ಸತ್ಯ ಕಥಾ ಆಧಾರಿತ ತುಳು ಪೌರಾಣಿಕ ನಾಟಕ ನಡೆಯಲಿದೆ ಎಂದು ಸಂಜೀವಿನಿ ಮಿತ್ರವೃಂದ ಪ್ರಕಟಣೆ ತಿಳಿಸಿದೆ.