ಪುತ್ತೂರು:ನೆಟ್ಟಣಿಗೆ ಮುಡ್ನೂರು ಸರಕಾರಿ ಪ್ರೌಢಶಾಲೆಯ ಶಾಲಾ ವಾರ್ಷಿಕ ಕ್ರೀಡಾಕೂಟ ಇತ್ತೀಚೆಗೆ ನಡೆಯಿತು.ನೆಟ್ಟಣಿಗೆ ಮುಡ್ನೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷ ರಾಮ ಮೇನಾಲ ಇವರು ಉದ್ಘಾಟಿಸಿದರು.
ಧ್ವಜಾರೋಹಣವನ್ನು ನಿಕಟಪೂರ್ವ ಕಾರ್ಯಾಧ್ಯಕ್ಷ ಮಂಜುನಾಥ ರೈ ಸಾಂತ್ಯ ನೆರವೇರಿಸಿದರು. ಧ್ವಜವಂದನೆಯನ್ನು ಮುಖ್ಯ ಅತಿಥಿ ವಿಶ್ರಾಂತ ದೈಹಿಕ ಶಿಕ್ಷಣ ಶಿಕ್ಷಕ ರಘುನಾಥ ರೈ ಕುತ್ಯಾಳ ಸ್ವೀಕರಿಸಿದರು.
ಸಭಾಧ್ಯಕ್ಷತೆಯನ್ನು ಶಾಲಾ ಕಾರ್ಯಾಧ್ಯಕ್ಷ ಶ್ರೀರಾಮ್ ಪಕ್ಕಳ ವಹಿಸಿದ್ದರು. ನೆಟ್ಟಣಿಗೆ ಮುಡ್ನೂರು ಗ್ರಾಮ ಪಂಚಾಯತ್ ಅಧ್ಯಕ್ಷ ಫೌಝಿಯಾ ಇಬ್ರಾಹಿಂ ಶುಭ ಹಾರೈಸಿದರು. ಮುಖ್ಯ ಅತಿಥಿ ರಘುನಾಥ ರೈ ಕುತ್ಯಾಳ ಇವರನ್ನು ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ವತಿಯಿಂದ ಸನ್ಮಾನಿಸಲಾಯಿತು. ಸನ್ಮಾನಿತರನ್ನು ದೈಹಿಕ ಶಿಕ್ಷಣ ಶಿಕ್ಷಕ ದೇವಿಪ್ರಕಾಶ್ ಶೆಟ್ಟಿ ರಪರಿಚಯಿಸಿದರು.
ವೇದಿಕೆಯಲ್ಲಿ ಶಾಲಾಭಿವೃದ್ಧಿ ಸದಸ್ಯರಾದ ಮಹಾಬಲ ರೈ, ಇಬ್ರಾಹಿಂ ಪಳ್ಳತ್ತೂರು, ಅಬ್ದುಲ್ ಖಾದರ್ ಸುರುಳಿಮೂಲೆ, ಸದಾಶಿವ ರೈ ನಡುಬೈಲು, ವೆಂಕಪ್ಪ ನಾಯ್ಕ, ನಾರಾಯಣ ನಾಯ್ಕ, ವಿಕ್ರಂ ರೈ ಸಾಂತ್ಯ, ಸೂಫಿ ಬಾಂಟಡ್ಕ, ಫೌಝಿಯಾ, ವತ್ಸಲಾ, ಮಹಮ್ಮದ್ ಪಳ್ಳತ್ತೂರು ಉಪಸ್ಥಿತರಿದ್ದರು.
ಸಾಂತ್ಯ ನಿವೃತ್ತ ಶಿಕ್ಷಕ ಆನಂದ ರೈ, ಈಶ್ವರಮಂಗಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ರವೀಂದ್ರ ಮಾಣಿಲತ್ತಾಯ, ಈಶ್ವರಮಂಗಲ ಸಂದೀಪ ಕಾರಂತ, ಪ್ರವೀಣ್ ರೈ ಮೇನಾಲ, ವಿನೋದ್ ರೈ ಈಶ್ವರಮಂಗಲ, ಸನತ್ ರೈ ಮೂಡಾಯೂರು, ಶರತ್ ರೈ ನೆಲ್ಲಿತ್ತಡ್ಕ, ಪ್ರಜ್ವಲ್ ಮಡ್ಯಲಮಜಲು, ಮಾಧವ ಅಡ್ಡಂತಡ್ಕ, ಕೊರಗಪ್ಪ ನಾಯ್ಕ್ ಕಲ್ಲಾಜೆ, ಡಾ. ಸರಳಾ ಕುದ್ರೋಳಿ, ಅಬ್ದುಲ್ ಅಝೀಝ್, ನವನೀತ್ ರೈ ಸುಳ್ಯ ಇಂಜಿನಿಯರ್, ಲಕ್ಷ್ಮೀ ಕಲ್ಲಾಜೆ, ಸತ್ಯಭಾಮ, ಉಷಾ, ಶ್ರೀ ವೆಂಕಟ್ರಮಣ ಗೌಡ ಇವರು ಶುಭಹಾರೈಸಿದರು.
ಶಾಲಾ ಮುಖ್ಯ ಶಿಕ್ಷಕ ಪ್ರೇಮ್ ಕುಮಾರ್ ಸ್ವಾಗತಿಸಿದರು. ಕರ್ನೂರು ಹಿ.ಪ್ರಾ.ಶಾಲಾ ದೈಹಿಕ ಶಿಕ್ಷಣ ಶಿಕ್ಷಕ ರಮೇಶ್ ಶಿರ್ಲಾಲು ಹಾಗೂ ಶಿಕ್ಷಕಿಯರಾದ ಮೀನಾಕ್ಷಿ, ದಮಯಂತಿ, ಮೋನಿಷಾ, ಪ್ರಿಯಾ ಸಹಕರಿಸಿದರು. ಗಣಿತ ಶಿಕ್ಷಕರಾದ ಪುರುಷೋತ್ತಮ ಬಿ. ಇವರು ವಂದಿಸಿದರು. ಸಮಾಜ ವಿಜ್ಞಾನ ಶಿಕ್ಷಕಿ ಇಂದಿರಾ ಎ. ಇವರು ಕಾರ್ಯಕ್ರಮ ನಿರೂಪಿಸಿದರು.