ಕೆಯ್ಯೂರು : ಕೆ ಪಿಎಸ್ ಕೆಯ್ಯೂರು ಪ್ರಾಥಮಿಕ ವಿಭಾಗದ ವಿದ್ಯಾರ್ಥಿಗಳಿಂದ ದ. 20ರಂದು ಮೆಟ್ರಿಕ್ ಮೇಳ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೆಪಿಎಸ್ ಕೆಯ್ಯೂರು ಎಸ್.ಡಿ.ಎಂ.ಸಿ ಉಪಾಧ್ಯಕ್ಷ ಚರಣ್ ಕುಮಾರ್ ಸಣಂಗಳ ವಹಿಸಿ, ರಿಬ್ಬನ್ ತುಂಡರಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ, ವಿದ್ಯಾರ್ಥಿಗಳು ತಯಾರಿಸಿದ ವಸ್ತುಗಳನ್ನು ಖರೀದಿಸುವ ಮೂಲಕ ಚಾಲನೆ ನೀಡಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಕೆಪಿಎಸ್ ಕೆಯ್ಯೂರು ಪ್ರಾಂಶುಪಾಲ ಇಸ್ಮಾಯಿಲ್ ಕೆ, ಉಪಪ್ರಾಂಶುಪಾಲ ವಿನೋದ್ ಕುಮಾರ್ ಕೆಎಸ್, ಕಾರ್ಯಕ್ರಮಕ್ಕೆ ಮಾರ್ಗದರ್ಶನ ನೀಡಿದರು. ಕೆಪಿಎಸ್ ಕೆಯ್ಯೂರು ಎಸ್.ಡಿ.ಎಂ.ಸಿ ಸದಸ್ಯರು, ಹಿರಿಯ ವಿದ್ಯಾರ್ಥಿ ಸಂಘ ಕಾರ್ಯದರ್ಶಿ, ಸದಸ್ಯರು, ಶಾಲಾ ಶಿಕ್ಷಕ ವೃಂದ ಹಾಗೂ ಪೋಷಕರು ಭಾಗವಹಿಸಿದ್ದರು.ಕೆಪಿಎಸ್ ಕೆಯ್ಯೂರು ಪ್ರಾಥಮಿಕ ವಿಭಾಗ ಮುಖ್ಯ ಗುರು ಬಾಬು ಎಂ ಸ್ವಾಗತಿಸಿ, ಶಿಕ್ಷಕ ರವಿ ವಂದಿಸಿದರು.
ವಿದ್ಯಾರ್ಥಿಗಳು ತಾವೇ ತಯಾರಿಸಿದ ವಸ್ತುಗಳ ಮೆಟ್ರಿಕ್ ಮೇಳದಲ್ಲಿ ವಿದ್ಯಾರ್ಥಿಗಳು ತಯಾರಿಸಿದ ವಿವಿಧ ಬಗೆಯ ತಿಂಡಿ ಕೇಕ್, ಉಪ್ಪಿನಕಾಯಿ, ಚಟ್ಟಂಬಡೆ, ಎಳೆನೀರು ಜ್ಯೂಸ್, ವಿವಿದ ಬಗೆಯ ಐಸ್ ಕ್ರಿಮ್, ಮನೆಯಲ್ಲಿ ಬೆಳೆದ ಸೌತೆಕಾಯಿ, ಸೊರೆಕಾಯಿ , ಬಸಳೆ, ಕುಂಬಲಕಾಯಿ, ಕಬ್ಬು, ಹರಿವೆ, ತೆಂಗಿನಕಾಯಿ, ನೆಲ್ಲಿಕಾಯಿ, ಪಪ್ಪಾಯಿ, ಕಲ್ಲಂಗಡಿ, ಚರುಮುರಿ ,ಬಗೆ ಬಗೆಯ ತಿಂಡಿ ತಿನಿಸುಗಳು , ಹಣ್ಣು ಹಂಪಲುಗಳು, ಬಟ್ಟೆಗಳನ್ನು ಮಾರಾಟ ಮಾಡಿದರು.