ಪುತ್ತೂರು: ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬಳಿ ಇರುವ ಶ್ರೀ ಶಾರದಾ ಭಜನಾ ಮಂದಿರದಲ್ಲಿ 97ನೇ ವರ್ಷದ ಏಕಾಹ ಭಜನೆಯು ಜ.10ರಂದು ನಡೆಯಲಿದ್ದು ಆ ಪ್ರಯುಕ್ತ ಆಮಂತ್ರಣ ಪತ್ರ ಬಿಡುಗಡೆ ಡಿ.20ರಂದು ರಾತ್ರಿ ಭಜನಾ ಮಂದಿರದಲ್ಲಿ ನಡೆಯಿತು.
ಮಂದಿರದ ಅರ್ಚಕ ಹರಿಪ್ರಸನ್ನ ಸರೋಳಿತ್ತಾಯ ಪ್ರಾರ್ಥಿಸಿ ಮಂದಿರದ ಪದಾಧಿಕಾರಿಗಳಿಗೆ ಆಮಂತ್ರಣ ಪತ್ರ ಹಸ್ತಾಂತರಿಸಿದರು. ಡಿ.31ರಂದು ನಗರ ಸಂಕೀರ್ತನೆ ಆರಂಭಗೊಳ್ಳಲಿದ್ದು ಜ.20ರಂದು ಏಕಹಾ ಭಜನೆ ನಡೆಯಲಿದೆ.
ಮಂದಿರದ ಪ್ರ. ಕಾರ್ಯದರ್ಶಿ ಜಯಂತ್ ಉರ್ಲಾಂಡಿ, ಉಪಾಧ್ಯಕ್ಷ ಯಶವಂತ ಆಚಾರ್ಯ, ಜತೆ ಕಾರ್ಯದರ್ಶಿ ಸುಧೀರ್ ಕಲ್ಲಾರೆ, ಜಲಜಾಕ್ಷಿ ಹೆಗ್ಡೆ, ಕೋಶಾಧಿಕಾರಿ ತಾರನಾಥ್ ಎಚ್, ಸದಸ್ಯರಾದ ಕಿರಣ್ ಉರ್ಲಾಂಡಿ, ಫಕೀರ ಗೌಡ, ಗೋಪಾಲ ಆಚಾರ್ಯ, ಗುಲಾಬಿ ಗೌಡ, ಪ್ರಜ್ವಲ್, ಜನ್ನಣ್ನ, ಭರತ್ ಮತ್ತಿತರರು ಉಪಸ್ಥಿತರಿದ್ದರು.