ಪುತ್ತೂರು: ಮಹಿಳೆ ಬಗ್ಗೆ ಮಾತು ಮಾತಿಗೂ ಧರ್ಮ, ದೇವರು, ಭಾರತ್ ಮಾತಾ ಕೀ ಜೈ ಎಂದು ಹೇಳುವವರು ಅಶ್ಲೀಲ ಪದ ಬಳಕೆ ಮಾಡಿರುವ ಕುರಿತು ಮೊದಲು ಪ್ರತಿಕ್ರಿಯೆ ಕೊಡಲಿ. ನಿಜವಾದ ಘಟನೆ ಏನೆಂದು ಹೇಳಲಿ. ಅದನ್ನು ಬಿಜೆಪಿ, ಸಂಘ ಪರಿವಾರಕ್ಕೆ ಮಾಧ್ಯಮದವರು ಪ್ರಶ್ನೆ ಮಾಡಬೇಕು. ಓರ್ವ ಮಹಿಳೆಯ ಬಗ್ಗೆ ಹೀಗೆ ಮಾತನಾಡಬಹುದಾ, ಮಾತನಾಡುವ ಹಕ್ಕಿದೆಯೇ, ಯಾಕೆ ಕ್ರಮ ಕೈಗೊಂಡಿಲ್ಲ. ಯಾಕೆ ಅವರನ್ನು ಸಸ್ಪೆಂಡ್ ಮಾಡಿಲ್ಲ ಅದನ್ನು ಮಾದ್ಯಮವರು ಕೇಳಿ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮತ್ತು ದ.ಕ.ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು ಹೇಳಿದ್ದಾರೆ.
ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಬಿಪಿಹೆಚ್ ಲ್ಯಾಬ್ ಕಟ್ಟಡ ಸಹಿತ ವಿ.ವಿ ಉಪಕೇಂದ್ರಗಳಿಗೆ ಕಟ್ಟಡ ಶಂಕುಸ್ಥಾಪನೆ ಮಾಡಿದ ಬಳಿಕ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದರು. ಸಿ.ಟಿ.ರವಿ ಅವರ ಹೇಳಿಕೆಗೆ ಬಿಜೆಪಿ ಸಮರ್ಥನೆ ಮಾಡುವುದು ದುರದೃಷ್ಟಕರ. ಅವರು ಮಾತನಾಡಿದ ವಿಡಿಯೋಗಳನ್ನು ನಾವು ನೋಡಿದ್ದೇವೆ. ಈ ಕುರಿತು ನಮಗೆ ಕಟ್ಟು ಕತೆ ಕಟ್ಟಲು ಅವಶ್ಯಕತೆ ಇಲ್ಲ. ಒಬ್ಬ ಮಹಿಳೆಯ ಬಗ್ಗೆ ಬಿಜೆಪಿ ಶಾಸಕ ಈ ರೀತಿ ಮಾತನಾಡಿದಾಗ ನಾವು ಹೇಗೆ ಸಹಿಸಿಕೊಳ್ಳಲು ಸಾಧ್ಯ. ಕಾನೂನು ಪ್ರಕಾರ ಆ ತರದ ಹೇಳಿಕೆ ಕೊಡುವಂತಿಲ್ಲ. ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಕೆಟ್ಟ ಕೀಳು ಮಟ್ಟದ ಪದ ಬಳಕೆಗೆ ಅವರಲ್ಲಿ ವಿಷಾಧವಿಲ್ಲ. ಬಿಜೆಪಿಯಿಂದ ಖಂಡನೆ ಇಲ್ಲ. ಆದರೆ ಅವರ ಅಶ್ಲೀಲ ಪದ ಉಪಯೋಗಿಸಿದ್ದಕ್ಕೆ ಅವರನ್ನು ಬಂಧಿಸಿರುವುದು ಕಾನೂನು ಕ್ರಮ, ಬೇಲ್ ಸಿಕ್ಕಿದೆ ಅದು ಬೇರೆ ವಿಚಾರ. ಅದನ್ನೇ ದೊಡ್ಡ ಡ್ರಾಮ ಮಾಡುವುದು ಸರಿಯಲ್ಲ. ಸಿ.ಟಿ.ರವಿ ಅವರನ್ನು ಕೊಲ್ಲತ್ತಾರೆಂದು ಹೇಳಿದ್ದಾರಲ್ಲ. ಯಾಕೆ ಅವರನ್ನು ಕೊಲ್ಲಬೇಕು. ಅವರನ್ನು ಕೊಂದರೆ ಏನು ಸಿಗುತ್ತದೆ. ಆ ನೀಚ ಕೆಲಸ ಯಾರಾದರೂ ಮಾಡುತ್ತಾರಾ ? ಇವೆಲ್ಲ ಸುಮ್ಮನೆ ಡ್ರಾಮ. ಜನರ ಮಂದೆ ದಾರಿ ತಪ್ಪಿಸುವ ಕೆಲಸ. ನಮಗೆ ಮುಖ ಭಂಗ ಎಂದು ಹೇಳುವುದಕ್ಕಿಂತ ಮಹಿಳೆ ಬಗ್ಗೆ ಅವಹೇಳನ ಮಾಡಿದ್ದಾರಲ್ಲ ಆ ಪ್ರಶ್ನೆ ಕೇಳಿ. ಸಿ.ಟಿ.ರವಿ ಅವರು ಕ್ಷಮಾಪನೆ ಕೇಳಲಿ. ಅದು ಬಿಟ್ಟು ಅವರು ನಾನು ಪದ ಉಪಯೋಗಿಸಿಲ್ಲ ಎಂದು ಸುಳ್ಳು ಹೇಳುವುದು ಸರಿಯಲ್ಲ ಎಂದರು.
ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ವೇಳೆ ನಡೆದ ಘಟನೆಗೆ ಸಂಬಂಧಿಸಿ ಆಸ್ಪತ್ರೆಯ ವೈದ್ಯರಲ್ಲಿ ಪ್ರಶ್ನಿಸುತ್ತೇನೆ ಎಂದು ಹೇಳಿದರು. ಈ ಸಂದರ್ಭ ಶಾಸಕ ಅಶೋಕ್ ಕುಮಾರ್ ರೈ, ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತ ಗಟ್ಟಿ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.