ಡಾ|ಚೂಂತಾರುರವರಿಗೆ ಉಪ್ಪಿನಂಗಡಿ ಗೃಹರಕ್ಷಕದಳ ಘಟಕದಿಂದ ಬೀಳ್ಕೊಡುಗೆ

0

ಉಪ್ಪಿನಂಗಡಿ: ಉಪ್ಪಿನಂಗಡಿ ಗೃಹರಕ್ಷಕದಳದ ವಾರದ ಕವಾಯತಿಗೆ ದ‌.ಕ.ಜಿಲ್ಲಾ ಸಮಾದೇಷ್ಠರಾದ ಮುರಳಿ ಮೋಹನ್ ಚೂಂತಾರುರವರು ಭೇಟಿ ನೀಡಿದರು ಕಳೆದ ಹತ್ತು ವರ್ಷಗಳಿಂದ ಸಮಾದೇಷ್ಠರಾಗಿ ಸೇವೆ ಸಲ್ಲಿಸಿ ಈ ತಿಂಗಳಾಂತ್ಯಕ್ಕೆ ಇವರ ಅಧಿಕಾರಾವಧಿ ಮುಕ್ತಾಯ ಹಿನ್ನೆಲೆಯಲ್ಲಿ ಉಪ್ಪಿನಂಗಡಿ ಗೃಹರಕ್ಷಕ ಘಟಕದಿಂದ ಸರಳವಾಗಿ ಸನ್ಮಾನಿಸುವ ಮೂಲಕ ಬೀಳ್ಕೊಡಲಾಯಿತು. ಈ ಸಂದರ್ಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ.ಚುಂತಾರು ಹತ್ತು ವರ್ಷಗಳ ಅವಧಿಯಲ್ಲಿ ಇಲಾಖೆಗೆ ಸಹಕಾರ ನೀಡಿದ ಎಲ್ಲರಿಗೂ ಅಭಿನಂದನೆ ಸಲ್ಲಿಸಿದರು. ಗೃಹರಕ್ಷಕರು ಮುಂದಕ್ಕೆ ಇನ್ನೂ ಉತ್ತಮ ರೀತಿಯಲ್ಲಿ ಕರ್ತವ್ಯ ನಿರ್ವಹಿಸಿ ಎಂದು ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಉಪ್ಪಿನಂಗಡಿ ಪೋಲಿಸ್ ಠಾಣೆ ಸಹಾಯಕ ಪೋಲಿಸ್ ಉಪನಿರೀಕ್ಷಕರಾದ ಕವಿತಾ ಶುಭ ಹಾರೈಸಿದರು. ವೇದಿಕೆಯಲ್ಲಿ ಉಪಸ್ಥಿತರಿದ್ದ
ಕರ್ನಾಟಕ ರಾಜ್ಯ ಎಸ್ಡಿಎಂಸಿ ಸಮನ್ವಯ ಕೇಂದ್ರ ವೇದಿಕೆ(ರಿ) ಇದರ ರಾಜ್ಯ ಸಂಚಾಲಕರಾದ ಮೊಯ್ದಿನ್ ಕುಟ್ಟಿಯವರು ಮಾತನಾಡಿ, ಉಪ್ಪಿನಂಗಡಿ ವ್ಯಾಪ್ತಿಯ ಗೃಹರಕ್ಷಕದಳ ಘಟಕಕ್ಕೆ ಡಾ.ಚೂಂತಾರು ರವರ ಅವಧಿಯಲ್ಲಿ ಅತೀ ಹೆಚ್ಚಿನ ಸಹಕಾರ ದೊರಕಿದ್ದು, ಮಳೆಗಾಲದ ತುರ್ತು ಸಂದರ್ಭದಲ್ಲಿ ಉಪಯೋಗಿಸಲು ಎರಡು ಬೋಟ್ ದೊರೆತಿದ್ದು ಉಪ್ಪಿನಂಗಡಿಯ ಪಾಲಿಗೆ ದೊಡ್ಡ ಕೊಡುಗೆಯಾಗಿದೆ. ಅದಲ್ಲದೆ ಗೃಹರಕ್ಷಕದಳದ ಸದಸ್ಯರ ಎಲ್ಲಾ ಕುಂದು ಕೊರತೆಗಳ ಬಗ್ಗೆ ಕಾಳಜಿ ಇರುವವರಾಗಿದ್ದು, ಮುಂದಿನ 5 ವರ್ಷ ಕೂಡ ಇವರಿಗೆ ಜನರಿಗೆ ಸೇವೆನಿಡಲು ಅವಕಾಶ ದೊರಕಲಿ ಎಂದು ಹಾರೈಸಿದರು. ಉಪ್ಪಿನಂಗಡಿ ಪ್ರಭಾರ ಘಟಕಾಧಿಕಾರಿ ಸುಖಿತಾ.ಶೆಟ್ಟಿ ಸ್ವಾಗತಿಸಿ ಸೇಕ್ಷನ್ ಲೀಡರ್ ದಿನೇಶ್ ವಂದಿಸಿದರು ಚರಣ್,ಶಿಬು,ಆರೀಸ್, ವನಿತಾ, ನಳಿನಿ, ಜುನೈದ್,ಘಟಕದ ಸಿಬ್ಬಂದಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here