-ಸರ್ವೋದಯ ಹೆಜ್ಜೆ ಗೆಜ್ಜೆ ನಾದ’-ಅಂಗನವಾಡಿ ಹಾಗೂ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಸನ್ಮಾನ
ಬಡಗನ್ನೂರು: ಶಿಕ್ಷಕರ ಪ್ರಮಾಣಿಕ ಕರ್ತವ್ಯ ಪ್ರಜ್ಞೆ ಮಕ್ಕಳ ಬೆಳವಣಿಗೆಗೆ ಕಾರಣವಾಗಿದೆ ಎಂದು ಮಂಗಳೂರು, ವಕೀಲರಾದ ಬಾಲರಾಜ್ ರೈ, ಹೇಳಿದರು. ಅವರು ಸರ್ವೋದಯ ವಿದ್ಯಾಸಂಸ್ಥೆಗಳ ವಾರ್ಷಿಕೋತ್ಸವ, ಸರ್ವೋದಯ ಹೆಜ್ಜೆ ಗೆಜ್ಜೆ ನಾದ’ ಅಂಗನವಾಡಿ ಹಾಗೂ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮದ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.
55 ವರ್ಷಗಳ ಹಿಂದೆ ತಮ್ಮ ಹಿರಿಯರು ಗ್ರಾಮೀಣ ಪ್ರದೇಶದ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂಬ ದೃಷ್ಟಿಯಿಂದ ಈ ಶಿಕ್ಷಣ ಸಂಸ್ಥೆಯ ಹುಟ್ಟುಹಾಕಿದರು. ಆ ಸಂದರ್ಭದಲ್ಲಿ ಈ ಭಾಗದಲ್ಲಿ ಸಮರ್ಪಕವಾದ ರಸ್ತೆ ಇರಲಿಲ್ಲ. ದಿವಸ ಒಂದು ಸರಕಾರಿ ಬಸ್ ಓಡಾಡುತ್ತಿತ್ತು ಇಂತಹ ಮೂಲಭೂತ ಸೌಕರ್ಯ ಅನುಭವಿಸಿಲ್ಲ. ಅದರೂ ಶಿಕ್ಷಕರು ಉತ್ತಮ ಶಿಕ್ಷಣ ನೀಡಿದ್ದಾರೆ. ಇಂದು ಈ ವಿದ್ಯಾಸಂಸ್ಥೆ ಕಲಿತ ಹಲವು ವಿದ್ಯಾರ್ಥಿಗಳು ಇಂಜಿನಿಯರ್, ಡಾಕ್ಟರ್, ವಕೀಲರು ಇತ್ಯಾದಿ ಹುದ್ದೆಯನ್ನು ಅಲಂಕರಿಸಿದ್ದು ಈ ಸಂಸ್ಥೆಗೆ ಮತ್ತೊಂದು ಕಿರೀಟ ಎಂದ ಅವರು ಶಿಕ್ಷಕ ಪ್ರಮಾಣಿಕ ಕರ್ತವ್ಯ ಪ್ರಜ್ಞೆಯಿಂದ ಸತತ 100 ಶೇಕಡಾ ಫಲಿತಾಂಶ ಗಳಿಸುವ ಮೂಲಕ ಗ್ರಾಮೀಣ ಪ್ರದೇಶದ ಮಕ್ಕಳು ಪೇಟೆಯಲ್ಲಿನ ಮಕ್ಕಳಿಗಿಂತ ಕಡಿಮೆ ಅಲ್ಲ ಎಂದು ತೋರಿಸಿದ್ದಾರೆ.ಎಂದ ಅವರು ಈ ಭಾಗದ ಹತ್ತು ಸಮಸ್ತರು ಒಟ್ಟಿಗೆ ಸೇರಿ ಈ ಎರಡು ವಿದ್ಯಾಸಂಸ್ಥೆಯನ್ನು ನಡೆಸುತ್ತಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಪಾಪೆಮಜಲು ಹಾಲು ಉತ್ಪಾದಕರ ಸೇವಾ ಸಹಕಾರಿ ಸಂಘ ಅಧ್ಯಕ್ಷರಾದ ಶ್ವೇತ ವಿನಯ ಕಜಮೂಲೆ ಮಾತನಾಡಿ ಶಾಲಾ ವಾರ್ಷಿಕೋತ್ಸವ ಊರಿನ ಉತ್ಸವ ನಮ್ಮ ಶಾಲಾ ದಿನ ಮರು ಕಲಿಸುತ್ತದೆ ಇಂದು ಅಂಗ್ಲ ಮಾಧ್ಯಮ ಪೈಪೋಟಿಯಲ್ಲೂ ಗ್ರಾಮೀಣ ಪ್ರದೇಶದ ಈ ಕನ್ನಡ ಶಾಲೆಯನ್ನು ಪ್ರಗತಿಪಥದಲ್ಲಿ ಬೆಳವಣಿಗೆ ಸಹಕರಿಸಿದ ಎಲ್ಲರಿಗೂ ಅಭಿನಂದನೆ ಸಲ್ಲಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಬೆಂಗಳೂರು, ಲೆಕ್ಕ ಪರಿಶೋಧಕರು ಹಾಗೂ ಹಿರಿಯ ವಿದ್ಯಾರ್ಥಿ ಆಗಿರುವ ರಾಜೇಶ್ ರೈ ಸನ್ಮಾನ ಸ್ವೀಕರಿಸಿ ಮಾತನಾಡಿ, ನನ್ನ ಒಂದು ಸಣ್ಣ ಪದವಿಯನ್ನು ಗುರುತಿಸಿ ಸನ್ಮಾನಿಸಿರುವುದು ಸಂತಸ ತಂದಿದೆ. ಸಂಸ್ಥೆ ಹಲವಾರು ಜೀವನ ಶೈಲಿಯನ್ನು ರೂಪಿಸಿದೆ. ತನ್ನನ್ನು ತಪ್ಪುಗಳನ್ನು ತಿದ್ದಿ ಬುಧ್ದಿ ಹೇಳಿ ನನ್ನನ್ನು ಈ ಮಟ್ಟದಲ್ಲಿ ಬೆಳವಣಿಗೆ ಕಾರಣವಾಗಿದೆ. ಎಂದ ಅವರು 8,9,10 ಜೀವನ ಮಹತ್ವ ಮೆಟ್ಟಿಲು ಮುಂದೆ ಹಿಂದೆ ಗುರು ಮುಂದೆ ಗುರಿ ಹಾಗೂ ಶ್ರದ್ಧೆಯನ್ನಿಟ್ಟುಕೊಂಡು ರಣ ಯೋಧರರಾಗಿ ಮುಂದೆ ಸಾಗಿ ಮುಂದೊಂದು ದಿನ ಈ ವೇದಿಕೆಯಲ್ಲಿ ಸನ್ಮಾನಿಸುವಮತಾಗಲಿ ಎಂದು ಕಿರಿಯ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿ ಶುಭ ಹಾರೈಸಿದರು.
ಕಾಸರಗೋಡು ಕನ್ನಡ ಮತ್ತು ಸಾಂಸ್ಕೃತಿಕ ಅಕಾಡೆಮಿ ಅಧ್ಯಕ್ಷ ಚನಿಯಪ್ಪ ನಾಯ್ಕ.ಎನ್ ಮಾತನಾಡಿ ನಾನು ಕಲಿತ ಶಾಲೆ, ಸಣ್ಣ ಉದ್ಯೋಗ ನೀಡಿ ಅನ್ನನೀಡಿ ಶಾಲೆ 60 ವರ್ಷಗಳಿಂದ ಇದೇ ಪರಿಸರದಲ್ಲಿ ಸಂತಸದಿಂದ ಜಿವನ ನಡೆಸುತ್ತಿದಗದೇನೆ .ಈ ವಿದ್ಯಾಸಂಸ್ಥೆಗೆ ಯಾವಾಗಲೂ ಚಿರೃಣಿ ಎಂದು ಹೇಳಿದ ಅವರು ಮಕ್ಕಳು ತಂದೆ ತಾಯಿಯನ್ನು ಹಾಗೂ ಗುರು ಹಿರಿಯರನ್ನು ಪ್ರೀತಿಸಿ ಗೌರವಿಸಬೇಕು. ಅಗ ಮಾತ್ರ ಜೀವನದಲ್ಲಿ ಉತ್ತಮ ವ್ಯಕ್ತಿಯಾಗಿ ರೂಪುಗೊಳ್ಳಲು ಸಾಧ್ಯ ಎಂದು ಹೇಳಿದರು.
ಸುಳ್ಯಪದವು ಸರ್ವೋದಯ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಶಿವರಾಮ ಹೆಚ್.ಡಿ. ಅಧ್ಯಕ್ಷತೆ ವಹಿಸಿ ಮಾತನಾಡಿ, ಮಕ್ಕಳ ಪ್ರತಿಭೆಯನ್ನು ಗುರುತಿಸುವ ಕೆಲಸ ಅಗಿದೆ ವೇದಿಕೆಯಲ್ಲಿ ಹಲವಾರು ಮಂದಿ ಸನ್ಮಾನ ಕಾರ್ಯಕ್ರಮ ನಡೆದಿದೆ .ಈ ವರ್ಷ ಹಲವು ಮಂದಿ ಹಲವು ಕೊಡುಗೆ ನೀಡಿ ಸಹಕರಿಸಿದ್ದಾರೆ. ಮತ್ತು ಎಲ್ಲಾ ಶಿಕ್ಷಣಾಭಿಮಾನಿಗಳ ಸಹಕಾರ ಸರ್ಕಾರದ ನೀತಿ ನಿಯಮಗಳಿಂದ ಕ್ಷೀಣಿಸುತ್ತಿದ್ದ ಅನುದಾನಿತ ಈ ವಿದ್ಯಾಸಂಸ್ಥೆ ಅಭಿವೃದ್ಧಿಗೆ ಮುಂದೆಯೂ ತಮ್ಮ ಸಹಕಾರ ಯೋಚಿಸುತ್ತಾ ಮುಂದೆ ತಾಲೂಕು, ಜಿಲ್ಲಾ ರಾಜ್ಯ ರಾಷ್ಟ್ರ ಮಟ್ಟದಲ್ಲಿ ವಿವಿಧ ವಿಭಾಗದಲ್ಲಿ ಹೆಸರು ಗಳಿಸುವಂತಾಗಲಿ ,ವಿದ್ಯಾಸಂಸ್ಥೆ ಇನ್ನಷ್ಟು ಅಭಿವೃದ್ಧಿ ಪಥದಲ್ಲಿ ಬೆಳವಣಿಗೆ ಅಗುವ ಅಶಾಭಾವದೊಂದಿಗೆ ಸಹಕರಿಸಿದ ಎಲ್ಲರಿಗೂ ಅಧ್ಯಕ್ಷ ನೆಲೆಯಲ್ಲಿ ಅಭಿನಂದನೆ ಸಲ್ಲಿಸಿ ಕಾರ್ಯಕ್ರಮ ಶುಭ ಹಾರೈಸಿದರು.
ಹಿರಿಯ ವಿದ್ಯಾರ್ಥಿ ಹಾಗೂ ಶಿಕ್ಷಕರೂ ಅದ ಕೃಷ್ಣಪ್ರಸಾದ್, ಹಾಗೂ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಪ್ರಕಾಶ್ ಮರದಮೂಲೆ ಗೌರವಾರ್ಪಣೆ ಸ್ವೀಕರಿಸಿ ಸಂದರ್ಭೋಚಿತ ಮಾತನಾಡಿದರು. ವೇದಿಕೆಯಲ್ಲಿ ಶಾಲಿನಿ ವೆಂಕಟೇಶ್ ಭಟ್ ಕಜಮೂಲೆ ಉಪಸ್ಥಿತರಿದ್ದರು.
ಈ ಕಾರ್ಯಕ್ರಮದಲ್ಲಿ ಕೋಶಾಧಿಕಾರಿ ಅರುಣ್ ಕುಮಾರ್ ನಿರ್ದೇಶಕರಾದ ಗುರುಪ್ರದೀಪ್, ಸುಬ್ರಮಣ್ಯ ಭಟ್ ಕೋರಮೂಲೆ,ಸುಬ್ರಮಣ್ಯ ಭಟ್ ಪಾದೆಗದ್ದೆ ಉಪಸ್ಥಿತರಿದ್ದರು. ಶಾಲಾಭಿವೃದ್ಧಿ ಸಮಿತಿ ಸದಸ್ಯರು ಮಕ್ಕಳ ಪೋಷಕರು, ಹಿರಿಯ ವಿದ್ಯಾರ್ಥಿಗಳು ಹಾಗೂ ಶಿಕ್ಷಣಾಭಿಮಾನಿಗಳು ಭಾಗವಹಿಸಿದ್ದರು. ಕಾರ್ಯಕ್ರಮವು ದ.21 ರಂದು ವಿದ್ಯಾಸಂಸ್ಥೆಗಳ ಸಭಾಂಗಣದಲ್ಲಿ ನಡೆಯಿತು. ಸಂಸ್ಥೆ ಯ ಸಂಚಾಲಕ ಮಹಾದೇವ ಭಟ್ ಕೊಲ್ಯ ಸ್ವಾಗತಿಸಿ ಪ್ರಸ್ತಾವಿಕ ಮಾತನಾಡಿದರು. ಸಂಸ್ಥೆಯ ಮುಖ್ಯ ಶಿಕ್ಷಕ ಸುಖೇಶ್ ರೈ ಕುತ್ಯಾಳ ವಾರ್ಷಿಕ ವರದಿ ಮಂಡಿಸಿದರು. ಸಹ ಶಿಕ್ಷಕಿ ಪ್ರಶಾಂತಿ ರೈ ವಂದಿಸಿ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ಶಾಲಾ ಮಕ್ಕಳಿಮದ ಹಾಗೂ ಹಿರಿಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ವೈವಿಧ್ಯ ಕಾರ್ಯಕ್ರಮ ನಡೆಯಿತು.
ಅಭಿನಂದನಾ ಕಾರ್ಯಕ್ರಮ:
ಬೆಂಗಳೂರು, ಲೆಕ್ಕ ಪರಿಶೋಧಕರು ಹಾಗೂ ಹಿರಿಯ ವಿದ್ಯಾರ್ಥಿ ಆಗಿರುವ ರಾಜೇಶ್ ರೈ,ಆಗ್ನಿಪಥ್ ಸೇನೆಗೆ ಅಯ್ಕಯಾದ ಶಾಲಾ ಹಿರಿಯ ವಿದ್ಯಾರ್ಥಿ ಅಭಿಷೇಕ್ ನಾಯಕ್ ಮೇಗಿನಮನೆ, ಹಾಗೂ 2023-24 ನೇ ಸಾಲಿನ ಎಸ್ ಎಸ್ ಎಲ್ ಸಿ ವಾರ್ಷಿಕ ಪರೀಕ್ಷೆಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾದರು ವಿದ್ಯಾರ್ಥಿಗಳಿಗೆ ಮತ್ತು ತಾಲೂಕು ಮಟ್ಟದ ಕ್ರೀಡೆ ಹಾಗೂ ಸಾಂಸ್ಕೃತಿಕ ವಿಭಾಗದ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಮತ್ತು ವಿದ್ಯಾಸಂಸ್ಥೆ ವಿವಿಧ ಕೊಡುಗೆ ನೀಡಿರುವ ದಾನಿಗಳನ್ನು ಪೇಟ ಧರಿಸಿ ಶಾಲು ಹೊದಿಸಿ ಹಾಕಿ ಫಲಪುಷ್ಪ ಸ್ಮರಣಿಕೆ ನೀಡಿ ಅಭಿನಂದಿಸಲಾಯಿತು.