ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನದ ತೃತೀಯ ವಾರ್ಷಿಕೋತ್ಸವ

0

ಸಂಸ್ಕೃತಿಯಿಂದ ವಿಮುಖವಾಗದಂತೆ ಅರಿವು ಮೂಡಿಸಬೇಕು : ಎಡನೀರು ಶ್ರೀಗಳು

ಪುತ್ತೂರು: ಸಮಾಜದ ಮುಖ್ಯವಾಹಿನಿಯಾದ ಯುವ ಜನಾಂಗವು ಸಂಸ್ಕೃತಿಯಿಂದ ವಿಮುಖವಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಹಿರಿಯರಿಗಿದೆ. ಹಿರಿಯರ ಪ್ರಯತ್ನದಿಂದ ಮರೆಯಾಗುತ್ತಿರುವ ಸಂಸ್ಕಾರಗಳನ್ನು ಮರುಕಳಿಸುವಂತೆ ಮಾಡಲು ಸಾಧ್ಯವೆಂದು ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿ ತಿಳಿಸಿದರು.


ಕಲ್ಲೇಗ ಭಾರತಮಾತಾ ಸಮುದಾಯ ಭವನದಲ್ಲಿ ಜರಗಿದ ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನದ ತೃತೀಯ ವಾರ್ಷಿಕೋತ್ಸವವನ್ನು ಅವರು ಉದ್ಘಾಟಿಸಿ ಆಶೀರ್ವಚನ ನೀಡಿದರು.


ಪ್ರತಿಷ್ಠಾನದ ಗೌರವಾಧ್ಯಕ್ಷ ಪ್ರೊ ಎ.ವಿ ನಾರಾಯಣ ಅಧ್ಯಕ್ಷತೆ ವಹಿಸಿದ್ದರು. ಮುಂಬೈ ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದ ನಿವೃತ್ತ ಮುಖ್ಯಸ್ಥ ಡಾ. ವಸಂತಕುಮಾರ ತಾಳ್ತಜೆ ವಿಶೇಷ ಉಪನ್ಯಾಸ ನೀಡಿದರು.ಪುತ್ತೂರು ಮಹಾವೀರ ಆಸ್ಪತ್ರೆಯ ಡಾ. ಸುರೇಶ್ ಪುತ್ತೂರಾಯ ಹಿರಿಯರಿಗೆ ಆರೋಗ್ಯ ಸಲಹೆಗಳನ್ನು ನೀಡಿದರು.


ಸನ್ಮಾನ ಮತ್ತು ಗೌರವಾರ್ಪಣೆ :
ಸಾಮಾಜಿಕ ಸೇವಾ ಕ್ಷೇತ್ರದಲ್ಲಿ ಅಪೂರ್ವ ಸಾಧನೆ ಮಾಡಿದ ಫರಂಗಿಪೇಟೆ ಸೇವಾಂಜಲಿ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಕೆ. ಕೃಷ್ಣಕುಮಾರ ಪೂಂಜ,ಕರ್ನಾಟಕ ಸರಕಾರದಿಂದ ಕನಕ ಪ್ರಶಸ್ತಿ ಪುರಸ್ಕೃತ ತಾಳ್ತಜೆ ವಸಂತಕುಮಾರ ಇವರನ್ನು ಸನ್ಮಾನಿಸಲಾಯಿತು. ಪ್ರತಿಷ್ಠಾನದ ಗೌರವಾಧ್ಯಕ್ಷ ಪ್ರೂ ಎ. ವಿ ನಾರಾಯಣ, ಸಾಮಾಜಿಕ ಕಾರ್ಯಕರ್ತರಾದ ಸಿ.ಎಚ್ ಬಾಲಕೃಷ್ಣ ಶೆಟ್ಟಿ ಮಂಗಳೂರು ಮತ್ತು ಪ್ರೇಮಲತಾ ಟಿ.ರಾವ್ ಪುತ್ತೂರು, ಮಹಾಬಲ ರೈ ಒಳತಡ್ಕ ಇವರನ್ನು ಗೌರವಿಸಲಾಯಿತು. ಕೇಂದ್ರ ಸಮಿತಿ ಮತ್ತು ತಾಲೂಕು ಘಟಕಗಳ ನೂತನ ಪದಾಧಿಕಾರಿಗಳ ವಿವರವನ್ನು ಪ್ರಧಾನ ಕಾರ್ಯದರ್ಶಿ ದಿವಾಕರ ಆಚಾರ್ಯ ಗೇರುಕಟ್ಟೆ ನೀಡಿದರು.


ಸೇವಾ ಕೊಡುಗೆಗಳ ಹಸ್ತಾಂತರ:
ಪ್ರತಿಷ್ಠಾನದ ಬಂಟ್ವಾಳ ಘಟಕದಿಂದ ಧೀರಜ್ ನಾಯ್ಕ್ ಪುಚ್ಛಕೆರೆ ಮಂಚಿ, ಗಣಪ ಪೂಜಾರಿ ಅಬ್ಬೆಟ್ಟು,ವಾಮನ ಪೂಜಾರಿ ಪರಂಗಿಪೇಟೆ ಮತ್ತು ಪುತ್ತೂರು ಘಟಕದಿಂದ ಹೊನ್ನಮ್ಮ ಬಲ್ನಾಡು ಇವರಿಗೆ ಆರ್ಥಿಕ ಸಹಾಯವನ್ನು ವಿತರಿಸಲಾಯಿತು.

ಸಂಚಾಲಕ ಭಾಸ್ಕರ ಬಾರ್ಯ, ಪುತ್ತೂರು ಘಟಕದ ಅಧ್ಯಕ್ಷ ಚಂದ್ರಶೇಖರ ಆಳ್ವ ಪಡುಮಲೆ, ಮಂಗಳೂರು ಘಟಕದ ಅಧ್ಯಕ್ಷ ಭರತ್.ಕೆ , ಬೆಳ್ತಂಗಡಿ ಘಟಕದ ಅಧ್ಯಕ್ಷ ಸೀತಾರಾಮ ಶೆಟ್ಟಿ ಉಜಿರೆ, ಬಂಟ್ವಾಳ ಘಟಕದ ಅಧ್ಯಕ್ಷ ಸುಬ್ರಾಯ ಮಡಿವಾಳ ಬಿ.ಸಿ ರೋಡು, ಪುತ್ತೂರು ಘಟಕದ ಜಿಲ್ಲಾ ಪ್ರತಿನಿಧಿ ಸಂಜೀವ ನಾಯಕ್ ಕಲ್ಲೇಗ, ಮಹಿಳಾ ಘಟಕದ ಸಂಚಾಲಕಿ ವತ್ಸಲಾ ರಾಜ್ನಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪ್ರತಿಷ್ಠಾನದ ಟ್ರಸ್ಟಿಗಳಾದ ಲೋಕೇಶ್ ಹೆಗ್ಡೆ ಪುತ್ತೂರು, ಎಂ. ಜಯರಾಮ ಭಂಡಾರಿ ಧರ್ಮಸ್ಥಳ, ಅನಾರು ಕೃಷ್ಣಶರ್ಮ, ಪದಾಧಿಕಾರಿಗಳಾದ ಭವಾನಿ ಶಂಕರ ಶೆಟ್ಟಿ ಪುತ್ತೂರು, ಕೆ.ರಾಮಕೃಷ್ಣ ನಾಯಕ್ ಬಂಟ್ವಾಳ, ಜಯಾನಂದ ಪೆರಾಜೆ, ವಸಂತ ಸುವರ್ಣ ಬೆಳ್ತಂಗಡಿ, ಕೆ.ವಾರಿಜ ಬೆಳ್ತಂಗಡಿ, ಚಂಚಲಾಕ್ಷಿ ಪುತ್ತೂರು, ಪ್ರೊ ವಿ. ಜಿ ಭಟ್ ಪುತ್ತೂರು,ಪದ್ಮಯ್ಯ, ರಾಜಮಣಿ ರಾಮಕುಂಜ,ಗಣೇಶ್ ಭಟ್ ಬೆಳ್ತಂಗಡಿ, ಗುಂಡ್ಯಡ್ಕ ಈಶ್ವರ ಭಟ್ ವಿವಿಧ ಕಾರ್ಯಕ್ರಮಗಳನ್ನು ನಿರ್ವಹಿಸಿದರು.

ಪ್ರತಿಷ್ಠಾನದ ಅಧ್ಯಕ್ಷ ಕಯ್ಯೂರು ನಾರಾಯಣ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಜೊತೆ ಕಾರ್ಯದರ್ಶಿ ಡಾ.ಬಿ. ಎನ್ ಮಹಾಲಿಂಗ ಭಟ್ ಅಭಿನಂದನ ನುಡಿಗಳನ್ನಾಡಿದರು. ಸಹ ಸಂಚಾಲಕ ಪ್ರೊ. ವೇದವ್ಯಾಸ ರಾಮಕುಂಜ ಪ್ರಾರ್ಥಿಸಿದರು. ಟ್ರಸ್ಟಿ ದುಗ್ಗಪ್ಪ.ಎನ್ ಪುತ್ತೂರು ವಂದಿಸಿದರು. ಟ್ರಸ್ಟಿ ಜಯರಾಮ ಪೂಜಾರಿ ಬಂಟ್ವಾಳ ಕಾರ್ಯಕ್ರಮ ನಿರೂಪಿಸಿದರು. ಸಾಂಸ್ಕೃತಿಕ ಕಾರ್ಯಕ್ರಮವಾಗಿ ಭಾಸ್ಕರ ಬಾರ್ಯ ಸಂಯೋಜನೆಯಲ್ಲಿ ಹಿರಿಯರ ಸೇವಾ ಪ್ರತಿಷ್ಠಾನದ ಸದಸ್ಯರಿಂದ ಪಾರ್ಥಸಾರಥ್ಯ ತಾಳ ಮದ್ದಳೆ ಜರಗಿತು.

LEAVE A REPLY

Please enter your comment!
Please enter your name here