ಪುತ್ತೂರು: ದೇವರು ಮತ್ತು ಮನುಷ್ಯರ ನಡುವೆ ಹಾಗೂ ಮನುಷ್ಯ-ಮನುಷ್ಯರ ನಡುವಿನ ಜೀವನ ಹಾಗೂ ಜೀವ ನೀಡುವ ಸಂಬಂಧಗಳನ್ನು ಕ್ರಿಸ್ಮಸ್ ಆಚರಿಸುತ್ತದೆ. ದೇವಪುತ್ರ ಮನುಜರಾಗಿದ್ದಾರೆ ಎಂಬುದೇ ಇಂದಿನ ಸಂತೋಷಕ್ಕೆ ಕಾರಣ. ದೇವರು ನಮ್ಮೊಡನೆ ಇದ್ದಾರೆ ಎಂಬ ಭರವಸೆ ನೀಡುವುದಕ್ಕಾಗಿಯೇ ಅವರು ಭುವಿಗೆ ಇಳಿದು ಬಂದರು.
ಇತ್ತೀಚಿನ ದಿನಗಳಲ್ಲಿ ಯುದ್ಧ, ಆತಂಕ, ಸಾವು-ನೋವುಗಳು ಸಹಿತ ಹತ್ತಾರು ರೀತಿಯ ಕಾರ್ಮೋಡಗಳು ನಮ್ಮ ಸುತ್ತಲಿವೆ. ದೇವರು ನಮ್ಮೊಡನೆ ಇದ್ದಿದ್ದರೆ ಮನುಕುಲದಲ್ಲಿ ಇಂತಹ ಸಂಕಷ್ಟಗಳು ಯಾಕೆ ನಡೆಯುತ್ತಿವೆ ಎನ್ನುವ ಪ್ರಶ್ನೆ ಅನೇಕರಿಗೆ ಕಾಡುತ್ತಿದೆ. ಇಂತಹ ಕಠಿಣ ಸಮಯದಲ್ಲಿ ಯೇಸುಕ್ರಿಸ್ತರು ಶಾಂತಿ ಹಾಗೂ ಭರವಸೆಯ ರಾಜಕುಮಾರನಾಗಿ ಸ್ವರ್ಗದಿಂದ ಇಳಿದು ಬಂದಿದ್ದಾರೆ. ದೇವರು ನಮ್ಮ ಸಂಕಟಗಳಿಗೆ ಕಾರಣರಲ್ಲ. ಬದಲಾಗಿ ಮನುಷ್ಯನ ಸ್ವಾರ್ಥ ಮತ್ತು ಸ್ವಕೇಂದ್ರಿತ ನಿಲುವುಗಳೇ ಕಾರಣ ಎಂದು ತೋರಿಸಿಕೊಟ್ಟಿದ್ದಾರೆ. ಕೆಲವರ ಮುಕ್ತ ಆಯ್ಕೆಯಿಂದಾಗಿ ಹಲವರು ಸಂಕಷ್ಟಕ್ಕೊಳಗಾಗುತ್ತಾರೆ. ಆದರೆ ತಕ್ಕ ಮಟ್ಟಿಗೆ ನಾವೆಲ್ಲರೂ ಈ ಪರಿಸ್ಥಿತಿಗೆ ಹೊಣೆಗಾರರಾಗಿದ್ದೇವೆ ಎಂಬುದನ್ನು ಮರೆಯಬಾರದು. ಯೇಸುವಿನ ಒಳ್ಳೆಯತನದ ಬೆಳಕಿನ ಮುಂದೆ ನಮ್ಮನ್ನು ನಾವೇ ತೆರೆದುಕೊಂಡರೆ ಸುಲಭವಾಗಿ ನಮ್ಮ ದೋಷಗಳ ಅರಿವಾಗಬಹುದು. ಈ ಬಾರಿಯ ಕ್ರಿಸ್ಮಸ್ ಸಕಲ ಮನುಜಕುಲಕ್ಕೂ ಶಾಂತಿ, ಸಮಾಧಾನ ಕರುಣಿಸಲಿ ಎಂದು ಪ್ರಭುಕ್ರಿಸ್ತರಲ್ಲಿ ಬೇಡುತ್ತೇನೆ. ನಿಮಗೆಲ್ಲರಿಗೂ ಕ್ರಿಸ್ಮಸ್ ಹಬ್ಬದ ಶುಭಾಶಯಗಳು.
✍🏻.ಅತಿ|ವಂ|ಡಾ|ಪೀಟರ್ ಪಾವ್ಲ್ ಸಲ್ದಾನ್ಹಾ, ಧರ್ಮಾಧ್ಯಕ್ಷರು, ಮಂಗಳೂರು ಕಥೋಲಿಕ್ ಧರ್ಮಪ್ರಾಂತ್ಯ