ವಿಟ್ಲ: ಕಂಬಳಬೆಟ್ಟು ಧರ್ಮನಗರ ಮಲರಾಯ ಜೇರದಲ್ಲಿ ಬ್ರಹ್ಮಶ್ರೀ ಆಲಂಪಾಡಿ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ಡಿ.23ರಂದು ವೈದ್ಯನಾಥ ಮಲರಾಯ ಸಪರಿವಾರ ದೈವಗಳ ಸಾನಿಧ್ಯವೃದ್ಧಿ ಬ್ರಹ್ಮಕಲಶಾಭಿಷೇಕ ನಡೆಯಿತು.
ಡಿ.23ರಂದು ಬೆಳಗ್ಗೆ ಗಂಟೆ 6:00ಕ್ಕೆ ಮಹಾಗಣಪತಿ ಹವನ , ಪ್ರಾಸಾದ ಪ್ರತಿಷ್ಠೆ, ಪೀಠ ಪ್ರತಿಷ್ಠೆ ನಡೆಯಲಿದೆ. ಪೂರ್ವಾಹ್ನ ಗಂಟೆ 9:18-10:18 ಮಕರ ಲಗ್ನ ಸುಮುಹೂರ್ತದಲ್ಲಿ ಕುಂಭೇಶ ಕಲಶ ಅಭಿಷೇಕ, ನಿದ್ರಾಕಲಶ ಅಭಿಷೇಕ, ಜೀವ ಕಲಶ ಅಭಿಷೇಕ, ಸಾನ್ನಿಧ್ಯವೃದ್ಧಿ ಬ್ರಹ್ಮಕಲಶ ಅಭಿಷೇಕ, ಪ್ರತಿಷ್ಠಾ ಬಲಿ, ದೈವಗಳಿಗೆ ಬ್ರಹ್ಮಕಲಶದ ಮಹಾತಂಬಿಲ ಸೇವೆ ನಡೆಯಿತು. ಬಳಿಕ ಮಹಾಪೂಜೆ, ನಿತ್ಯವಿಧಿ ನಿರ್ಣಯ, ನಡೆ ಪ್ರಾರ್ಥನೆ, ಮಹಾ ಮಂತ್ರಾಕ್ಷತೆ, ಮಹಾ ಪ್ರಸಾದ ವಿತರಣೆ ಬಳಿಕ ಅನ್ನಸಂತರ್ಪಣೆ ನಡೆಯಿತು. ಈ ಸಂದರ್ಭದಲ್ಲಿ ವಿವಿಧ ಸಮಿತಿಯ ಪದಾಧಿಕಾರಗಳ ಸಹಿತ ಊರಪರವೂರ ನೂರಾರು ಮಂದಿ ಭಕ್ತಾಧಿಗಳು ಉಪಸ್ಥಿತರಿದ್ದರು.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಬೆಳಗ್ಗೆ ವರುಣ್ ಆಚಾರ್ಯ ಬಂಟ್ವಾಳ ಮತ್ತು ಬಳಗದವರಿಂದ ಭಜನಾ ಸಂಕೀರ್ತನೆ, ಬಳಿಕ ಎಲ್. ಎನ್. ಧರಣ್ ಮಾಣಿ ಇವರಿಂದ ಶ್ರೀ ಹರಿನಾಮ ಸಂಕೀರ್ತನೆ ನಡೆಯಿತು. ರಾತ್ರಿ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ಕೃಪಾಪೋಷಿತ ಯಕ್ಷಗಾನ ಮಂಡಳಿ ನಾಗವ್ರಜ ಕ್ಷೇತ್ರ ಪಾವಂಜೆ, ಹಳೆಯಂಗಡಿ ಇವರಿಂದ ಯಕ್ಷದ್ರುವ ಪಟ್ಲ ಸತೀಶ್ ಶೆಟ್ಟಿರವರ ಸಾರಥ್ಯದಲ್ಲಿ ಶ್ರೀದೇವಿ ಮಹಾತ್ಮೆ ಯಕ್ಷಗಾನ ಬಯಲಾಟ ನಡೆಯಿತು.
ಇಂದು ಭಂಡಾರ ಆಗಮನ – ನೇಮೋತ್ಸವ
ಡಿ.24ರಂದು ಡೆಚ್ಚಾರು ಮಲರಾಯ ದೈವದ ಭಂಡಾರ ಸನ್ನಿಧಿಯಲ್ಲಿ ತಂಬಿಲ ಸೇವೆ, ಪ್ರಾರ್ಥನೆ ಮತ್ತು ಭಂಡಾರ ಹೊರಡುವುದು. ಸಾಯಂಕಾಲ ಜೈನರಕೋಡಿ ಮೂವರ್ ದೈವಂಗಳ ಭಂಡಾರ ಸನ್ನಿಧಿಯಲ್ಲಿ ಪ್ರಾರ್ಥನೆ, ಭಂಡಾರ ಹೊರಡುವುದು. ಬಳಿಕ ಕುಂಡಡ್ಕ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಬಳಿ ಭಂಡಾರ ಬರುವುದು. ಸಾಯಂಕಾಲ ಗಂಟೆ 6 ಕ್ಕೆ ಕುಳದ ಗುತ್ತು ಚಾವಡಿಯಲ್ಲಿ ಪ್ರಾರ್ಥನೆ, ವೈದ್ಯನಾಥನ ಭಂಡಾರ ಹೊರಡುವುದು. ಸಾಯಂಕಾಲ ಗಂಟೆ 6.45ಕ್ಕೆ ಉರಿಮಜಲು ನಡುಸಾದಿ(ನಡುದಾರಿ) ಯಲ್ಲಿ ವೈದ್ಯನಾಥ, ಮಲರಾಯ, ಮೂವರ್ ದೈವಂಗಳ ಸಪರಿವಾರ ದೈವಗಳ ಭಂಡಾರವನ್ನು ಮೂರು ಗ್ರಾಮದ ಸಮಸ್ತ ಭಕ್ತರು ಎದುರುಗೊಳ್ಳುವುದು. ರಾತ್ರಿ ಘಂಟೆ 7.30ಕ್ಕೆ ಮಲರಾಯ ಜೇರಕ್ಕೆ ಭಂಡಾರ ಆಗಮನ. ರಾತ್ರಿ ಗಂಟೆ 9ಕ್ಕೆ ವೈದ್ಯನಾಥ ನೇಮೋತ್ಸವ, ರಾತ್ರಿ ಗಂಟೆ 12ಕ್ಕೆ ಮೂವರ್ ದೈವಂಗಳ ನೇಮೋತ್ಸವ ನಡೆಯಲಿದೆ.
ಸಾಂಸ್ಕೃತಿಕ ಕಾರ್ಯಕ್ರಮ:
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಶಿವಂ ಡ್ಯಾನ್ಸ್ ಅಕಾಡಮಿ ವಿಟ್ಲ ಇವರಿಂದ ನೃತ್ಯ ಸಂಭ್ರಮ ನಡೆಯಲಿದೆ.