ಪುತ್ತೂರು: ಎಸ್‌ವೈಎಸ್ ದ.ಕ ಈಸ್ಟ್ ಜಿಲ್ಲಾ ವ್ಯಾಪ್ತಿಯಲ್ಲಿ ಬರುವ 6 ಝೋನ್ ಗಳ ಅಧೀನದ ಸಾಂತ್ವನ ಇಸಾಬಾ ತಂಡಗಳನ್ನು ಒಗ್ಗೂಡಿಸಿ ಮಾನವತೆಯ ನೆರಳಾಗೋಣ ಎಂಬ ಧ್ಯೇಯ ವಾಕ್ಯದೊಂದಿಗೆ ಇಸಾಬಾ ಕ್ಯಾಂಪ್ ಬೆಳ್ಳಾರೆ ದಾರುಲ್ ಹುದಾ ಕ್ಯಾಂಪಸ್ ನಲ್ಲಿ ನಡೆಯಿತು.
ಸಯ್ಯಿದ್ ಪೂಕೋಯ ಮಿಸ್ಬಾಹಿ ತಂಙಳ್ ದಾರುಲ್ ಹುದಾರವರು ಬೆಳ್ಳಾರೆ ದರ್ಗಾ ಝಿಯಾರತ್ ನೇತೃತ್ವ ವಹಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸ್ವಾಗತ ಸಮಿತಿಯ ಚೇರ್ಮನ್ ಹಸನ್ ಸಖಾಫಿ ಬೆಳ್ಳಾರೆ ಧ್ವಜಾರೋಹಣ ನೆರವೇರಿಸಿದರು. ಜಿಲ್ಲಾಧ್ಯಕ್ಷ ಅಬ್ದುಲ್ ಅಝೀಝ್ ಮಿಸ್ಬಾಹಿ ಈಶ್ವರಮಂಗಲರವರ ಅಧ್ಯಕ್ಷತೆಯಲ್ಲಿ ನಡೆದ ಕ್ಯಾಂಪ್ ಅಸ್ಸಯ್ಯದ್ ಹಾಮಿದ್ ಅಹ್ದಲ್ ತಂಙಳ್ ಮುಹಿಮ್ಮಾತ್‌ರವರು ಉದ್ಘಾಟಿಸಿ ಮಾತನಾಡಿದರು. ಡಾ.ಅಬ್ದುಲ್ ರಶೀದ್ ಝೈನಿ ಕಾಮಿಲ್‌ರವರು ಕುಟುಂಬ ಸಂಬಂಧ ಎಂಬ ವಿಷಯವನ್ನು ಮಂಡನೆ ಮಾಡಿದರು. ರಾಜ್ಯಾಧ್ಯಕ್ಷ ಹಫೀಳ್ ಸಅದಿ ಕೊಡಗುರವರು ನಾಯಕತ್ವದ ಅನುಸರಣೆ ಎಂಬ ವಿಷಯದ ಕುರಿತು ಮಾತನಾಡಿದರು.
ರಾಜ್ಯ ಇಸಾಬಾ ಕಾರ್ಯದರ್ಶಿ ಇಬ್ರಾಹಿಂ ಖಲೀಲ್ ಮಾಲಿಕಿ ಇಸಾಬ ಸದಸ್ಯರು ನಿರ್ವಹಿಸಬೇಕಾದ ಕಾರ್ಯಾಚರಣೆಯ ವಿವರ ನೀಡಿದರು. ಜಿಲ್ಲಾ ಇಸಾಬ ಕಾರ್ಯದರ್ಶಿ ಉಸ್ಮಾನ್ ಸೋಕಿಲ ಮತ್ತು ಜಬ್ಬಾರ್ ಕಣ್ಣೂರುರವರು ಅಸೆಂಬ್ಲಿಗೆ ನಾಯಕತ್ವ ನೀಡಿದರು. ರಾಜ್ಯ ಕಾರ್ಯದರ್ಶಿ ಸ್ವಾದಿಖ್ ಮಾಸ್ಟರ್ ಮಲೆಬೆಟ್ಟು ಸಾಂಘಿಕ ತರಬೇತಿ ನೀಡಿದರು. ಖ್ಯಾತ ವಾಗ್ಮಿ ಚಿಂತಕರೂ ಆಗಿರುವ ಮರ್ಝೂಕ್ ಸಅದಿ ಪಾಪಿನಶ್ಶೇರಿರವರು ಸಮಸ್ತ ಕ್ರಮಿಸಿದ ಹಾದಿ ಎಂಬುದರ ಕುರಿತು ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ರಾಜ್ಯ ಸಮಿತಿಯ ಅಶ್ರಫ್ ಸಖಾಫಿ ಮಾಡಾವು, ಹಂಝ ಮದನಿ ಬೆಳ್ತಂಗಡಿ, ಕೆಎಂಜೆ ಈಸ್ಟ್ ಜಿಲ್ಲಾ ಕೋಶಾಧಿಕಾರಿ ಇಸ್ಮಾಯಿಲ್ ಹಾಜಿ ಬೈತಡ್ಕ, ಸ್ಥಳೀಯ ದಾರುಲ್ ಹುದಾ ಮೆನೇಜರ್ ಖಲೀಲ್ ಹಿಮಮಿ, ದಾರುಲ್ ಹಿಕ್ಮ ಮುದರ್ರಿಸ್ ಹಾಫಿಳ್ ರಂಶೀದ್ ಸಖಾಫಿ, ಹಮೀದ್ ಬೀಜಕೊಚ್ಚಿ, ಹಮೀದ್ ಸುಣ್ಣಮೂಲೆ, ಹನೀಫ್ ಹಾಜಿ ಇಂದ್ರಾಜೆ, ವೈ.ಕೆ ಸುಲೈಮಾನ್ ಹಾಜಿ, ಸಿದ್ದೀಕ್ ಇಮಾಮಿ, ಜಿಲ್ಲಾ ಕಾರ್ಯಕಾರಿ ಸಮಿತಿ ನಾಯಕರು ಉಪಸ್ಥಿತರಿದ್ದರು.
ಕ್ಯಾಂಪ್‌ನಲ್ಲಿ ಸ್ನೇಹ ಚಹಾ ಕೂಟಕ್ಕೆ ವಿವಿಧ ರೀತಿಯ ತಿಂಡಿ ತಿನಿಸುಗಳು, ಪಾನೀಯ, ರಾತ್ರಿಯ ಭೋಜನದ ವ್ಯವಸ್ಥೆಯನ್ನು ಎಸ್‌ವೈಎಸ್ ಸುಳ್ಯ ಝೋನ್ ಸಮಿತಿ ಹಾಗೂ ಸ್ಥಳೀಯ ಸ್ವಾಗತ ಸಮಿತಿಯವರು ಮಾಡಿದರು. ಸ್ವಯಂ ಸೇವಕರಾಗಿ ದಾರುಲ್ ಹುದಾ ವಿದ್ಯಾರ್ಥಿಗಳು ಕಾರ್ಯನಿರ್ವಹಿಸಿದರು. ಪ್ರಧಾನ ಕಾರ್ಯದರ್ಶಿ ಸ್ವಾಲಿಹ್ ಮುರ ಸ್ವಾಗತಿಸಿದರು. ಜಿಲ್ಲಾ ಕೋಶಾಧಿಕಾರಿ ಸಂಶುದ್ದೀನ್ ವಂದಿಸಿರು.