ಪುತ್ತೂರು: 33 ಕೆ.ವಿ ಕುಂಬ್ರ ವಿದ್ಯುತ್ ಉಪಕೇಂದ್ರದಲ್ಲಿ ಹಾಲಿ ಇರುವ 5 ಎಂ.ವಿ.ಎ ಶಕ್ತಿ ಪರಿವರ್ತಕವನ್ನು 10 ಎಂ.ವಿ.ಎ ಶಕ್ತಿ ಪರಿವರ್ತಕದಿಂದ ಬದಲಾಯಿಸುವ ಕಾಮಗಾರಿಯನ್ನು ಕೈಗೊಳ್ಳಲಿರುವ ಹಿನ್ನಲೆಯಲ್ಲಿ ಡಿ.26 ಮತ್ತು 27 ರಂದು ಬೆಳಗ್ಗೆ 10 ರಿಂದ ಸಂಜೆ 5:30 ಗಂಟೆಯ ತನಕ ವಿದ್ಯುತ್ ಅಡಚಣೆಯಾಗಲಿದೆ.
33/11 ಕೆವಿ ಕುಂಬ್ರ ವಿದ್ಯುತ್ ಉಪಕೇಂದ್ರದಿಂದ ಹೊರಡುವ ಎಲ್ಲಾ 11 ಕೆವಿ (ದೇರ್ಲ, ಮದ್ದ, ತಿಂಗಳಾಡಿ, ಇರ್ದೆ, ಪಾಣಾಜೆ ಮತ್ತು ಸುಳ್ಯಪದವು) ಫೀಡರ್ಗಳಲ್ಲಿ ಕನಿಷ್ಠ 2 ರಿಂದ 3 ಗಂಟೆಯ ತನಕ ವಿದ್ಯುತ್ ಅಡಚಣೆಯಾಗಲಿರುವುದು. ಸಂಬಂಧಪಟ್ಟ ಪ್ರದೇಶದ ವಿದ್ಯುತ್ ಬಳಕೆದಾರರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ.
Home ಇತ್ತೀಚಿನ ಸುದ್ದಿಗಳು ನಾಳೆ(ಡಿ.26): ದೇರ್ಲ, ಮದ್ದ, ತಿಂಗಳಾಡಿ, ಇರ್ದೆ, ಪಾಣಾಜೆ ಮತ್ತು ಸುಳ್ಯಪದವುಗಳಲ್ಲಿ ವಿದ್ಯುತ್ ಅಡಚಣೆ