ಪುತ್ತೂರು: ಕಾಡಾನೆ ದಾಳಿಯಿಂದ ತತ್ತರಿಸಿರುವ ಮಾಡನ್ನೂರು ಗ್ರಾಮದ ಜನತೆಗೆ ಮತ್ತೆ ಸಂಕಷ್ಟ ಎದುರಾಗಿದೆ. ಡಿ.25ರಂದು ಮಾಡನ್ನೂರು ಗ್ರಾಮದ ಪೂವಂದೂರಿನ ನಾಲ್ಕು ಕಡೆಗಳಲ್ಲಿ ಕೃಷಿತೋಟಕ್ಕೆ ನುಗ್ಗಿದ ಕಾಡಾನೆಗಳು ಕೃಷಿಗೆ ಹಾನಿ ಮಾಡಿದ್ದು, ಕೃಷಿಕರು ಕಂಗಾಲಾಗಿದ್ದಾರೆ.
ಸ್ಥಳೀಯ ಕೃಷಿಕರಾದ ವಿದ್ಯಾ ಪೂವಂದೂರು, ಸ್ವಾತಿ ಪೂವಂದೂರು, ಮಹೇಶ್ ಪೂವಂದೂರು ಇವರ ತೋಟಕ್ಕೆ ನುಗ್ಗಿರುವ ಎರಡು ಕಾಡಾನೆಗಳು ಕೃಷಿಗೆ ಹಾನಿ ಮಾಡಿದ್ದು ಅಪಾರ ನಷ್ಟ ಸಂಭವಿಸಿದೆ. ಆನೆಯ ಉಪಟಳದಿಂದ ಬೇಸತ್ತಿರುವ ಸ್ಥಳೀಯ ಕೃಷಿಕರು ಮತ್ತು ಸಾರ್ವಜನಿಕರು ಸೂಕ್ತ ಕ್ರಮ ಕೈಗೊಂಡು ಪರಿಹಾರ ನೀಡುವಂತೆ ಅರಣ್ಯ ಇಲಾಖೆಯನ್ನು ಒತ್ತಾಯಿಸಿದ್ದಾರೆ.