ಡ್ರಾಯಿಂಗ್ ಗ್ರೇಡ್ ಪರೀಕ್ಷೆಯಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಗೆ 100% ಫಲಿತಾಂಶ

0

ಪುತ್ತೂರು: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಬೆಂಗಳೂರು. ಇವರು ಈ ಶೈಕ್ಷಣಿಕ ಸಾಲಿನ ನವಂಬರ್ ತಿಂಗಳಲ್ಲಿ ನಡೆಸಿದ ಲೋವರ್ ಗ್ರೇಡ್ ಮತ್ತು ಹೈಯರ್ ಗ್ರೇಡ್ ಡ್ರಾಯಿಂಗ್ ಪರೀಕ್ಷೆಗಳಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಒಟ್ಟು 38 ವಿದ್ಯಾರ್ಥಿಗಳು ಹಾಜರಿದ್ದು, ಎಲ್ಲಾ ವಿದ್ಯಾರ್ಥಿಗಳು ತೇರ್ಗಡೆಯಾಗುವ ಮೂಲಕ ಶಾಲೆಯು 100% ಫಲಿತಾಂಶವನ್ನು ಪಡೆದಿರುತ್ತದೆ. ಡ್ರಾಯಿಂಗ್ ಗ್ರೇಡ್ ಪರೀಕ್ಷೆಯ ಹೈಯರ್ ಗ್ರೇಡ್ ವಿಭಾಗದಲ್ಲಿ 25 ವಿದ್ಯಾರ್ಥಿಗಳು ಹಾಜರಾಗಿದ್ದು 19 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾಗಿರುತ್ತಾರೆ.

ಹೈಯರ್ ಗ್ರೇಡ್ ವಿಭಾಗದಲ್ಲಿ ನಿಲಿಷ್ಕ ಕೆ. (88.33%), ಸಾನ್ವಿ ಪಿ (84.33%), ಪೃತಾ ದಯಾನಂದ (81.67%), ಎಂ ಸಚ್ಚಿದಾನಂದ ಆಚಾರ್ಯ (80%), ವೈಷ್ಣವಿ ಕೆ.ಎನ್ ರಾವ್(79.5%), ಪ್ರೀತಿ ಪ್ರಭು (79.17%), ಸುಪ್ರಜ ರಾವ್ (78.67%),ಶ್ರವಣ್ ಎಸ್ (78.5%) , ಹಂಸಿನಿ ಹೆಚ್ (78.12%), ಅವನಿ ಘಾಟೆ ಡಿ (78.17%) , ಯತಿನ್ ಬಿ ಎಸ್ (77%) , ಪ್ರಥಮ್ (74.5%), ಮೋಕ್ಷಾ (74%) , ಪ್ರಾಪ್ತಿ ಟಿ.ಎನ್ (73.5%), ಅನ್ವಿತ ವಿ (73.33%) , ಸ್ನೇಹಿತ ಡಿ ( 71.67%) , ಸಾತ್ಯಕಿ ಎಂ ಹೆಬ್ಬಾರ್ ( 71.17%), ವರುಣ್ ಎಂ ವಿ (71%), ದೀಕ್ಷಾ ಪಿ (70.83%) ಡಿಸ್ಟಿಂಕ್ಷನ್ ನಲ್ಲಿ ಉತ್ತೀರ್ಣರಾಗಿದ್ದು, ಪವನ್ ಸುರೇಶ್ ಭಟ್ (69.83%), ಅಕ್ಷರ್ ಜಿ ಸಿ (68%) , ಅನ್ವೇಷ್ ಕೆ ಎಚ್ (67.17%), ಶ್ರೇಯ ವಿ ರೈ (67%), ಚಿಂತನ್ ಪಿ (65.67%) ಪ್ರಥಮ ಶ್ರೇಣಿ ಹಾಗೂ ಜಿ ಪ್ರಶ್ವಿತ್ ಆಚಾರ್ಯ (54.5%) ಇವರು ದ್ವಿತೀಯ ಶ್ರೇಣಿ ಯಲ್ಲಿ ಉತ್ತೀರ್ಣರಾಗಿರುತ್ತಾರೆ.


ಲೋವರ್ ಗ್ರೇಡ್ ವಿಭಾಗದಲ್ಲಿ ಒಟ್ಟು 13 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು ಅದರಲ್ಲಿ 10 ವಿದ್ಯಾರ್ಥಿಗಳು ಅತ್ಯುತ್ತಮ ( ಡಿಸ್ಟಿಂಕ್ಷನ್ ) ಶ್ರೇಣಿಯಲ್ಲಿ, 3 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಲೋವರ್ ಗ್ರೇಡ್ ವಿಭಾಗದಲ್ಲಿ ಚಿಂತನ ಎಂ (83.5%), ಕ್ಷಮಾ ಜೆ ರೈ (79.67%), ಪೂರ್ವಿ ಜೆ ಎ (78.17%), ಅವನಿ ಎಸ್ ವಿ (76.83%), ಮಾನ್ಯ
(73%), ಧನ್ವಿ ಡಿ ಪಿ (71.83%), ವಿಶಾಂತ್ ಜೆ. (71.17%), ಶ್ರೀಯಾ ಎಸ್ ರೈ (71.17%) ಶ್ರಾವಣಿ ಪಿ ( 71%), ಶ್ಯಮಂತ್ ವೈ ಬಿ (70.83%)
ಡಿಸ್ಟಿಂಕ್ಷನ್ ನಲ್ಲಿ ಉತ್ತೀರ್ಣರಾಗಿದ್ದು, ಕೃತಿಕ್ ಆರ್ (68.5%), ಪ್ರದ್ಯುಮ್ನ (63.83%), ಅನ್ವಿತ್ ಬಿ (63.5%) ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ. ಈ ಎಲ್ಲಾ ವಿದ್ಯಾರ್ಥಿಗಳಿಗೆ ಶಾಲಾ ಚಿತ್ರಕಲಾ ಶಿಕ್ಷಕರಾದ ಗೀತಾ ಬಿ ಎಸ್ , ರಾಜೇಶ್ವರಿ ಮತ್ತು ಪವಿತ್ರ ತರಬೇತಿ ನೀಡಿರುತ್ತಾರೆ ಎಂದು ಶಾಲಾ ಮುಖ್ಯ ಗುರುಗಳು ತಿಳಿಸಿರುತ್ತಾರೆ.

LEAVE A REPLY

Please enter your comment!
Please enter your name here