ಪುತ್ತೂರು: ಕೋಡಿಂಬಾಡಿ ಹಾಲು ಉತ್ಪಾದಕರ ಸಹಕಾರ ಸಂಘದ ಮಾಸಿಕ ಸಭೆಯು ಡಿ.27ರಂದು ಸಂಘದ ಕಛೇರಿಯಲ್ಲಿ ಅಧ್ಯಕ್ಷ ಜಗನ್ನಾಥ ಶೆಟ್ಟಿ ನಡುಮನೆಯವರ ಅಧ್ಯಕ್ಷತೆಯಲ್ಲಿ ನಡೆಯಿತು. ಈ ಸಭೆಯಲ್ಲಿ ಡಿ.26ರಂದು ನಿಧನರಾದ ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್‌ರವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಸಭೆಯಲ್ಲಿ ಸಂಘದ ಉಪಾಧ್ಯಕ್ಷ ಕೇಶವ ಗೌಡ ಬರೆಮೇಲು, ನಿರ್ದೇಶಕರಾದ ರತ್ನವರ್ಮ ಆಳ್ವ ಮಿತ್ತಳಿಕೆ, ಎಲ್ಯಣ್ಣ ಗೌಡ ಮೇಲಿನಹಿತ್ಲು, ಸಂತೋಷ್ ಕುಮಾರ್ ರೈ ಕೆದಿಕಂಡೆಗುತ್ತು, ಬಾಬು ಆಚಾರ್ಯ ಕೊಂಬಕೋಡಿ, ಅಶೊಕ ಗೌಡ ಮೇಲಿನಹಿತ್ಲು, ರೇಣುಕಾ ಎಂ ರೈ ಮಠಂತಬೆಟ್ಟು, ಲೀಲಾವತಿ ಪರಬಪಾಲು ಉಪಸ್ಥಿತರಿದ್ದರು.
ಇತ್ತೀಚೆಗೆ ಮರಣ ಹೊಂದಿದ ಸಂಘದ ಹಿರಿಯ ಸದಸ್ಯ ಲಿಂಗಪ್ಪ ಗೌಡ ಪಿಲಿಗುಂಡರವರ ಮನೆಯವರಿಗೆ ಒಕ್ಕೂಟದಿಂದ ನೀಡುವ ಪರಿಹಾರ ಧನವನ್ನು ಮೃತರ ಪತ್ನಿ ಮೋಹಿನಿಯವರಿಗೆ ಹಸ್ತಾಂತರಿಸಲಾಯಿತು. ಸಂಘದ ಕಾರ್ಯದರ್ಶಿ ರಮೇಶ್ ಕೆ ಸ್ವಾಗತಿಸಿ ವಂದಿಸಿದರು, ಸಿಬ್ಬಂದಿಗಳಾದ ನಾರಾಯಣ ಪೂಜಾರಿ ಮತ್ತು ಕವಿತಾ ಸಹಕರಿಸಿದರು