ಪುತ್ತೂರು: ಒಕ್ಕಲಿಗ ಸ್ವ ಸಹಾಯ ಟ್ರಸ್ಟ್ ನ ದಶಮಾನೋತ್ಸವದ ಕಾರ್ಯಕ್ರಮದ ಅಂಗವಾಗಿ ನಡೆದ 50 ವರ್ಷ ದಾಂಪತ್ಯ ಜೀವನ ಪೂರೈಸಿದ ಮಾದರಿ ದಂಪತಿಗಳ ಸನ್ಮಾನ ಕಾರ್ಯಕ್ರಮದ ಸಮಾರೋಪ ಕಾರ್ಯಕ್ರಮ ಮಾಜಿ ಶಾಸಕರಾದ ಹಿರೇಬಂಡಾಡಿ ಸಂಜೀವ ಮಠಂದೂರು ಇವರ ಮನೆಯಲ್ಲಿ ಡಿ.28 ಬೆಳಿಗ್ಗೆ 9.30 ನಡೆಯಲಿದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾಜಿ ಶಾಸಕ ಹಾಗೂ ಒಕ್ಕಲಿಗ ಗೌಡ ಸೇವಾ ಸಂಘದ ಸಲಹಾ ಸಮಿತಿ ಅಧ್ಯಕ್ಷರಾದ ಸಂಜೀವ ಮಠಂದೂರು ವಹಿಸಲಿದ್ದು,ಮುಖ್ಯ ಅಥಿತಿಗಳಾಗಿ ಒಕ್ಕಲಿಗ ಸ್ವ ಸಹಾಯ ಟ್ರಸ್ಟ್ ನ ಅಧ್ಯಕ್ಷರಾದ ಡಿ ವಿ ಮನೋಹರ್,ಒಕ್ಕಲಿಗ ಗೌಡ ಸೇವಾ ಸಂಘದ ತಾಲೂಕು ಅಧ್ಯಕ್ಷರಾದ ರವಿ ಮುಂಗ್ಲಿಮನೆ,ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಚಿದಾನಂದ ಬೈಲಾಡಿ, ಟ್ರಸ್ಟ್ ನ ದಶಮಾನೋತ್ಸಹ ಸಮಿತಿ ಗೌರವಾಧ್ಯಕ್ಷ ಎ ವಿ ನಾರಾಯಣ, ಅಧ್ಯಕ್ಷರಾದ ಗೋಪಾಲಕೃಷ್ಣ ಪಟೇಲ್ ಚಾರ್ವಾಕ,ಹಿರೇಬಂಡಾಡಿ ಗ್ರಾಮ ಮಾಗಣೇ ಗೌಡರು ಯಾನಪ್ಪ ಗೌಡ ಬಂಡಾಡಿ ಭಾಗವಹಿಸಲಿದ್ದಾರೆ ಎಂದು ಒಕ್ಕಲಿಗ ಸ್ವ ಸಹಾಯ ಟ್ರಸ್ಟ್, ದಶಮಾನೋತ್ಸವ ಸಮಿತಿ,ಒಕ್ಕಲಿಗ ಗೌಡ ಸೇವಾ ಸಂಘ,ಒಕ್ಕಲಿಗ ಸ್ವ ಸಹಾಯ ಸಂಘಗಳ ಒಕ್ಕೂಟ,ಯುವ ಘಟಕ ,ಮಹಿಳಾ ಘಟಕ ಹಿರೇಬಂಡಾಡಿ ಗ್ರಾಮ ಇದರ ಪದಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.