ಬರುವ ದಿನಗಳಲ್ಲಿ ಇನ್ನಷ್ಟು ಯೋಜನೆಯ ಗುರಿಯಿದೆ – ಡಾ.ದೀಪಕ್ ರೈ
ಪುತ್ತೂರು ಕ್ಲಬ್ ಚುನಾವಣೆ ಎಲ್ಲಾ ಕ್ಲಬ್‌ಗಳಿಗೆ ಮಾದರಿ – ಚನಿಲ ತಿಮ್ಮಪ್ಪ ಶೆಟ್ಟಿ
ಪುತ್ತೂರು: ದಿ ಪುತ್ತೂರು ಕ್ಲಬ್ ಹತ್ತು ವರ್ಷ ಪೂರೈಸಿದ ಸಂಭ್ರಮದಲ್ಲಿ ಕ್ಲಬ್‌ನ ಅಧ್ಯಕ್ಷರಾಗಿದ್ದ ಡಾ. ದೀಪಕ್ ರೈ ಅವರು ಅವಿರೋಧವಾಗಿ ಪುನರಾಯ್ಕೆಗೊಂಡಿದ್ದಾರೆ. ಡಿ.27ರಂದು ಸಂಜೆ ಮರೀಲು ನಲ್ಲಿರುವ ದಿ ಪುತ್ತೂರು ಕ್ಲಬ್‌ನಲ್ಲಿ ಕ್ಲಬ್‌ನ ಸದಸ್ಯರ ಸಭೆಯಲ್ಲಿ ಈ ಆಯ್ಕೆ ಪ್ರಕ್ರಿಯೆ ನಡೆದಿದ್ದು ಕ್ಲಬ್‌ನ ಎಲ್ಲಾ ಪದಾಧಿಕಾರಿಗಳೂ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ.
ಅಧ್ಯಕ್ಷರಾಗಿ ಡಾ.ದೀಪಕ್ ರೈ, ಉಪಾಧ್ಯಕ್ಷರಾಗಿ ದೀಪಕ್ ಕೆ.ಪಿ, ಕೋಶಾಧಿಕಾರಿಯಾಗಿ ದಿವಾಕರ್ ಕೆ.ಪಿ, ಕಾರ್ಯದರ್ಶಿಯಾಗಿ ವಿಶ್ವಾಸ್ ಶೆಣೈ, ಜಂಟಿ ಕಾರ್ಯದರ್ಶಿಯಾಗಿ ಪ್ರಭಾಕರ ಎಂ ಅವರು ಆಯ್ಕೆಗೊಂಡಿದ್ದಾರೆ. ಉಳಿದಂತೆ ನಿರ್ದೇಶಕರಾಗಿ ರೂಪೇಶ್ ಶೇಟ್ ಚಂದ್ರಶೇಖರ್, ಬೂಡಿಯಾರು ರಾಧಾಕೃಷ್ಣ ರೈ, ಪ್ರಶಾಂತ್ ಶೆಣೈ, ಶಿವರಾಮ ಆಳ್ವ, ಮನೋಜ್ ರೈ ನಿತಿನ್ ಪಕ್ಕಳ, ಝೇವಿಯರ್ ಡಿಸೋಜಾ, ಜಯಂತ ನಡುಬೈಲು, ಸಚ್ಚಿದಾನಂದ ಅವರನ್ನು ಆಯ್ಕೆ ಮಾಡಲಾಗಿದೆ. ಕರಾವಳಿ ಅಭಿವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿಯವರು ಚುನಾವಣಾಧಿಕಾರಿಯಾಗಿ ಆಯ್ಕೆ ಪ್ರಕ್ರಿಯೆ ನಡೆಸಿಕೊಟ್ಟರು.
ಬರುವ ದಿನಗಳಲ್ಲಿ ಇನ್ನಷ್ಟು ಯೋಜನೆಯ ಗುರಿಯಿದೆ:
ಅಧ್ಯಕ್ಷರಾಗಿ ಆಯ್ಕೆಯದಾ ಬಳಿಕ ಡಾ.ದೀಪಕ್ ರೈ ಅವರು ಮಾತನಾಡಿ 10 ವರ್ಷಗಳಲ್ಲಿ ಕ್ಲಬ್ ಅತ್ಯದ್ಭುತ ಪ್ರಗತಿಯನ್ನು ಸಾಧಿಸಿದೆ.1300 ಸದಸ್ಯರನ್ನು ಹೊಂದಿರುವ ಈ ಕ್ಲಬ್ ದಾಖಲೆಯ ಬೆಳವಣಿಗೆ ಕಂಡಿದೆ. 94 ಕ್ಲಬ್‌ಗಳ ಒಡಂಬಡಿಕೆಯೂ ಇದೆ. ಇಲಿ ಸುಸಜ್ಜಿತ ಈಜುಕೊಳ, ರೂಮ್‌ಗಳು, ತೆರೆದ ಸಭಾಂಗಣ, ದಕ್ಷಿಣ ಕನ್ನಡದಲ್ಲೇ ಪ್ರಥಮ ಸಿಂಥೆಟಿಕ್ ಟೆನ್ನಿಸ್ ಕೋರ್ಟ್ ಇದೆ. ಈಗಾಗಲ ಸೆಂಟ್ರಲೈಸ್ ಹವಾನಿಯಂತ್ರಿತ ಕೊಠಡಿಗಳ ನಿರ್ಮಾಣ ಆಗುತ್ತಿದೆ. ಅದನ್ನು ಸದಸ್ಯರು ಒಮ್ಮೆ ವೀಕ್ಷಣೆ ಮಾಡಿದಾಗ ಯೋಜನೆ ರೂಪು ರೇಶೆಗಳು ನಿಮಗೆ ಅರ್ಥ ಆಗುತ್ತವೆ. ನನಗೆ ಹೊಸ ವಿಚಾಗಳು ತಲೆಗೆ ಬಂದಾಗ ಅದನ್ನು ಕಾರ್ಯಗತ ಮಾಡುವ ಗುರಿಯನ್ನು ಇಟ್ಟುಕೊಂಡಿರುತ್ತೇನೆ. ಬರುವ ದಿನಗಳಲ್ಲಿ ಸದಸ್ಯತ್ವ ಜಾಸ್ತಿಯಾದರೆ ಇನ್ನಷ್ಟು ಹೊಸ ಯೋಜನೆಗಳನ್ನು ಕಾರ್ಯಗತಗೊಳಿಸಲು ಸಾಧ್ಯವಿದೆ. ಕ್ರಿಕೆಟ್ ಬೌಲಿಂಗ್ ಪಿಚ್, ಗಾಲ್ಫ್ ಸಹಿತ ಹಲವು ಯೋಜನೆ ನನ್ನ ಮುಂದಿದೆ. ಈಗ ಪುತ್ತೂರು ಕ್ಲಬ್ ಸದಸ್ಯರಾಗಬೇಕೆಂದು ಕಣ್ಣು ಮುಚ್ಚಿ ಬರುತ್ತಾರೆ. 10 ವರ್ಷದ ಹಿಂದೆ ಸದಸ್ಯತನ ಮಾಡಲು ಕಷ್ಟ ಪಟ್ಟಿದ್ದೇವೆ. ಹಾಗಾಗಿ ಬ್ಯುಸಿನೆಸ್ ಕೊಡಿ ಕ್ಲಬ್ ಇನ್ನಷ್ಟು ಉತ್ತುಂಗಕ್ಕೆ ಏರುವಂತೆ ನಾನು ಭರವಸೆ ನೀಡುತ್ತೇನೆ ಎಂದರು.
ಪುತ್ತೂರು ಕ್ಲಬ್ ಚುನಾವಣೆ ಎಲ್ಲಾ ಕ್ಲಬ್‌ಗಳಿಗೆ ಮಾದರಿ:
ಕ್ಲಬ್‌ನ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಸಿಕೊಟ್ಟ ಚುನಾವಣಾಧಿಕಾರಿ ಚನಿಲ ತಿಮ್ಮಪ್ಪ ಶೆಟ್ಟಿಯವರು ಮಾತನಾಡಿ ಹಲವು ಪ್ರಥಮಗಳಲ್ಲಿ ಪುತ್ತೂರು ಕ್ಲಬ್ ಮಾಡುವ ಮೂಲಕ ಇತರ ಕ್ಲಬ್‌ಗಳಿಗೆ ಸ್ಪರ್ಧಾತ್ಮಕವಾಗಿ ಮುಂಚೂಣಿಯಲ್ಲಿದೆ. ಅಂತಹ ಕ್ಲಬ್ ಚುನಾವಣೆಯಲ್ಲೂ ಎಲ್ಲಾ ಪದಾಧಿಕಾರಿಗಳನ್ನು ಅವಿರೋಧವಾಗಿ ಆಯ್ಕೆ ಮಾಡುವ ಮೂಲಕ ಇತರ ಕ್ಲಬ್‌ಗಳಿಗೆ ಮಾದರಿ ಕ್ಲಬ್‌ಆಗಿ ಮೂಡಿ ಬಂದಿದೆ. ಕ್ಲಬ್‌ನ ಸದಸ್ಯರು ಒಗ್ಗಟ್ಟಿನಿಂದ ನೂತನ ಆಡಳಿತ ಮಂಡಳಿಯನ್ನು ಆಯ್ಕೆ ಮಾಡಿದ್ದಾರೆ ಎಂದರು. ಕ್ಲಬ್‌ನ ಸದಸ್ಯರಾದ ಜೈರಾಜ್ ಭಂಡಾರಿ ನೋಣಾಲು, ಎ.ಜಗಜೀವನ್‌ದಾಸ್ ರೈ, ಡಾ. ಉಜ್ವಲ್ ಊರುಬೈಲು, ಕಿಶೋರ್, ರಮೇಶ್, ಕೃಷ್ಣ ರೈ ಸಹಿತ ಹಲವಾರು ಮಂದಿ ಕ್ಲಬ್‌ನ ಬೆಳವಣಿಗೆಯ ಕುರಿತು ಸಲಹೆ ನೀಡಿದರು. ಜಯಕುಮಾರ್ ನಾಯರ್, ಚಿಕ್ಕಪ್ಪ ನಾಕ್, ಭಾಸ್ಕರ್ ರೈ ಕಂಟ್ರಮಜಲು, ಉದಯಶಂಕರ್ ಶೆಟ್ಟಿ, ಪ್ರಶಾಂತ್ ನಾಯಕ್, ಸಿಝ್ಲರ್ ಪ್ರಸನ್ನ ಕುಮಾರ್ ಶೆಟ್ಟಿ, ನವಿತ್ ಶೆಟ್ಟಿ ಸಹಿತ ನೂರಾರು ಮಂದಿ ಸದಸ್ಯರು ಸಭೆಯಲ್ಲಿ ಪಾಲ್ಗೊಂಡರು. ನಿದೇಶಕ ಸಚ್ಚಿದಾನಂದ ವಂದಿಸಿದರು. ವಿಶ್ವಾಸ್ ಶೆಣೈ ಕಾರ್ಯಕ್ರಮ ನಿರೂಪಿಸಿದರು.