ಪುತ್ತೂರು: ಕಾರೊಂದು ರಸ್ತೆ ಬದಿಯ ಪ್ರಪಾತಕ್ಕೆ ಬಿದ್ದು, ಕಾರಿನಲ್ಲಿದ್ದ ಸುಳ್ಯ ಜಟ್ಟಿಪಳ್ಳ ಮೂಲದ ಚಾಲಕ ಸಹಿತ ಮೂವರು ಮೃತಪಟ್ಟ ಘಟನೆ ಪುತ್ತೂರು ಬೈಪಾಸ್ ರಸ್ತೆ ಪರ್ಲಡ್ಕ ಸಮೀಪ ನಡೆದಿದ್ದು, ಘಟನೆಗೆ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಸಂತಾಪ ವ್ಯಕ್ತಪಡಿಸಿದ್ದಾರೆ.
ʼಇದು ಅತ್ಯಂತ ದುಖದ ವಿಚಾರ, ಪೂಜೆ ಮುಗಿಸಿ ಮನೆಗೆ ತೆರಳುವ ವೇಳೆ ಈ ದುರಂತ ನಡೆದಿದೆ. ಘಟನೆಯು ಅತ್ಯಂತ ದುಃಖದ ವಿಚಾರವಾಗಿದ್ದು, ಕುಟುಂಬಕ್ಕೆ ನೋವು ಸಹಿಸುವ ಶಕ್ತಿಯನ್ನು ಭಗವಂತನು ಕರುಣಿಸಲಿʼ ಎಂದು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಸಂತಾಪ ವ್ಯಕ್ತಪಡಿಸಿದ್ದಾರೆ.