ಪುತ್ತೂರು: ಸಂಪ್ಯ ಶ್ರೀ ಕ್ಷೇತ್ರ ಉದಯಗಿರಿಯಲ್ಲಿ ಬ್ರಹ್ಮಕಲಶೋತ್ಸವದ ಅಂಗವಾಗಿ ಧೀಶಕ್ತಿ ಮಹಿಳಾ ಯಕ್ಷ ಬಳಗ ಪುತ್ತೂರು ಇವರಿಂದ ಶೇಣಿ ಗೋಪಾಲಕೃಷ್ಣ ಭಟ್ ವಿರಚಿತ “ಶ್ರೀಮತಿ ಪರಿಣಯ ” ಯಕ್ಷಗಾನ ತಾಳಮದ್ದಳೆ ನಡೆಯಿತು. ಹಿಮ್ಮೇಳದಲ್ಲಿ ಭಾಗವತರಾಗಿ ಕುಮಾರಿ ರಚನಾ ಚಿದ್ಗಲ್ ,ಮದ್ದಳೆಯಲ್ಲಿ ಲಕ್ಷ್ಮೀಶ ಶಗ್ರಿತ್ತಾಯ, ಚೆಂಡೆಯಲ್ಲಿ, ಮಾ. ಅದ್ವೈತ ಕನ್ಯಾನ , ಚಕ್ರತಾಳದಲ್ಲಿ ಚೈತಾಲಿ ಕಾಂಚೋಡು ಸಹಕರಿಸಿದ್ದರು. ಮುಮ್ಮೇಳದಲ್ಲಿ, ಪದ್ಮಾ ಕೆ ಆರ್ ಆಚಾರ್ಯ (ನಾರದ),ಜಯಲಕ್ಷ್ಮಿ ವಿ ಭಟ್ ( ಅಂಬರೀಷ), ಶಾಲಿನಿ ಅರುಣ್ ಶೆಟ್ಟಿ (ಪರ್ವತ), ಶುಭಾ ಪಿ ಆಚಾರ್ಯ( ಮಹಾರಾಣಿ), ಕು| ವೈಷ್ಣವಿ ಜೆ ರಾವ್ (ಮಹಾವಿಷ್ಣು), ಕು| ಅಭಿಜ್ಞಾ ರಾವ್ ದಾಳಿಂಬ (ಶ್ರೀಮತಿ) ಭಾಗವಹಿಸಿದ್ದರು. ದೇವಳದ ಅರ್ಚಕರು ಕಲಾವಿದರಿಗೆ ದೇವರ ಪ್ರಸಾದವನ್ನು ನೀಡಿ ಸತ್ಕರಿಸಿದರು. ದೇವಸ್ಥಾನದ ಬ್ರಹ್ಮಕಲಶೋತ್ಸವ ಸಮಿತಿಯ ರಾಧಾಕೃಷ್ಣ ಬೋರ್ಕರ್ ಕಾರ್ಯಕ್ರಮ ನಿರೂಪಿಸಿದರು. ಸಂಘದ ನಿರ್ದೇಶಕರಾದ ಪದ್ಮಾ ಕೆ ಆರ್ ಆಚಾರ್ಯ ಪಾತ್ರ ಪರಿಚಯ ಮಾಡಿ, ವಂದಿಸಿದರು.